Advertisement
ಈ ಮೊದಲೇಯೋಜನೆ ಸಾಕಷ್ಟು ವಿಳಂಬವಾಗಿದೆ. ಕೋವಿಡ್‌ನಿಂದ ಮತ್ತಷ್ಟು ತಡವಾಗುತ್ತಿದೆ. ಹಾಗಾಗಿ, 18.36 ಕಿ.ಮೀ. ಉದ್ದದ ಮಾರ್ಗಕ್ಕೆ ಈಗಾಗಲೇ ಟೆಂಡರ್ ತೆರೆಯಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮೌಖೀಕ ಸೂಚನೆ ನೀಡಿದ್ದಾರೆ. ಈಗ ಇನ್ನೂ ಒಂದು ಹೆಜ್ಜೆ ಮುಂದೆಹೋಗಿ ರಾಜ್ಯಸರ್ಕಾರದಿಂದಲೇ ಅನುಮೋದನೆ ಪಡೆದು, ಟೆಂಡರ್ ಅವಾರ್ಡ್ ಮಾಡುವ ಮೂಲಕ ಕಾಮಗಾರಿಗೆ ಚಾಲನೆ ನೀಡಲು ಉದ್ದೇಶಿಸಲಾಗಿದೆ.
Related Articles
Advertisement
“ನಮ್ಮ ಮೆಟ್ರೋ’2ಎ ಅಡಿ 18.36ಕಿ.ಮೀ. ಮತ್ತು 2ಬಿಅಡಿ36.51ಕಿ.ಮೀ. ನಿರ್ಮಾಣಕ್ಕಾಗಿ ಏಷಿಯನ್ ಡೆವಲಪ್‌ಮೆಂಟ್ ಬ್ಯಾಂಕ್ (ಎಡಿಬಿ) ಸುಮಾರು 3,760 ಕೋಟಿ ರೂ. ನೆರವು ನೀಡಲು ಮುಂದೆಬಂದಿದೆ. ಆದರೆ, ಇದಕ್ಕೆ ಒಂದು ಷರತ್ತನ್ನೂ ವಿಧಿಸಿದೆ. ಅದರಂತೆ ನಿಗಮದ ಹೊರಗಿನಿಂದ ಟೆಂಡರ್ ಮೂಲಕ ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್ ಕನ್ಸಲ್ಟೆಂಟ್ ಅನ್ನು ನೇಮಿಸಬೇಕು ಎನ್ನುವುದಾಗಿತ್ತು. ಸಾಮಾನ್ಯವಾಗಿ ಈ ತಂಡದಲ್ಲಿ ಸುಮಾರು 30ರಿಂದ 40 ಜನ ತಜ್ಞ ಎಂಜಿನಿಯರ್ ಗಳಿರುತ್ತಾರೆ. ಇದು ನಿಗಮ ನಿರ್ಮಿಸುವ ಸಿವಿಲ್ ಕಾಮಗಾರಿಯ
ಗುಣಮಟ್ಟ ಪರಿಶೀಲನೆ ನಡೆಸಿ, ಅನುಮೋದನೆ ನೀಡುತ್ತದೆ. ಈ ಮಧ್ಯೆ ಬಿಎಂಆರ್‌ಸಿಎಲ್‌ನ 200-250 ಎಂಜಿನಿಯರ್‌ಗಳ ಕನ್ಸಲ್ಟೆನ್ಸಿ ತಂಡವೂ ಇದೆ. ಅದೂ ಆಗಾಗ್ಗೆ ಗುಣಮಟ್ಟ ಪರಿಶೀಲನೆ ನಡೆಸಿ, ನಿಗಮಕ್ಕೆ ಮಾರ್ಗದರ್ಶನ ನೀಡುತ್ತಿರುತ್ತದೆ. ಟೆಂಡರ್ ಸಲ್ಲಿಕೆಗೆ ಅಕ್ಟೋಬರ್ 10 ಕೊನೆಯ ದಿನವಾಗಿದ್ದು, ಅ. 20ರಂದು ಮಧ್ಯಾಹ್ನ 3.30ಕ್ಕೆ ಟೆಂಡರ್ ತೆರೆಯಲಾಗುವುದು. 48 ತಿಂಗಳ ಗುತ್ತಿಗೆ ಇದಾಗಿದೆ.
ಇನ್ನು ಈಗಾಗಲೇ ಬಿಎಂಆರ್‌ಸಿಎಲ್ ಯೋಜನೆಯ ಸಿಲ್ಕ್ ಬೋರ್ಡ್ ಜಂಕ್ಷನ್-ಎಚ್ ಬಿಆರ್ ಲೇಔಟ್ ಹಾಗೂ ಎಚ್‌ಬಿಆರ್ ಲೇಔಟ್ -ವಿಮಾನ ನಿಲ್ದಾಣ ಮಾರ್ಗಗಳಿಗೆ ಎರಡು ಕಂಪನಿಗಳನ್ನುಸಮಗ್ರವಿನ್ಯಾಸಸಮಾಲೋಚಕರನ್ನಾಗನಿಯೋಜಿಸಿದೆ.
ಸಂಪನ್ಮೂಲ ಕ್ರೋಡೀಕರಣ : ಒಂದು ವೇಳೆಕೇಂದ್ರ ನಂತರದಲ್ಲಿ ಅನುಮತಿ ನಿರಾಕರಿಸಿದರೆ, ಯೋಜನೆಯನ್ನು ಸಾರ್ವಜನಿಕ- ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯಲ್ಲಿ ಅನುಷ್ಠಾನಗೊಳಿಸಲೂ ಅವಕಾಶ ಇದೆ. ಇದಕ್ಕಾಗಿ ಈ ಹಿಂದೆ ಇದೇ ಮಾರ್ಗದಲ್ಲೇ ಪರಿಚಯಿಸಲು ಉದ್ದೇಶಿಸಲಾಗಿದ್ದ ವಿನೂತನ ಮಾದರಿಯಲ್ಲಿ ಆರ್ಥಿಕ ಸಂಪನ್ಮೂಲ ಕ್ರೋಡೀಕರಣ (ಇನ್ನೋವೇಟಿವ್ ಫಂಡ್) ಮಾಡಬಹುದು.
ಎರಡು ಪ್ಯಾಕೇಜ್‌ಗಳಾಗಿ ಟೆಂಡರ್ ಆಹ್ವಾನ : ಹೊರವರ್ತುಲ ರಸ್ತೆ (ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್-ಕೆ.ಆರ್. ಪುರ)ಯ ಮೆಟ್ರೋ ಮಾರ್ಗವನ್ನು ಎರಡು ಪ್ಯಾಕೇಜ್‌ಗಳಲ್ಲಿ ಟೆಂಡರ್ ಆಹ್ವಾನಿಸಲಾಗಿದೆ. ಅವುಗಳ ವಿವರ ಹೀಗಿದೆ.
– ವಿಜಯಕುಮಾರ್ ಚಂದರಗಿ