ಉಳ್ಳಾಲ: ಲಾಕ್‌ಡೌನ್ ಬಳಿಕ ಜನರು ತನ್ನ ದೇಶದ ಉಳಿವಿಗಾಗಿ ಸಹಕಾರ ನೀಡಿದ್ದರಿಂದ ದೇಶದಲ್ಲಿ ಕೋವಿಡ್ ವೈರಸ್ ನಿಯಂತ್ರಣಕ್ಕೆ ಬಂದಿದೆ. ಇಂದಿನ ಕಷ್ಟದ ದಿನಗಳಲ್ಲಿ ಜನರಿಗೆ ಆಹಾರ ಹಂಚಿ ಹಸಿವು ತಣಿಸುವುದು ಅತ್ಯಂತ ಪುಣ್ಯ ಕಾರ್ಯ. ಇಂತಹ ಕಾರ್ಯದಲ್ಲಿ ಸಂಘ-ಸಂಸ್ಥೆಗಳು, ಸರಕಾರೇತರ ಸಂಸ್ಥೆಗಳು ಕೈಜೋಡಿಸಬೇಕು ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.
ಕುಂಪಲ ಶ್ರೀ ಬಾಲಕೃಷ್ಣ ಮಂದಿರದ ವತಿಯಿಂದ ನಾರಾಯಣ ಮೂರ್ತಿ-ಸುಧಾಮೂರ್ತಿ ಫೌಂಡೇಶನ್ ಮತ್ತು ಇಸ್ಕಾನ್ ಸಹಕಾರದಲ್ಲಿ ಸೋಮವಾರ ಬಾಲಕೃಷ್ಣ ಮಂದಿರದಲ್ಲಿ 1113 ಕುಟುಂಬಗಳಿಗೆ ಆಹಾರ ಕಿಟ್ ವಿತರಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ದೇಶ ಇತರ ರಾಜ್ಯಗಳ ಅಂಕಿ ಅಂಶಗಳನ್ನು ಗಮನಿಸಿದಾಗ ಜಿಲ್ಲೆ ಕಠಿನ ಪರಿಸ್ಥಿತಿಯಲ್ಲಿ ಇದ್ದರೂ ಪ್ರಸ್ತುತ ದಿನಗಳಲ್ಲಿ ಜಿಲ್ಲೆಯಲ್ಲಿ ಹೊಸ ಪ್ರಕರಣ ಪತ್ತೆಯಾಗಿಲ್ಲ. ಶೀಘ್ರ ಶೂನ್ಯ ಪ್ರಕರಣಕ್ಕೆ ಬಂದು ಕ್ರಾಂತಿಕಾರಿ ಬದಲಾವಣೆ ಜಿಲ್ಲೆಯಲ್ಲಿ ತರಬೇಕಾದರೆ ಎಲ್ಲರ ಸಹಕಾರ ಅಗತ್ಯ. ಇಂದು ಜನರ ಬದುಕು ಮುಖ್ಯ ಆಗಿರುವುದರಿಂದ ಗಂಜಿ, ಚಟ್ನಿ ಮೂಲಕ ಸರಳ ಬದುಕಿಗೆ ಹೊಂದಿಕೊಳ್ಳುವುದು ಮುಖ್ಯ ಎಂದರು.
ಮಂದಿರದ ಅಧ್ಯಕ್ಷ ಸತೀಶ್ ಕುಂಪಲ ಮಾತನಾಡಿ, ಕ್ಷೇತ್ರ ವ್ಯಾಪ್ತಿಯಲ್ಲಿರುವ ಎಲ್ಲ ಗ್ರಾಮಗಳಲ್ಲೂ ಅರ್ಹ ಫಲಾನುಭವಿಗಳನ್ನು ಗುರುತಿಸಿ ನಿಗದಿತ ಪ್ರಮಾಣದಲ್ಲಿ ಕಿಟ್ ವಿತರಿಸಲಾಗುತ್ತಿದ್ದು, ಕಳೆದ ವಾರ 370 ಹಾಗೂ ಈ ವಾರ 700ಕ್ಕೂ ಅಧಿಕ ಮಂದಿಗೆ ವಿತರಿಸಲಾಗುತ್ತದೆ ಎಂದು ತಿಳಿಸಿದರು.
ಇನೊ³àಸಿಸ್ ವಲಯ ವ್ಯವಸ್ಥಾಪಕ ಹರೀಶ್ ಜೆ., ಕಾರ್ಯವಿರ್ವಹಣಾಧಿಕಾರಿ ಗೋಪಿಕೃಷ್ಣನ್, ಹಿರಿಯ ಸಹಾಯಕ ಉಪಾಧ್ಯಕ್ಷ ವಾಸುದೇವ ಕಾಮತ್, ಸಹಾಯಕ ಉಪಾಧ್ಯಕ್ಷ ಧೀರಜ್ ಹೆಜಮಾಡಿ, ಸಂಜಯ್ ಕಾಮತ್, ಆರ್‌ಎಸ್ ಎಸ್ ತಾಲೂಕು ಕಾರ್ಯವಾಹ ಪುಷ್ಪರಾಜ್, ಜಿಲ್ಲಾ ಪಂಚಾಯತ್ ಸದಸ್ಯೆ ಧನಲಕ್ಷಿ$¾à ಗಟ್ಟಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸಂತೋಷ್ ರೈ ಬೋಳಿಯಾರ್, ಕ್ಷೇತ್ರಾಧ್ಯಕ್ಷ ಚಂದ್ರಹಾಸ ಪಂಡಿತ್‌ಹೌಸ್, ರೈಲ್ವೇ ಸಲಹಾ ಸಮಿತಿ ಸದಸ್ಯ ಚಂದ್ರಹಾಸ ಅಡ್ಯಂತಾಯ, ಕ್ಷೇತ್ರ ಪ್ರ. ಕಾರ್ಯದರ್ಶಿ ಹೇಮಂತ್ ಶೆಟ್ಟಿ, ಸೋಮೇಶ್ವರ ಪುರಸಭೆ ಅಧ್ಯಕ್ಷ ರಾಜೇಶ್ ಉಚ್ಚಿಲ್, ತಲಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಸುರೇಶ್‌ಆಳ್ವ ಸಾಂತ್ಯಗುತ್ತು, ಮಂದಿರ ಗೌರವಾಧ್ಯಕ್ಷ ಕೇಶವದಾಸ್ ಬಗಂಬಿಲ ಮೊದಲಾದವರು ಉಪಸ್ಥಿತರಿದ್ದರು.
ಮಂದಿರದ ಅಧ್ಯಕ್ಷ ಸತೀಶ್ ಕುಂಪಲ ಪ್ರಾಸ್ತಾವಿಕವಾಗಿ ಮಾತನಾಡಿದರು.