Advertisement

ಪಠ್ಯಪುಸ್ತಕ ಪರಿಷ್ಕರಣೆ ಅವೈಜ್ಞಾನಿಕ, ಅಕಾಲಿಕ: ನಾಗತಿಹಳ್ಳಿ ಚಂದ್ರಶೇಖರ್‌

11:55 PM May 28, 2022 | Team Udayavani |

ಮಂಡ್ಯ: ಪಠ್ಯಪುಸ್ತಕ ಪರಿಷ್ಕರಣೆ ಸಂಪೂರ್ಣ ಅವೈಜ್ಞಾನಿಕ ಹಾಗೂ ಅಕಾಲಿಕವಾಗಿದೆ ಎಂದು ಸಾಹಿತಿ ನಾಗತಿಹಳ್ಳಿ ಚಂದ್ರಶೇಖರ್‌ ಹೇಳಿದರು.

Advertisement

“ಉದಯವಾಣಿ’ ಜತೆಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವರು ತಮ್ಮ ಪಕ್ಷದ ತತ್ವ- ಸಿದ್ಧಾಂತಗಳನ್ನು ಕಚೇರಿಯಲ್ಲಿ ಇಟ್ಟುಕೊಳ್ಳಬೇಕೇ ಹೊರತು ವಿದ್ಯಾರ್ಥಿಗಳ ಮೇಲೆ ಹೇರುವ ಪ್ರಯತ್ನ ಮಾಡಬಾರದು.

ಎಲ್ಲರಿಗೂ ಬೇಕಾಗುವಂತಹ, ಎಲ್ಲರ ಹಿತವನ್ನು ಕಾಪಾಡುವಂಥ ತತ್ವಗಳನ್ನು ಪಠ್ಯದಲ್ಲಿ ಅಳವಡಿಸುವಂತಹ ವಿಶಾಲ ಮನೋಭಾವ ಇದ್ದಾಗ ಇಂತಹ ತಪ್ಪುಗಳಾಗುವುದಿಲ್ಲ ಎಂದರು.

ನಾನು ಯಾವುದೇ ಪಕ್ಷದ ಪರವಾಗಿಲ್ಲ. ನನ್ನದೇನಿದ್ದರೂ ಮಕ್ಕಳ ಪರ ನಿಲುವು. ಎಲ್ಲ ಪಕ್ಷಗಳ ಸರಕಾರ ಇದ್ದಾಗಲೂ ಅವುಗಳ ತಪ್ಪಿನ ವಿರುದ್ಧ ಮಾತನಾಡಿದ್ದೇನೆ. ಯಾರನ್ನೋ ಮೆಚ್ಚಿಸುವ ಕೆಲಸ ಮಾಡುವವರನ್ನು ಸಮಿತಿಗೆ ನೇಮಿಸಬಾರದು. ಪರಿಷ್ಕರಣೆಯಾಗಬೇಕಾದರೆ ಶಿಕ್ಷಣ ತಜ್ಞರು, ಪಂಡಿತರೊಂದಿಗೆ ಚರ್ಚಿಸಿ, ಕಾಲಾವಕಾಶ ನೀಡಿ ಜಾರಿಗೆ ತರಬೇಕು. ತರಾತುರಿಯಲ್ಲಿ ಪರಿಷ್ಕರಿಸಿ ಗೊಂದಲ ಉಂಟು ಮಾಡಬಾರದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next