ಬೆಂಗಳೂರು: “ನಮ್ಮ ಮೆಟ್ರೋ’ದ ಟ್ರಿನಿಟಿ ನಿಲ್ದಾಣದ ಬಳಿಯ ಕಂಬದ ಮೇಲ್ಭಾಗದಲ್ಲಿ ಮಂಗಳವಾರ ಜೇನುಗೂಡಿನ ಮಾದರಿಯ ರಂಧ್ರವೊಂದು ಕಾಣಸಿಕೊಂಡಿದ್ದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.
ಕಂಬದ ಮೇಲ್ಭಾಗದಲ್ಲಿ ಅಳವಡಿಸಿರುವ ವಯಾಡಕ್ಟ್‌ನಲ್ಲಿ ಡಕ್ಟ್ ನಿರ್ಮಾಣ ವೇಳೆ ಬಳಸಿದಂತಹ ಮರಳು ಹಾಗೂ ಸಿಮೆಂಟ್
ಉದುರಿದೆ. ಇದರಿಂದಾಗಿ ವಯಾಡಕ್ಟ್ ವಾಲಿದಂತೆ ಭಾಸವಾಗುತ್ತಿದೆ. ಇದರ ದುರಸ್ತಿಗಾಗಿ ಸದ್ಯದಲ್ಲೇ ಎರಡು ದಿನಗಳ ಕಾಲ ಮೈಸೂರು ರಸ್ತೆ – ಬೈಯ್ಯಪ್ಪನಹಳ್ಳಿ ಮೆಟ್ರೋ ಸೇವೆ ಸ್ಥಗಿತ ಮಾಡಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.
ಮಂಗಳವಾರ ರಾತ್ರಿಯಿಂದಲೇ ದುರಸ್ತಿ ಶುರುವಾಗಿದ್ದು 10 ದಿನ ನಡೆಯ ಲಿದೆ.””ಇದಕ್ಕೆ ಕಾರಣವೇನು ಎಂಬುದು ಪರಿಶೀಲನೆ ಬಳಿಕ ತಿಳಿಯಲಿದ್ದು, ಸುರಕ್ಷತಾ ಕ್ರಮವಾಗಿ ಕಂಬದ ಎರಡೂ ಬದಿಯಲ್ಲಿ ಕಬ್ಬಿಣದ ಸರಳುಗಳನ್ನು ಆಧಾರ ನೀಡಲಾಗಿದೆ ಎಂದು ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಜಯ್ ಸೇs… ಹೇಳಿದ್ದಾರೆ.