ಬೆರಳುಗಳ ಉಗುರುಗಳಿಗೆ ಮತ್ತು ಕಾಲೆºರಳುಗಳ ಉಗುರುಗಳಿಗೆ ಬಣ್ಣ ನೀಡಲು ನೈಲ್‌ಪಾಲಿಷ್‌ನ್ನು ಬಳಸಲಾಗುತ್ತದೆ. ನೈಲ್‌ಪಾಲಿಷ್ ಉಗುರುಗಳು ಅಂದವಾಗಿ ಕಾಣುವಂತೆ ಮಾಡುತ್ತವೆ, ಮಾತ್ರವಲ್ಲದೇ ಉಗುರಿಗೆ ರಕ್ಷಣೆಯನ್ನೂ ನೀಡುತ್ತದೆ. ಈಗ ಮಾರುಕಟ್ಟೆಯಲ್ಲಿ ಬಗೆಬಗೆಯ ನೈಲ್‌ಪಾಲಿಷ್‌ಗಳು ಲಭ್ಯವಿವೆ. ಉಡುಪಿಗೆ ತಕ್ಕ ವಿವಿಧ ಬಣ್ಣದ ಬಣ್ಣಗಳನ್ನು ಬಳಸುವುದು ಈಗಿನ ಟ್ರೆಂಡ್. ದಿನಕ್ಕೊಂದು ಬಣ್ಣ ಬಳಸಲು ಸಾಧ್ಯ ಇಲ್ಲ. ಯಾಕೆಂದರೆ ಪ್ರತಿದಿನ ನೈಲ್‌ಪಾಲಿಷ್ ರಿಮೂವ್ ಮಾಡೋದು ಅಷ್ಟೊಂದು ಸುಲಭವಿಲ್ಲ. ರಿಮೂವರ್ ಬಳಸಿ ನೈಲ್‌ಪಾಲಿಷ್ ರಿಮೂಮ್ ಮಾಡಬಹುದು. ಆದರೆ, ದಿನಕ್ಕೊಂದು ಬಣ್ಣ ಹಚ್ಚುವಾಗ ಬಣ್ಣಗಳು ಉಗುರಿಗೆ ಹಾನಿ ಉಂಟುಮಾಡಬಹುದು. ಉಗುರಿನ ಸೌಂದರ್ಯ ಮತ್ತು ಸುರಕ್ಷತೆಯೂ ಅಷ್ಟೇ ಮುಖ್ಯ. ಅಂದವಾದ ಆರೋಗ್ಯಕರವಾದ ಉಗುರಿಗೆ ಬಣ್ಣ ಹಚ್ಚುವಾಗ ತಿಳಿದಿರಬೇಕಾದ ಕೆಲ ಸಂಗತಿಗಳು:
.ಒಳ್ಳೆಯ ಬ್ರಾಂಡಿನ ನೈಲ್‌ಪಾಲಿಷ್‌ನ್ನು ಆರಿಸಿಕೊಳ್ಳಿ.
.ಉಗುರಿಗೆ ನೈಲ್‌ಪಾಲಿಷ್ ಹಚ್ಚುವಾಗ ಮೊದಲು ಉಗುರಿಗೆ ಬೇಸ್ ಕೋಟ್ ಹಚ್ಚುವುದನ್ನು ಮರೆಯದಿರಿ.
.ಉಗುರಿನ ಸುತ್ತ ಚರ್ಮದ ಸಿಪ್ಪೆ ಏಳುವುದನ್ನು ತಪ್ಪಿಸಲು ಉಗುರಿನ ಹೊರಪದರಕ್ಕೆ ಎಣ್ಣೆ ಹಚ್ಚಿ ಮಸಾಜ್ ಮಾಡಿ.
.ನೈಲ್‌ಪಾಲಿಷ್‌ನ್ನು ಹೆಚ್ಚು ಧಗೆ ಅಥವಾ ಉಷ್ಣತೆಯಿರುವ ಜಾಗದಲ್ಲಿ ಇಡಬೇಡಿ. ಯಾವಾಗಲೂ ಅದನ್ನು ತಂಪಾದ ಸ್ಥಳದಲ್ಲಿ ಇಲ್ಲವೆ ರೆಫ್ರಿಜರೇಟರ್‌ನಲ್ಲಿ ಇಡುವುದು ಒಳ್ಳೆಯದು.
.ಕ್ವಿಕ್ ಡ್ರೈ ಎಂದು ಹಾಕಿರುವ ನೈಲ್‌ಪಾಲಿಷ್‌ಗಳನ್ನು ಬಳಸದಿರಿ. ಇವು ಹೆಚ್ಚು ದುಬಾರಿ ಮತ್ತು ಉಗುರನ್ನು ಹಾಳುಮಾಡುತ್ತದೆ.
.ನೈಲ್‌ಪಾಲಿಷ್ ಹಚ್ಚಿಕೊಳ್ಳುವ ಮುನ್ನ ಶೇಕ್ ಮಾಡಬೇಡಿ. ಬದಲಿಗೆ ಅಂಗೈಯಲ್ಲಿ ಅದನ್ನು ಹಿಡಿದು ಉರುಳಿಸಿ. ಇದರಿಂದ ಗಾಳಿಗುಳ್ಳೆಗಳು ಉಂಟಾಗುವುದನ್ನು ತಡೆಯುತ್ತದೆ.
.ನೈಲ್‌ಪಾಲಿಷ್ ಹಚ್ಚಿದ ನಂತರ ಉಗುರುಗಳನ್ನು ನಲ್ಲಿ ನೀರಿಗೆ ಕೈಯೊಡ್ಡಿ. ಇದರಿಂದ ನೈಲ್‌ಪಾಲಿಷ್ ಸಹಜವಾಗಿ ವೇಗವಾಗಿ ಒಣಗುತ್ತದೆ.
.ನೈಲ್‌ಪಾಲಿಷ್ ಹಚ್ಚಿದ ನಂತರ ಬಿಸಿನೀರನ್ನು ಉಗುರಿಗೆ ಸೋಕಿಸಬೇಡಿ. ಇದು ನೈಲ್‌ಪಾಲಿಷ್‌ನ ಬಣ್ಣವನ್ನು ಹರಡಿಕೊಳ್ಳುವಂತೆ ಮಾಡುತ್ತದೆ.
.ಹೆಚ್ಚಿನ ಕೋಟ್ ಹಚ್ಚಬೇಡಿ. ನೈಲ್‌ಪಾಲಿಷ್‌ನ್ನು ಹೆಚ್ಚಿನ ಕೋಟ್‌ಗಳಲ್ಲಿ ಹಚ್ಚಿದರೆ ಉಗುರಿಗೆ ಹಾನಿಯಾಗುತ್ತದೆ.