Advertisement

ಕೈ-ಕಾಲಿನ ಉಗುರುಗಳ ಸೌಂದರ್ಯ ಕಾಪಾಡಿಕೊಳ್ಳಿ!

05:04 PM Oct 29, 2020 | |

ಕೈಗಳ ಅಂದ ಹೆಚ್ಚಿಸುವುದರಲ್ಲಿ ಉಗುರುಗಳಿಗೆ ಮಹತ್ವದ ಸ್ಥಾನ. ಕೈ-ಕಾಲಿನ ಉಗುರುಗಳ ಸೌಂದರ್ಯ ಕಾಪಾಡಲು ಮ್ಯಾನಿಕ್ಯೂರ್‌, ಪೆಡಿಕ್ಯೂರ್‌ನಂಥ ಹಲವು ವಿಧಾನಗಳಿವೆ. ಆದರೆ ಉಗುರು ಸದೃಢವಾಗಿ, ಆರೋಗ್ಯವಾಗಿ ಬೆಳೆದರೆ ಮಾತ್ರ ಸುಂದರವಾಗಿ ಕಾಣಲು ಸಾಧ್ಯ. ಬ್ಯೂಟಿ ಪಾರ್ಲರ್‌, ನೇಲ್‌ಪಾಲಿಶ್‌, ನೇಲ್‌ ಆರ್ಟ್‌ ಎಂದು ಹಣ ಖರ್ಚು ಮಾಡುವ ಮುನ್ನ, ಈ ಕೆಳಗಿನ ಅಂಶಗಳಿಗೆ ಗಮನ ಕೊಡಿ. 

Advertisement

* ಉಗುರುಗಳು ಅಕಾಲಿಕವಾಗಿ ಕೆತ್ತಿ ಹೋಗುವುದನ್ನು ತಡೆಯಲು ಬಯೋಟಿನ್‌ ಅಂಶ ಮತ್ತು ಉಗುರುಗಳ ಹೊರ ಪೊರೆಯ ಆರೋಗ್ಯಕ್ಕೆ ವಿಟಮಿನ್‌ “ಇ’ ಅಂಶ ಅತಿ ಅವಶ್ಯ. ಈ ಪೋಷಕಾಂಶಯುಕ್ತ ಆಹಾರಗಳ ಸೇವನೆಯಿಂದ ಉಗುರು ಶುಷ್ಕವಾಗದೆ, ಜೀವಂತಿಕೆಯಿಂದ ಬೆಳೆಯುತ್ತವೆ.

* ಉಗುರು ಸರಿಯಾಗಿ ಬೆಳೆಯುವ ಮುನ್ನ ಕತ್ತರಿಸುತ್ತಾ ಇರಬೇಡಿ. ಉಗುರುಗಳು ಬೆರಳಿನ ಹೊರ ಪೊರೆಗೆ ಹತ್ತಿರವಾಗಿದ್ದರೆ, ಬ್ಯಾಕ್ಟೀರಿಯಾ ಅಥವಾ ಶಿಲೀಂದ್ರಗಳ ಸೋಂಕಿಗೆ ತುತ್ತಾಗುವ ಅಪಾಯವಿರುತ್ತದೆ.

* ಉಗುರು ಕತ್ತರಿಸಲು ನೇಲ್‌ ಕಟರ್‌ ಅನ್ನೇ ಬಳಸಿ. ಹಲ್ಲು, ಬ್ಲೇಡ್‌ ಬಳಸಿ ಉಗುರು ಕತ್ತರಿಸುವುದು ಸರಿಯಾದ ವಿಧಾನವಲ್ಲ.

*ಮನೆಕೆಲಸ ಮಾಡುವಾಗ ಉಗುರುಗಳಿಗೆ ಹಾನಿಯಾಗದಂತೆ ಗ್ಲೌಸ್‌ ಧರಿಸಬಹುದು.

Advertisement

* ರಾತ್ರಿ ಮಲಗುವ ಮೊದಲು, ಬೆಚ್ಚಗಿನ ನೀರಿನಲ್ಲಿ ಕೈ ತೊಳೆದು, ಉಗುರುಗಳ ಸುತ್ತ ಆಲಿವ್‌ಎಣ್ಣೆ ಮತ್ತು ವಿಟಮಿನ್‌ “ಇ’ ಸೇರಿಸಿ ಹಚ್ಚಿಕೊಳ್ಳಿ.

* ಉಗುರುಗಳು ಆರೋಗ್ಯಕ್ಕೆ ಪ್ರೊಟೀ, ಕ್ಯಾಲಿÒಯಂ ಅತ್ಯಗತ್ಯ. ಕ್ಯಾಲ್ಸಿಯಂ ಕೊರತೆಯಿಂದ ಉಗುರಿನ ಮೇಲೆ ಗೆರೆಗಳ ಗುರುತು ಮೂಡುತ್ತದೆ. ಆದ್ದರಿಂದ, ಸಾಕಷ್ಟು ಹಣ್ಣು, ಹಸಿರು ತರಕಾರಿ, ಹಾಲು, ಪನ್ನೀರ್‌, ಸೋಯಾ ಸೇವಿಸಿ.

* ಯಾವಾಗಲೂ ಉಗುರುಗಳಿಗೆ ನೇಲ್‌ ಪಾಲಿಶ್‌ ಹಚ್ಚಬೇಡಿ. ಉಗುರುಗಳು ಗಾಳಿ ಸೇವಿಸಬೇಕು.

*ನೇಲ್‌ ಪಾಲಿಶ್‌ನಲ್ಲಿರುವ ಅಸಿಟೋನ್‌ ಎಂಬ ರಾಸಾಯನಿಕ, ಉಗುರಿನ ತೇವಾಂಶವನ್ನು ಒಣಗಿಸುತ್ತದೆ. ಹಾಗಾಗಿ, ಕಡಿಮೆ ಅಸಿಟೋನ್‌ ಅಂಶವಿರುವ ಉಗುರು ಉತ್ಪನ್ನಗಳಿಗೆ ಆದ್ಯತೆ ಕೊಡಿ.

Advertisement

Udayavani is now on Telegram. Click here to join our channel and stay updated with the latest news.

Next