ಬೆಂಗಳೂರು: ದೇಶದ್ರೋಹಿಗಳು, ದೇಶದ್ರೋಹದ ಚಟುವಟಿಕೆಯಲ್ಲಿ ಪಾಲ್ಗೊಳ್ಳುವವರ ಪ್ರಕರಣಗಳನ್ನು ಹಿಂಪಡೆಯುವ ಸರಕಾರ ಸ್ವಾಮೀಜಿ ಗಳಿಗೆ ಬೆದರಿಕೆ ಹಾಕುವುದು ಖಂಡಿತ ಸರಿಯಲ್ಲ. ನಾವೆಲ್ಲರೂ ಸ್ವಾಮೀಜಿಗಳ ಪರವಾಗಿ ಇದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತಿಳಿಸಿದರು.
ವಿಶ್ವ ಒಕ್ಕಲಿಗರ ಮಹಾಸಂಸ್ಥಾನದ ಶ್ರೀ ಚಂದ್ರಶೇಖರಾನಂದನಾಥ ಸ್ವಾಮೀಜಿ ಅವರನ್ನು ಭೇಟಿ ಮಾಡಿದ ವಿಜಯೇಂದ್ರ ಸುದ್ದಿಗಾರರೊಂದಿಗೆ ಮಾತನಾಡಿದರು.
ವಕ್ಫ್ ವಿಚಾರದಲ್ಲಿ ನಡೆದ ಹೋರಾಟದಲ್ಲಿ ಶ್ರೀಗಳು ರಾಜ್ಯ ಸರಕಾರದ ನಡವಳಿಕೆ ವಿರುದ್ಧ ಆಕ್ರೋಶಭರಿತರಾಗಿ ಹೇಳಿಕೆ ಕೊಟ್ಟಿದ್ದರು. ಬಳಿಕ ಕ್ಷಮೆಯನ್ನೂ ಯಾಚಿಸಿದ್ದಾರೆ. ಆದರೂ ಸರಕಾರವು ಎಫ್ಐಆರ್ ದಾಖಲು ಮಾಡಿ ತನಿಖೆಗೆ ಬರಲು ಒತ್ತಾಯಿಸಿದೆ ಎಂದರು.
ದ್ವಿಮುಖ ನೀತಿ
ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತ ನಾಡಿ, ಪಾಕಿಸ್ಥಾನ್ ಜಿಂದಾಬಾದ್ ಎಂದ ವರನ್ನು ರಕ್ಷಿಸುತ್ತೀರಿ. ಕ್ಷಮೆ ಕೇಳಿದ ಮೇಲೂ ಸ್ವಾಮೀಜಿ ವಿರುದ್ಧ ಕ್ರಮ ಜರಗಿಸುವುದಾದರೆ ದ್ವಿಮುಖ ನೀತಿ ನಿಮ್ಮದಲ್ಲವೇ? ಎಂದು ಪ್ರಶ್ನಿಸಿದರು.