ಕಲಬುರಗಿ: ಪೌರತ್ವ ಕಾಯ್ದೆ ವಿರೋಧಿಸಿ ನಡೆಯುತ್ತಿರುವ ಬೃಹತ್ ಪ್ರತಿಭಟನೆಯಲ್ಲಿ ಮುಸ್ಲಿಮರು ನಮಾಜ್ ಮಾಡಿದರು.
ನಿಷೇಧಾಜ್ಞೆ ಮಧ್ಯೆಯೇ ನಗರದ ನಗರೇಶ್ವರ ಶಾಲೆಯಿಂದ ಪ್ರಮುಖ ರಸ್ತೆಗಳ ಮೂಲಕ ಐದು ಕಿ.ಮೀ. ದೂರ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದ ಸಾವಿರಾರು ಮುಸ್ಲಿಮರು ಜಗತ್ ವೃತ್ತದಲ್ಲಿ ಜಮಾವಣೆಗೊಂಡರು.
ಮೆರವಣಿಗೆಗೆ ಉದ್ದಕ್ಕೂ ಕೇಂದ್ರ ಸರ್ಕಾರ, ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ವಿರುದ್ಧ ಘೋಷಣೆಗಳನ್ನು ಕೂಗಿದರು. ಕಪ್ಪ ಬಾವುಟ, ಕಪ್ಪು ಪಟ್ಟಿ ಧರಿಸಿ ಪೌರತ್ವ ಕಾಯ್ದೆಯನ್ನು ಖಂಡಿಸಿದರು.
ಜಗತ್ ವೃತ್ತದಲ್ಲಿ ಮಧ್ಯಾಹ್ನ 1.15 ನಿಮಿಷಕ್ಕೆ ರಸ್ತೆ ಮಧ್ಯದಲ್ಲೇ ಕೆಲವು ಪ್ರಮುಖರು ನಮಾಜ್ ಮಾಡಿದರು. ನಂತರ ಪೊಲೀಸರು ಪ್ರತಿಭಟನೆ ನಿಲ್ಲಿಸುವಂತೆ ಸೂಚಿಸಿ, ವಾಪಸ್ ಮನೆಗಳಿಗೆ ತೆರಳುವಂತೆ ಪ್ರತಿಭಟನಾಕಾರರಿಗೆ ಮನವಿ ಮಾಡಿದರು.
ಬೆಳಿಗೆ 11:30ರಿಂದ ಎರಡು ಗಂಟೆಗಳ ಕಾಲ ನಡೆದ ಪ್ರತಿಭಟನಾ ಮೆರವಣಿಗೆ ಬಹುತೇಕ ಶಾಂತಿಯುತವಾಗಿ ನಡೆಯಿತು.