Advertisement

ಚುನಾವಣೋತ್ತರ ಮಹಾ ಘಟಬಂಧನ: ಇಂದು ಮಮತಾ, ನಾಯ್ಡು ಮಹತ್ವದ ಭೇಟಿ

09:11 AM May 21, 2019 | Team Udayavani |

ಕೋಲ್ಕತ : ಕೇಂದ್ರದಲ್ಲಿ ಸರಕಾರ ರಚಿಸುವ ಸಾಧ್ಯತೆಗಳನ್ನು ದೃಷ್ಟಿಯಲ್ಲಿರಿಸಿಕೊಂಡು ಚುನಾವಣೋತ್ತರ ಮಹಾ ಮೈತ್ರಿಕೂಟವನ್ನು (ಮಹಾ ಘಟಬಂಧನ) ರಚಿಸುವ ದಿಶೆಯಲ್ಲಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಮತ್ತು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ ಒಂದು ದಿನದ ತರುವಾಯ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಅವರು ಇಂದು ಸೋಮವಾರ ಪಶ್ಚಿಮ ಬಂಗಾಲದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಭೇಟಿಯಾಗಿ ಮಹತ್ವದ ಮಾತುಕತೆ ನಡೆಸಲಿದ್ದಾರೆ ಎಂದು ವರದಿಗಳು ತಿಳಿಸಿವೆ.

Advertisement

ಮೇ 23ರಂದು ಲೋಕಸಭಾ ಚುನಾವಣೆ ಫ‌ಲಿತಾಂಶ ಪ್ರಕಟಗೊಳ್ಳುವ ಮುನ್ನ ವಿರೋಧ ಪಕ್ಷಗಳ ಚುನಾವಣೋತ್ತರ ಮೈತ್ರಿಕೂಟವನ್ನು ರೂಪಿಸುವ ಉದ್ದೇಶದಲ್ಲಿ ಟಿಡಿಪಿ ಅಧ್ಯಕ್ಷ ನಾಯ್ಡು ಅವರು ಮಮತಾ ಬ್ಯಾನರ್ಜಿ ಅವರನ್ನು ಭೇಟಿಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮಮತಾ ಬ್ಯಾನರ್ಜಿ ಅವರನ್ನು ಇಂದು ಸೋಮವಾರ ಮಧ್ಯಾಹ್ನ ಸಚಿವಾಯಲದಲ್ಲಿ ಭೇಟಿಯಾಗುವ ನಾಯ್ಡು ಅವರು ಚುನಾವಣೋತ್ತರ ಮಹಾ ಮೈತ್ರಿಕೂಟ ರಚಿಸುವ ತಂತ್ರಗಾರಿಕೆಯನ್ನು ಮಮತಾ ಅವರೊಂದಿಗಿನ ಭೇಟಿಯಲ್ಲಿ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next