Advertisement

ಒಪ್ಪಿಗೆಯಿಲ್ಲದೆ ನನ್ನ ಹೆಸರನ್ನು ಅಭ್ಯರ್ಥಿಗಳ ಪಟ್ಟಿಗೆ ಸೇರಿಸಿದೆ ಬಿಜೆಪಿ : ಶಿಖಾ ಮಿತ್ರ

11:48 AM Mar 19, 2021 | Team Udayavani |

ಕೊಲ್ಕತ್ತಾ : ಪಶ್ಚಿಮ ಬಂಗಾಳ ವಿಧಾನ ಸಭಾ ಚುನಾವಣೆಗೆ ಬಿಜೆಪಿ ತನ್ನ ಎರಡನೇ ಹಂತದ ಪಟ್ಟಿಯನ್ನು ಬಿಜೆಪಿ ಬಿಡುಗಡೆ ಮಾಡಿದ ಕೆಲವೇ ಕ್ಷಣಗಳಲ್ಲಿ ಕೋಲ್ಕತ್ತಾದ ಚೌರಿಂಗ್ಹಿ ವಿಧಾನಸಭಾ ಕ್ಷೆತ್ರದಿಂದ ನಾಮ ನಿರ್ದೇಶಿತರಾದ ಶಿಖಾ ಮಿತ್ರ ನನ್ನ ಒಪ್ಪಿಗೆಯಿಲ್ಲದೆ ನನ್ನ ಹೆಸರನ್ನು ಅಭ್ಯರ್ಥಿಗಳ ಪಟ್ಟಿಗೆ ಸೇರಿಸಲಾಗಿದೆ ಎಂದು ಹೇಳಿದ್ದಾರೆ.

Advertisement

ಕಾಂಗ್ರೆಸ್ ನಾಯಕರಾಗಿದ್ದ ದಿವಂಗತ ಸೋಮೆನ್ ಮಿತ್ರ ಅವರ ಪತ್ನಿ ಶಿಖಾ ಮಿತ್ರ, ಈ ಹಿಂದೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದರು. ನಾನು ಎಲ್ಲಿಂದಲೂ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಅಭ್ಯರ್ಥಿಗಳ ಪಟ್ಟಿಯಲ್ಲಿ ನನ್ನ ಒಪ್ಪಿಗೆ ಇಲ್ಲದೆ ನನ್ನ ಹೆಸರನ್ನು ಸೇರಿಸಲಾಗಿದೆ. ಇಷ್ಟಲ್ಲದೇ, ‘ನಾನು ಬಿಜೆಪಿಗೆ ಸೇರುತ್ತಿಲ್ಲ’ ಎಂದು ಶಿಖಾ ಪಿಟಿಐ ಸುದ್ದಿ ಸಂಸ್ಥೆಗೆ ಪ್ರತಿಕ್ರಿಯಿಸಿದ್ದಾರೆ.

ಓದಿ : ಕೋವಿಡ್ ಮಣಿಸಲು ಲಸಿಕೆ ಅಗತ್ಯ : ಸಿಎಂ ಬಿ ಎಸ್ ವೈ ಮನವಿ

ಇನ್ನು, ಶಿಖಾ ಮಿತ್ರ ಅವರನ್ನು ಭೇಟಿಯಾಗಿ ಬಿಜೆಪಿ ಪ್ರಭಾವಿ ನಾಯಕ ಸುವೇಂದು ಅಧಿಕಾರಿ ನಡೆಸಿದ ಮಾತುಕತೆಯ ನಂತರ ಶಿಖಾ ಬಿಜೆಪಿಗೆ ಸೇರ್ಪಡೆಗೊಳ್ಳುತ್ತಾರೆ ಎಂಬ ಸುದ್ದಿಗಳು ಪಶ್ಚಿಮ ಬಂಗಾಳದ ರಾಜಕೀಯ ವಲಯದಲ್ಲಿ ಹರಿದಾಡಿತ್ತು. ಚುನಾವಣೆಯ ಅಭ್ಯರ್ಥಿಗಳ ಪಟ್ಟಿಯ ವಿಚಾರದಲ್ಲಿ ತೃಣಮೂಲ ಕಾಂಗ್ರೆಸ್ ನಾಯಕರಿಂದ ತೀವ್ರ ಟೀಕೆಗೆ ಒಳಗಾಗಿದ್ದ ಬಿಜೆಪಿಗೆ ಮತ್ತೆ ಈ ವಿಚಾರದಿಂದ ಮುಜುಗರ ಉಂಟಾಗಿದೆ ಎಂದು ವರದಿಯಾಗಿದೆ.

ಈ ವಿಚಾರದಿಂದ ತೃಣ ಮೂಲ ಕಾಂಗ್ರೆಸ್ ಗೆ ಬಿಜೆಪಿ ವಿರುದ್ಧ ಮಾತಾಡಲು ಮತ್ತೊಂದು ಅಸ್ತ್ರ ಸಿಕ್ಕಂತಾಗಿದೆ.

Advertisement

‘ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡುತ್ತದೆ. ಪಟ್ಟಿಯಲ್ಲಿರುವವರು ತಾವು ಬಿಜೆಪಿಯಲ್ಲಿಲ್ಲ, ನಾವು ಬಿಜೆಪಿ ಟಿಕೆಟ್ ಗಾಗಿ ಹಿಂದೆ ಬಿದ್ದಿಲ್ಲ ಎಂದು ಹೇಳುತ್ತಿದ್ದಾರೆ. ಇನ್ನಷ್ಟು ತಯಾರಿಯಾಗಬೇಕು ಮಿಸ್ಟರ್ ಶಾ’ ಎಂದು ತೃಣಮೂಲ ಕಾಂಗ್ರೆಸ್ ನ ಸಂಸದೆ ಮಹುವಾ ಮೊಯ್ತ್ರಾ ಟ್ವೀಟ್ ಮಾಡಿದ್ದಾರೆ.

ಇನ್ನು, ತೃಣ ಮೂಲ ಕಾಂಗ್ರೆಸ್ ನ ಹಿರಿಯ ನಾಯಕ ಡೆರೆಕ್ ಒ’ಬ್ರಿಯೆನ್ ಕೂಡ ಈ ಬಗ್ಗೆ ಟ್ವೀಟರ್ ನಲ್ಲಿ ಬಿಜೆಪಿಗೆ ವ್ಯಂಗ್ಯ ಮಾಡಿದ್ದಾರೆ.

ಓದಿ : ಭಾರತದಲ್ಲಿ 40 ಸಾವಿರ ಕೋವಿಡ್ ಸೋಂಕು ಪ್ರಕರಣ ಪತ್ತೆ, 3 ತಿಂಗಳಲ್ಲಿ ಗರಿಷ್ಠ ಏರಿಕೆ

Advertisement

Udayavani is now on Telegram. Click here to join our channel and stay updated with the latest news.

Next