Advertisement

ರೈತಸಂಘದ ಹೆಸರು,ಹಸಿರು ಶಾಲು ಶೀಘ್ರವೇ ಬದಲು!

06:05 AM Nov 27, 2017 | |

ನಾಡೋಜ ಡಾ.ದೇ.ಜವರೇಗೌಡ ವೇದಿಕೆ ಮೈಸೂರು: ಪೊ. ಎಂ. ಡಿ. ನಂಜುಂಡಸ್ವಾಮಿ ಅವರ ನಾಯಕತ್ವದಲ್ಲಿ 80ರ ದಶಕದಲ್ಲಿ ನಾಡಿನಲ್ಲಿ ಪ್ರಬಲವಾಗಿದ್ದ ರೈತ ಸಂಘಟನೆಯ ಹೆಸರು ಮತ್ತು ಹಸಿರು ಶಾಲು ಸದ್ಯದಲ್ಲೇ ಬದಲಾಗಲಿದೆ.

Advertisement

ರೈತರ ಸಮಸ್ಯೆಗಳನ್ನು ಆಳುವ ಸರ್ಕಾರಗಳಿಗೆ ಮನವರಿಕೆ ಮಾಡಿಕೊಡಲು ಸಾವಿರಾರು ರೈತರನ್ನು ಸೇರಿಸಿ ಹೆಗಲ ಮೇಲಿನ ಹಸಿರು ಶಾಲನ್ನು ಮೇಲೆತ್ತಿ ತಿರುಗಿಸಿದರೆ ಅದಕ್ಕೊಂದು ತಾಕತ್ತು ಇತ್ತು. ಸರ್ಕಾರ ರೈತರ ಮುಂದೆ ಮಂಡಿಯೂರಿ ಕುಳಿತುಕೊಳ್ಳಬೇಕಾದ ಸ್ಥಿತಿ ಇತ್ತು. ದಶಕಗಳ ಕಾಲ ರೈತಸಂಘಟನೆಯನ್ನು ಮುನ್ನಡೆಸಿದ ಪೊ›.ಎಂಡಿಎನ್‌, ತಮ್ಮ ವಿಚಾರಪೂರಿತ ಮೊನಚು ಮಾತುಗಳ ಮೂಲಕ ಹಳ್ಳಿ ಹಳ್ಳಿ ತಿರುಗಿ ಸಂಘಟನೆಗೊಂದು ಹೊಸ ದಿಕ್ಕು ತೋರಿಸಿದ್ದರು. ಆ ಶಾಲು ಆಳುವ ಸರ್ಕಾರಗಳನ್ನೇ ನಡುಗುವಂತೆ ಮಾಡಿತ್ತು. ಆದರೆ, ಆ ಶಾಲು ಈಗ ಇತಿಹಾಸದ ಪುಟ ಸೇರಲಿದೆ. ಈ ಸುಳಿವನ್ನು ಕೊಟ್ಟಿದ್ದು ಸಾಹಿತ್ಯ ಸಮ್ಮೇಳನದಲ್ಲಿನ ಜನಪರ ಚಳವಳಿಗಳು ವಿಚಾರಗೋಷ್ಠಿ.

ಅಲ್ಲಿ ಮಾತನಾಡಿದ ರೈತಸಂಘದ ಅಧ್ಯಕ್ಷ ಚಾಮರಸ ಮಾಲಿ ಪಾಟೀಲ, ಕೆಲವರ ಅಧಿಕಾರ ದಾಹದಿಂದ ಹರಿದು ಹಂಚಿಹೋಗಿರುವ ರೈತ ಸಂಘಟನೆಗಳನ್ನು ಒಗ್ಗೂಡಿಸುವ ಕಾರ್ಯವನ್ನು ಆಗಾಗ ಮಾಡಿದರೂ ಮತ್ತೆ ಮತ್ತೆ ವಿಘಟನೆಯಾಗುತ್ತಿರುವ ಜತೆಗೆ ರೈತಸಂಘದ ಹೆಸರು ಮತ್ತು ಹಸಿರು ಶಾಲು ದುರುಪಯೋಗ ಆಗುತ್ತಿದೆ. ಇದನ್ನು ತಡೆಯಲು ರೈತಸಂಘ-ಹಸಿರು ಸೇನೆ ಹೆಸರು ಮಾರ್ಪಾಡಿಗೆ ಚಿಂತನೆ ನಡೆದಿದ್ದು, ಡಿ.21ರಂದು ನಡೆಯುವ ರೈತಸಂಘದ ರಾಜ್ಯಸಮಿತಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ರಾಜ್ಯದಲ್ಲಿ ರೈತ ಚಳುವಳಿ ಹುಟ್ಟಿಕೊಂಡ ಬಗೆಯನ್ನು ವಿವರಿಸಿದ್ದಲ್ಲದೇ, ನವಲುಗುಂದ-ನರಗುಂದ ಹೋರಾಟ, ಗುಂಡೂರಾವ್‌ ಸರ್ಕಾರದ ರೈತ ವಿರೋಧಿ ನಡೆ ವಿರೋಧಿಸಿ ನಡೆದ ಹೋರಾಟಗಳನ್ನೂ ಪಾಟೀಲ ಅವರು ನೆನಪಿಸಿಕೊಂಡರು. 

ಸಂಘಟನೆಯ ಹೆಸರು ಹಾಗೂ ಶಾಲು ದುರುಪಯೋಗ ಆಗುತ್ತಿರುವುದನ್ನು ತಡೆಗಟ್ಟಲು ರಾಜ್ಯ ರೈತಸಂಘ ಮತ್ತು ಹಸಿರು ಸೇನೆ ಹೆಸರು ಮಾರ್ಪಾಡಿಗೆ ಚಿಂತನೆ ನಡೆದಿದೆ. ಡಿ.21ರಂದು ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು.
– ಚಾಮರಸ ಮಾಲಿ ಪಾಟೀಲ, ರಾಜ್ಯ ರೈತಸಂಘ ಅಧ್ಯಕ್ಷರು

Advertisement

– ಗಿರೀಶ್‌ ಹುಣಸೂರು

Advertisement

Udayavani is now on Telegram. Click here to join our channel and stay updated with the latest news.

Next