Advertisement

ರಾಯಚೂರು ವಿವಿಗೆ ಮಹರ್ಷಿ ವಾಲ್ಮೀಕಿ ಹೆಸರಿಡಿ

06:04 AM May 23, 2020 | Suhan S |

ರಾಯಚೂರು: ನೂತನವಾಗಿ ಸ್ಥಾಪಿಸುತ್ತಿರುವ ರಾಯಚೂರು ವಿಶ್ವವಿದ್ಯಾಲಯಕ್ಕೆ ಆದಿಕವಿ ಮಹರ್ಷಿ ವಾಲ್ಮೀಕಿ ಹೆಸರಿಡುವಂತೆ ರಾಯಚೂರು ಜಿಲ್ಲಾ ವಾಲ್ಮೀಕಿ ನಾಯಕ ಸಂಘ ಒತ್ತಾಯಿಸಿದೆ.

Advertisement

ಈ ಕುರಿತು ಶುಕ್ರವಾರ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು. ರಾಜ್ಯದಲ್ಲಿ ವಾಲ್ಮೀಕಿ ಸಮಾಜ ದೊಡ್ಡ ಪ್ರಮಾಣದಲ್ಲಿದ್ದು, ಈ ಭಾಗದಲ್ಲಿ ಹೆಚ್ಚು ಜನರಿದ್ದಾರೆ. ಮಹರ್ಷಿ ವಾಲ್ಮೀಕಿ ರಾಮಾಯಣದಂಥ ಮಹಾಗ್ರಂಥ ರಚಿಸುವ ಮೂಲಕ ಮನುಕುಲಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ. ಅಂಥ ಮಹಾನ್‌ ವ್ಯಕ್ತಿಯ ಹೆಸರಿಡುವ ಮೂಲಕ ಅವರಿಗೆ ಗೌರವ ಸಲ್ಲಿಸಬೇಕು ಎಂದರು.

ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳಲ್ಲಿ 5 ಪರಿಶಿಷ್ಟ ಪಂಗಡ ವಿಧಾನಸಭೆಗಳ ಮೀಸಲಾಗಿದ್ದು, ಲೋಕಸಭಾ ಕ್ಷೇತ್ರ ಕೂಡ ಇದೇ ಸಮುದಾಯಕ್ಕೆ ಮೀಸಲಾಗಿದೆ. ಎರಡು ಜಿಲ್ಲೆಗಳಲ್ಲಿ ಸುಮಾರು ಶೇ.45 ಜನ ಎಸ್‌ಟಿ ಸೇರಿದ್ದಾರೆ. ಈ ನಿಟ್ಟಿನಲ್ಲಿ ರಾಯಚೂರು ವಿಶ್ವವಿದ್ಯಾಲಯಕ್ಕೆ ಆದಿಕವಿ ಮಹರ್ಷಿ ವಾಲ್ಮೀಕಿ ಹೆಸರಿಡುವುದೇ ಸೂಕ್ತ ಎಂದು ಒತ್ತಾಯಿಸಿದರು.

ಸಂಘಟನೆ ಮುಖಂಡದಾದ ಕೆ. ಶಿವಕುಮಾರ್‌ ನಾಯಕ್‌, ಹನುಮೇಶ್‌ ನಾಯಕ್‌, ಸಿ.ಕೆ. ಬಸವರಾಜ ನಾಯಕ್‌ ಇತರರಿದ್ದರು. ಇನ್ನೂ ಇದೇ ವಿಚಾರವಾರ ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳ ವಾಲ್ಮೀಕಿ ಸಮುದಾಯದ ಮಹಿಳಾ ಮುಖಂಡರು ಕೂಡ ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗೆ ಮನವಿ ಸಲ್ಲಿಸಿದರು. ಡಾ. ಶಾರದಾ ಹುಲಿ ನಾಯಕ, ಸೀತಮ್ಮ, ಡುಳ್ಳಮ್ಮ, ರೂಪನಾಯಕ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next