Advertisement

ಗೋಡ್ಸೆ ಸಮರ್ಥನೆ,ರಾಜೀವ್‌ ನಿಂದನೆ; ಸಂಸದ ನಳೀನ್‌ ಕ್ಷಮೆಯಾಚನೆ

09:32 AM May 18, 2019 | Vishnu Das |

ಮಂಗಳೂರು: ನಾಥುರಾಮ್‌ ಗೋಡ್ಸೆ ಸಮರ್ಥಿಸಿ, ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಅವರ ವಿರುದ್ಧ ಗಂಭೀರ ಆರೋಪ ಹೊರಿಸಿ ಮಾಡಿದ್ದ ಟ್ವೀಟ್‌ಗಳವಿರುದ್ಧ ಭಾರೀ ಆಕ್ರೋಶ ವ್ಯಕ್ತವಾದ ಹಿನ್ನಲೆಯಲ್ಲಿ ಸಂಸದ ನಳೀನ್‌ ಕುಮಾರ್‌ ಕಟೀಲ್‌ ಕ್ಷಮೆ ಯಾಚಿಸಿದ್ದಾರೆ. ವಿವಾದಕ್ಕೆ ಕಾರಣವಾದ ಟ್ವೀಟ್‌ಗಳನ್ನು ಡಿಲೀಟ್‌ ಮಾಡಿದ್ದಾರೆ.

Advertisement

ನನ್ನ ಕೊನೆಯ ಎರಡು ಟ್ವೀಟ್ ಗಳಿಗೆ ಟೀಕೆ ವ್ಯಕ್ತವಾಗಿದ್ದನ್ನು ಗಮನಿಸಿದ್ದೇನೆ. ಯಾರಿಗಾದರೂ ಅದರಿಂದ ಬೇಸರವಾಗಿದ್ದಲ್ಲಿ ನಾನು ಕ್ಷಮೆಯಾಚಿಸುತ್ತೇನೆ. ಯಾರನ್ನೂ ನೋಯಿಸುವುದು ನನ್ನ ಉದ್ದೇಶವಾಗಿರಲಿಲ್ಲ. ನೋವಾಗಿದೆಯೆಂದು ತಿಳಿದ ತಕ್ಷಣ ಟ್ವೀಟ್ ಹಿಂಪಡೆದಿದ್ದೇನೆ. ಚರ್ಚೆ ಇಲ್ಲಿಗೆ ಮುಗಿಸೋಣ.” ಎಂದು ಬರೆದಿದ್ದಾರೆ.

ನಳೀನ್‌ ಕುಮಾರ್‌ ಕಟೀಲ್‌ ಅವರ ಟ್ವೀಟ್‌ ರಾಷ್ಟ್ರಮಟ್ಟದಲ್ಲೂ ಸುದ್ದಿಯಾಗಿದ್ದು, ಭಾರೀ ಚರ್ಚೆಗೆ ಗುರಿಯಾಗಿದೆ. ಕಾಂಗ್ರೆಸ್‌ ನಾಯಕರು ವ್ಯಾಪಕ ಆಕ್ರೋಶ ಹೊರ ಹಾಕಿದ್ದರು.

ವಿವಾದಕ್ಕೆ ಗುರಿಯಾದ ಟ್ವೀಟ್‌ ನಲ್ಲೇನಿತ್ತು?
ನಾಥುರಾಮ್‌ ಗೋಡ್ಸೆ ಕೊಂದವರ ಸಂಖ್ಯೆ 1
ಅಜ್ಮಲ್‌ ಕಸಬ್‌ ಕೊಂದವರ ಸಂಖ್ಯೆ 72
ರಾಜೀವ್‌ ಗಾಂಧಿ ಕೊಂದವರ ಸಂಖ್ಯೆ 17,000
ಈಗ ನೀವೆ ಹೇಳಿ ಇವರಲ್ಲಿ ಅತೀ ಕ್ರೂರ ಕೊಲೆಗಾರ ಯಾರು ? ಎಂದು ಪ್ರಶ್ನಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next