Advertisement

Nalanda University: ನಳಂದಾ ವಿವಿ ಜಗತ್ತಿನ ಜ್ಞಾನಕೇಂದ್ರವಾಗಬೇಕು: ಪ್ರಧಾನಿ ನರೇಂದ್ರ ಮೋದಿ

09:26 AM Jun 20, 2024 | Team Udayavani |

ರಾಜಗೀರ್‌ (ಬಿಹಾರ): ವಿಶ್ವದ ಮೊದಲ ನಿವಾಸಿ ವಿಶ್ವವಿದ್ಯಾನಿಲಯ, ದೇಶದ ಅತೀ ಪ್ರಾಚೀನ ವಿವಿ ಎಂದೇ ಕರೆಸಿಕೊಂಡಿರುವ “ನಳಂದಾ’ವನ್ನು ಪ್ರಧಾನಿ ನರೇಂದ್ರ ಮೋದಿ ಬುಧವಾರ ಉದ್ಘಾಟಿಸಿದ್ದಾರೆ. 5ನೇ ಶತಮಾನಕ್ಕೆ ಸೇರಿದ್ದ ನಳಂದಾ ವಿಶ್ವವಿದ್ಯಾನಿಲಯ 12ನೇ ಶತಮಾನದಲ್ಲಿ ನಿರ್ನಾಮವಾಗಿತ್ತು. ಅದರ ಮರುನಿರ್ಮಾಣಕ್ಕೆ 2010ರಲ್ಲಿ ಕೇಂದ್ರ ಸರಕಾರ ಚಾಲನೆ ನೀಡಿತ್ತು.

Advertisement

450 ಎಕ್ರೆ ವಿಸ್ತಾರದಲ್ಲಿ, ಸಂಪೂರ್ಣ ಪರಿಸರಸ್ನೇಹಿ ಯಾಗಿ ನಿರ್ಮಾಣಗೊಂಡಿರುವ ನಳಂದಾ ವಿವಿ ಉದ್ಘಾಟಿಸಿದ ಮೋದಿ, ವಿದ್ಯಾರ್ಥಿಗಳು ಸದಾ ನವಶೋಧಕ್ಕೆ ತುಡಿಯುತ್ತಿರಬೇಕು, ಧೈರ್ಯಶಾಲಿ ಗಳಾಗಿರಬೇಕು. ಜ್ಞಾನವನ್ನು ಅಗ್ನಿಯಿಂದ ಸುಡಲು ಸಾಧ್ಯವಿಲ್ಲ ಎನ್ನುವುದಕ್ಕೆ ಈ ವಿಶ್ವವಿದ್ಯಾನಿಲಯವೇ ಸಾಕ್ಷಿ ಎಂದರು. ಉದ್ಘಾಟನೆಗೂ ಮುನ್ನ ಕೆಲವು ಕಾಲ ಮೋದಿ ಪ್ರಾಚೀನ ನಳಂದಾ ವಿಶ್ವವಿದ್ಯಾನಿಲಯದ ಅವಶೇಷಗಳನ್ನು ವೀಕ್ಷಿಸಿದರು.

ನಳಂದಾ ಕೇವಲ ಹೆಸರಲ್ಲ, ಇದೊಂದು ಮಂತ್ರ, ಒಂದು ಗುರುತು, ಪುಸ್ತಕಗಳು ಬೆಂಕಿಯಿಂದ ನಾಶವಾಗಬಹುದು, ಆದರೆ ಜ್ಞಾನ ಉಳಿಯುತ್ತದೆ ಎನ್ನುವುದಕ್ಕೆ ಸಾಕ್ಷಿ. ನಳಂದಾದ ಪುನರುತ್ಥಾನ ಭಾರತದ ಸ್ವರ್ಣಯುಗದ ಆರಂಭವನ್ನು ಸೂಚಿಸುತ್ತದೆ ಎಂದು ಮೋದಿ ಭಾವುಕರಾಗಿ ನುಡಿದರು.

ಪರಿಸರ ಸ್ನೇಹಿ: ನಳಂದಾ ಸಂಪೂರ್ಣ ಪರಿಸರಸ್ನೇಹಿ ಯಾಗಿರುವ ಭಾರತದ ಮೊದಲ ವಿಶ್ವವಿದ್ಯಾನಿಲಯ. ಹೊಗೆಯುಗುಳುವಿಕೆ ಇಲ್ಲದ, ತ್ಯಾಜ್ಯವಿಲ್ಲದ, ನವೀಕರಿಸಬಹುದಾದ ಮೂಲಗಳಿಂದಲೇ ವಿದ್ಯುತ್‌ ಉತ್ಪಾದಿಸುವ ದೇಶದ ಮೊದಲ ಕೇಂದ್ರ. ನಿನಗೆ ನೀನೆ ಬೆಳಕಾಗು ಎಂಬ ತಣ್ತೀವನ್ನು ಹೊಂದಿರುವ ಇದು ಇಡೀ ವಿಶ್ವಕ್ಕೆ ಮಾರ್ಗದರ್ಶನ ಮಾಡುತ್ತದೆ ಎಂದಿದ್ದಾರೆ.

2047ರಷ್ಟರಲ್ಲಿ ಪೂರ್ಣ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವ ಗುರಿ ಇಟ್ಟುಕೊಳ್ಳಲಾಗಿದೆ. ಭಾರತ ಇಡೀ ಜಗತ್ತಿನಲ್ಲೇ ಮತ್ತೆ ಜ್ಞಾನಕೇಂದ್ರವಾಗಬೇಕು. ಅದಕ್ಕಾಗಿ ನವಶೋಧದ ಸ್ಫೂರ್ತಿ ಮಕ್ಕಳಿಗೆ ಅತೀ ಚಿಕ್ಕ ವಯಸ್ಸಿನಲ್ಲೇ ಹುಟ್ಟಬೇಕು. ಅಟಲ್‌ ಟಿಂಕರಿಂಗ್‌ ಪ್ರಯೋಗಾಲಯದ ಮೂಲಕ ಒಂದು ಕೋಟಿಗೂ ಅಧಿಕ ಮಕ್ಕಳು ನೂತನ ತಂತ್ರಜ್ಞಾನಕ್ಕೆ ತೆರೆದುಕೊಂಡಿದ್ದಾರೆ ಎಂದರು. 3ನೇ ಬಾರಿ ಪ್ರಧಾನಿಯಾಗಿ ಆಯ್ಕೆಯಾದ ಹತ್ತೇ ದಿನದಲ್ಲಿ ನನಗೆ ನಳಂದಾ ವಿವಿ ಉದ್ಘಾಟಿಸುವ ಅಪರೂಪದ ಅವಕಾಶ ಒದಗಿಬಂದಿದೆ ಮೋದಿ ಸಂತಸ ವ್ಯಕ್ತಪಡಿಸಿದರು.

Advertisement

ಹೇಗಿತ್ತು ಪ್ರಾಚೀನ ವಿವಿ?
– 5-12ನೇ ಶತಮಾನದವರೆಗೆ ಕಾರ್ಯ
– ಧರ್ಮಗುಂಜ ಗ್ರಂಥಾಲಯದಲ್ಲಿ ಸಂಗ್ರಹಿಸಲಾಗಿತ್ತು 90 ಲಕ್ಷ ಪುಸ್ತಕಗಳು
– ವಿವಿಯಲ್ಲಿದ್ದರು 10,000 ವಿದ್ಯಾರ್ಥಿಗಳು, 2000 ಶಿಕ್ಷಕರು

Advertisement

Udayavani is now on Telegram. Click here to join our channel and stay updated with the latest news.

Next