Advertisement

ಪತ್ನಿಯ ಫೇಸ್‌ಬುಕ್ ಖಾತೆಯಲ್ಲಿ ಲೈವ್ ಸ್ಟ್ರೀಮ್ ಮಾಡುತ್ತಲೇ ನೇಣಿಗೆ ಶರಣಾದ ಪತಿ

10:29 PM Apr 04, 2023 | Team Udayavani |

ನಾಗ್ಪುರ : ಕುಡಿದ ಅಮಲಿನಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿಯ ಫೇಸ್ ಬುಕ್ ಖಾತೆಯ ಮೂಲಕ ಲೈವ್ ವಿಡಿಯೋ ಮಾಡುತ್ತಲೇ ನೇಣಿಗೆ ಶರಣಾದ ಘಟನೆ ನಾಗ್ಪುರದಲ್ಲಿ ಸಂಭವಿಸಿದೆ.

Advertisement

ಮೃತ ವ್ಯಕ್ತಿಯನ್ನು ಕೃತಾಂಕ್ ಸಿದ್ದಾರ್ಥ್ ಡೊಂಗ್ರೆ (27) ಎನ್ನಲಾಗಿದೆ.

ಕೆಲ ಸಮಯದಿಂದ ಕೆಲಸವಿಲ್ಲದೆ ಮನೆಯಲ್ಲೇ ಇದ್ದ ಸಿದ್ದಾರ್ಥ್ ವಿಪರೀತ ಕುಡಿತದ ಚಟ ಹೊಂದಿದ್ದನಂತೆ ಅಲ್ಲದೆ ದಿನಂಪ್ರತಿ ಕುಡಿದು ಪತ್ನಿ ಜೊತೆ ಜಗಳವಾಡುತ್ತಿದ್ದ ಎನ್ನಲಾಗಿದೆ ಇದರಿಂದ ಬೇಸತ್ತ ಪತ್ನಿ ತವರು ಮನೆಗೆ ಹೋಗಿದ್ದಳು ಎನ್ನಲಾಗಿದ್ದು ಇದರಿಂದ ಮನನೊಂದ ಪತಿ ಸೋಮವಾರ ರಾತ್ರಿ ವಿಪರೀತ ಮದ್ಯ ಸೇವಿಸಿ ಮಧ್ಯರಾತ್ರಿ 1.30 ರ ಸುಮಾರಿಗೆ ತನ್ನ ಪತ್ನಿಯ ಫೇಸ್‌ಬುಕ್ ಖಾತೆಯಿಂದ ಸುಮಾರು ನಲ್ವತ್ತು ನಿಮಿಷಗಳ ಕಾಲ ಲೈವ್ ವಿಡಿಯೋ ಮಾಡಿ ಮನೆಯ ಕೊನೆಯಲ್ಲಿ ನೇಣಿಗೆ ಶರಣಾಗಿದ್ದಾನೆ.

ಇತ್ತ ಗೆಳೆಯರ ಮೊಬೈಲ್ ಗೆ ಫೇಸ್‌ಬುಕ್ ಲೈವ್ ನೋಟಿಫಿಕೇಶನ್ ಹೋಗುತ್ತಲೇ ಗಾಬರಿಗೊಂಡ ಸ್ನೇಹಿತರು ಹಾಗೂ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿ ಮನೆಯತ್ತ ದೌಡಾಯಿಸಿದ್ದಾರೆ. ಕೂಡಲೇ ಆತನನ್ನು ಆಸ್ಪತ್ರೆಗೆ ಕರೆದೊಯ್ದರೂ ಅಷ್ಟೋತ್ತಿಗಾಗಲೇ ಸಿದ್ದಾರ್ಥ್ ಚಿರನಿದ್ರೆಗೆ ಜಾರಿದ್ದ ಎನ್ನಲಾಗಿದೆ.

ಸದ್ಯ ಪೊಲೀಸರು ಸ್ವಾಭಾವಿಕ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿದ್ದಾರೆ.

Advertisement

ಇದನ್ನೂ ಓದಿ: ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದಿಂದ ರವೀಂದ್ರನಾಥ್ ಸ್ಪರ್ಧಿಸುವಂತೆ ಕಾರ್ಯಕರ್ತರ ಒತ್ತಾಯ

 

Advertisement

Udayavani is now on Telegram. Click here to join our channel and stay updated with the latest news.

Next