Advertisement

ನಳಂದಾ: ಅಕ್ರಮ ಪಟಾಕಿ ಘಟಕದಲ್ಲಿ  ಭಾರೀ ಸ್ಫೋಟ;ಐವರು ಛಿದ್ರ 

09:10 AM Mar 23, 2018 | Team Udayavani |

ನಳಂದಾ: ಬಿಹಾರದ ಜಲಾಲ್‌ಪುರ್‌ನಲ್ಲಿ ಅಕ್ರಮ ಪಟಾಕಿ ತಯಾರಿಕಾ ಘಟಕವೊಂದರಲ್ಲಿ ಭಾರೀ ಸ್ಫೋಟ ಸಂಭವಿಸಿದ್ದು ಕನಿಷ್ಠ  ಐವರು ದಾರುಣವಾಗಿ ಸಾವನ್ನಪ್ಪಿದ್ದು, 25 ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. 

Advertisement

ಬೆಳಗಿನ ಜಾವ 5 ಗಂಟೆಯ ವೇಳೆಗೆ ಸ್ಫೋಟ ಸಂಭವಿಸಿದ್ದು  ಘಟಕದ ಸುತ್ತ ಇದ್ದ ನಿವಾಸಿಗಳು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಸ್ಫೋಟದಿಂದ ಭಾರೀ ಬೆಂಕಿ ಕಾಣಿಸಿಕೊಂಡಿದ್ದು , ಗೋಡೆಗಳು ಛಿದ್ರಗೊಂಡಿವೆ. 

ಗಾಯಾಳುಗಳನ್ನು ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು 17 ಮಂದಿಯ ಸ್ಥಿತಿ ಚಿಂತಾಚನಕವಾಗಿದೆ ಎಂದು ತಿಳಿದು ಬಂದಿದೆ.

ಅಗ್ನಿ ಶಾಮಕ ದಳದ ಸಿಬಂದಿಗಳು ಸ್ಥಳಕ್ಕಾಗಮಿಸಿ ಬೆಂಕಿಯ ಕೆನ್ನಾಲಗೆಯನ್ನು ತಹಬದಿಗೆ ತರಲು 2 ಗಂಟೆಗಳ ಕಾಲ ಹರಸಾಹಸ ಪಟ್ಟಿರುವುದಾಗಿ ತಿಳಿದು ಬಂದಿದೆ. 

ಎಟಿಎಸ್‌ ಪೊಲೀಸರು ಸೇರಿದಂತೆ ಹಿರಿಯ ಪೊಲೀಸ್‌ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸುತ್ತಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next