Advertisement
ಬಳಿಕ ಮಾತನಾಡಿದ ಅವರು, ದೇಶಾದ್ಯಂತ ನಡೆದ ಜನರ ಹೋರಾಟ, ಅಹಿಂಸಾತ್ಮಕ ಹೋರಾಟ, ತ್ಯಾಗ ಮತ್ತು ಬಲಿದಾನದ ಫಲವಾಗಿ ಭಾರತವು ಸ್ವಾತಂತ್ರ್ಯ ಪಡೆದಿದೆ. ಅಂಥ ಹಿರಿಯರ ಸ್ಮರಣೆ ಅನಿವಾರ್ಯ ಎಂದರು. ಜಗತ್ತಿನ ಸರ್ವಮಾನ್ಯ- ಶ್ರೇಷ್ಠ ದೇಶ ನಮ್ಮದಾಗಬೇಕು. ವಿಶ್ವಕ್ಕೇ ಮಾರ್ಗದರ್ಶನ ನೀಡುವ ಜಗದ್ವಂದ್ಯ ಭಾರತದ ಎಲ್ಲ ಮಹನೀಯರ ಕನಸು ನನಸು ಮಾಡಲು ನಾವು ಪ್ರಯತ್ನ ಮಾಡಬೇಕು ಎಂದರು.
Related Articles
Advertisement
ರೈತರನ್ನು ಸ್ವಾವಲಂಬಿ ಮಾಡುವ ನಿಟ್ಟಿನಲ್ಲಿ ಕೇಂದ್ರದ ಬಿಜೆಪಿ ಸರಕಾರವು ಕಿಸಾನ್ ಸಮ್ಮಾನ್ ಯೋಜನೆ, ಫಸಲ್ ಬಿಮಾ ಯೋಜನೆಗಳನ್ನು ಜಾರಿಗೊಳಿಸಿದೆ. ಈಚೆಗೆ ಕಿಸಾನ್ ಸಮ್ಮಾನ್ ಯೋಜನೆಯಡಿ ರಾಜ್ಯದ ಸುಮಾರು 51 ಲಕ್ಷಕ್ಕೂ ಹೆಚ್ಚು ರೈತರಿಗೆ 1,023 ಕೋಟಿ ರೂಪಾಯಿ ನೆರವು ಲಭಿಸಿದೆ ಎಂದು ತಿಳಿಸಿದರು.
ಸಶಕ್ತ, ಸದೃಢ ದೇಶವಾಗಿ ಭಾರತ ಬೆಳೆಯುತ್ತಿದೆ. 80 ಕೋಟಿ ಜನರಿಗೆ ಉಚಿತ ಪಡಿತರ ನೀಡುವ ಕೆಲಸವನ್ನೂ ಕೇಂದ್ರ ಸರಕಾರ ಮಾಡಿದೆ. ಸಂಕಷ್ಟದಲ್ಲಿರುವ ಜನರಿಗೆ ಪರಿಹಾರಧನವನ್ನೂ ನೀಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಪ್ರಯತ್ನದಿಂದ ವಿದ್ಯುತ್ ಸಂಪರ್ಕ ಇಲ್ಲದ 18 ಸಾವಿರ ಗ್ರಾಮಗಳಿಗೆ ವಿದ್ಯುತ್ ಸೌಕರ್ಯ ಕಲ್ಪಿಸಲಾಗಿದೆ. ಹಳ್ಳಿ ಹಳ್ಳಿಗೆ ಇಂಟರ್‍ನೆಟ್ ಸಂಪರ್ಕ ಕೊಡಲಾಗಿದೆ. ರೈತರಿಗೆ ಕ್ರೆಡಿಟ್ ಕಾರ್ಡ್, ಸೋಲಾರ್ ಪವರ್ ಸೌಕರ್ಯ ಕೊಡಲಾಗಿದೆ. ಕಿಸಾನ್ ರೈಲುಗಳ ಮೂಲಕ ರೈತರ ಉತ್ಪನ್ನ ಸಾಗಾಟದಿಂದ ರೈತರ ಆದಾಯ ಹೆಚ್ಚಾಗಿದೆ ಎಂದರು.
ಹಳ್ಳಿಗಳ ಜನರಿಗೆ ಶೌಚಾಲಯ, ಮನೆ ನೀಡುವ ಕಾರ್ಯ, ಉಜ್ವಲ ಯೋಜನೆಯಡಿ ಸಿಲಿಂಡರ್ ನೀಡುವ ಕೆಲಸ ಸೇರಿದಂತೆ ಅದ್ಭುತವಾದ ಅಭಿವೃದ್ಧಿ ಕಾರ್ಯಗಳ ಮೂಲಕ ಭಾರತ ಪ್ರಗತಿಪಧದಲ್ಲಿ ಮುನ್ನುಗ್ಗುತ್ತಿದೆ. ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವವು ಮನೆ ಮನೆಯ ಸಂಭ್ರಮದ ಹಬ್ಬವಾಗಿದೆ ಎಂದು ನುಡಿದರು. ಭಾರತ ಮಾತೆಯನ್ನು ಪೂಜಿಸುವ ಮತ್ತು ಬಲಿದಾನಗೈದ ಹಿರಿಯರ ಸ್ಮರಣೆಯ ದಿನ ಇದಾಗಲಿ ಎಂದು ಅವರು ಆಶಿಸಿದರು. ಸುಖ, ಶಾಂತಿ, ನೆಮ್ಮದಿಯ ರಾಮರಾಜ್ಯದ ಕನಸು ಮುಂದಿನ ದಿನಗಳಲ್ಲಿ ನನಸಾಗಲಿ ಎಂದು ಅವರು ಹಾರೈಸಿದರು.