Advertisement
ಇದು ಮಂಗಳೂರು ನಗರದ ರಸ್ತೆಯಲ್ಲಿ ಕೆಲವು ದಿನಗಳ ಹಿಂದೆ ಮಾಡಿದ ನಮಾಜ್ನ ವೀಡಿಯೋ ಎನ್ನಲಾಗಿದೆ. ಈ ಬಗ್ಗೆ ಪೊಲೀಸರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ನಮಾಜ್ನಿಂದಾಗಿ ಸಾರ್ವಜನಿಕರಿಗೆ ರಸ್ತೆ ಸಂಚಾರಕ್ಕೆ ಅಡ್ಡಿಯಾಗಿದೆ ಎಂದು ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ರಸ್ತೆಯಲ್ಲಿಯೇ ನಮಾಜ್ ಮಾಡಿರುವುದನ್ನು ಶ್ರೀರಾಮ ಸೇನೆ ಖಂಡಿಸಿದೆ. ಇಂತಹ ಕೃತ್ಯಗಳನ್ನು ಪೊಲೀಸರು ತಡೆಯಬೇಕು ಎಂದು ಶ್ರೀರಾಮ ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಆನಂದ ಶೆಟ್ಟಿ ಅಡ್ಯಾರ್ ಮತ್ತು ವಿಭಾಗ ಅಧ್ಯಕ್ಷ ಮಧುಸೂದನ್ ಉರ್ವಸ್ಟೋರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.