Advertisement

ನೋಟಿದ್ದವರನ್ನು ಬೆದರಿಸುತ್ತಿದ್ದ ನಾಗರಾಜ್‌ ಮತ್ತು ಸಹಚರರು

11:35 AM May 06, 2017 | Team Udayavani |

ಬೆಂಗಳೂರು: ಬ್ಲ್ಯಾಕ್‌ ಆ್ಯಂಡ್‌ ವೈಟ್‌ ದಂಧೆ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಪಾಲಿಕೆ ಮಾಜಿ ಸದಸ್ಯ ನಾಗರಾಜ್‌ನ ಸಹಚರರನ್ನು ಪೊಲೀಸರು ಈಗಾಗಲೇ ಬಂಸಿದ್ದು, ಆರೋಪಿಗಳ ವಿಚಾರಣೆ ವೇಳೆ ದಂಧೆಯ ಇನ್ನಷ್ಟು ಕರಾಳತೆ ಬಯಲಾಗಿದೆ. ನಾಗರಾಜ್‌ ಹಳೆ ನೋಟು ಹೊಂದಿದ್ದವರನ್ನು ಮಾತ್ರವಲ್ಲದೇ, ಹೊಸ ನೋಟಗಳನ್ನು ಹೊಂದಿದ್ದವರನ್ನು ಬೆದರಿಸಿ ಸುಲಿಗೆ ಮಾಡುತ್ತಿದ್ದ ಎಂದು ಬಂತರಾದ ಶರವಣ, ಶ್ರೀನಿವಾಸ್‌ ಮತ್ತು ಜೈ ಕೃಷ್ಣ ವಿಚಾರಣೆ ಬಾಯ್ಬಿಟ್ಟಿದ್ದಾರೆ. 

Advertisement

ಶರವಣ, ನೋಟು ಬದಲಾವಣೆ ಮಾಡಿಕೊಳ್ಳಲು ಬಯಸುವ ಉದ್ಯಮಿಗಳನ್ನು ನಾಗಾರಾಜ್‌ ಬಳಿ ಕಳುಹಿಸುತ್ತಿದ್ದ. ಇದೇ ರೀತಿ ಶರವಣ ಇತ್ತೀಚೆಗೆ ಮಂಜುನಾಥ್‌ ಎಂಬಾತನನ್ನು ನೋಟು ಬದಲಾವಣೆಗೆ ಕಳುಹಿಸಿದ್ದ. ಆದರೆ, ಮಂಜುನಾಥ್‌ ಮೇಲೆ ನಾಗರಾಜ್‌ ಮತ್ತು ಈತನ ಸಹಚರರು ಹಲ್ಲೆ ನಡೆಸಿ.ಬೆದರಿಕೆಯೊಡ್ಡಿ ಹಣ ಕಿತ್ತುಕೊಂಡಿದ್ದರು. ಬಳಿಕ ಈ ಹಣ ಹಂಚಿಕೆ ಸಂದರ್ಭದಲ್ಲಿ ನಾಗರಾಜ್‌ ಮತ್ತು ಶರವಣ ನಡುವೆ ಗಲಾಟೆಯಾಗಿತ್ತು. ಇದರಿಂದ ಆಕ್ರೋಶಗೊಂಡಿದ್ದ ಶರವಣ, ನಾಗರಾಜ್‌ ವಿರುದ್ಧ ದೂರು ನೀಡುವಂತೆ ಮಂಜುನಾಥ್‌ಗೆ ಒತ್ತಾಯಿಸಿದ್ದ. 

ದೂರಿನಲ್ಲೇನಿದೆ?: ನಾಗರಾಜ್‌, ಮಂಜುನಾಥ್‌ ಮತ್ತು ಇತರೆ ಎಂಟು ಮಂದಿ ಉದ್ಯಮಿಗಳಿಂದ ಹೊಸ ನೋಟುಗಳನ್ನು ಕೊಡುವುದಾಗಿ ಹೇಳಿ 25.60 ಲಕ್ಷ ಪಡೆದುಕೊಂಡಿದ್ದ. ಈ ಹಣ ಬೆಂಗಳೂರು, ಬೆಂಗಳೂರು ಗ್ರಾಮಾಂತರ ಮತ್ತು ಮಂಡ್ಯ ಜಿಲ್ಲೆಯ 9 ಮಂದಿಗೆ ಸೇರಿದ್ದು ಎನ್ನಲಾಗಿದ್ದು ಅದರ ಪರಿಶೀಲನೆ ನಡೆಯುತ್ತಿದೆ. ಉದ್ಯಮಿ ಉಮೇಶ್‌ ಕೊಟ್ಟ ಅಪಹರಣ ಮತ್ತು ಬೆದರಿಕೆ ಪ್ರಕರಣದ ಎಫ್ಐಆರ್‌ನಲ್ಲೂ ಶರವಣನ ಹೆಸರೂ ಇದ್ದು, ಘಟನೆ ವೇಳೆ ನಾಗರಾಜ್‌ ಮನೆಯಲ್ಲಿಯೇ ಇದ್ದ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಆರೋಪಿ ನಾಗರಾಜ್‌ ಜೈಕೃಷ್ಣ ಮಾತ್ರವಲ್ಲದೇ ಇನ್ನೂ ಮೂವರು ಬೌನ್ಸರ್‌ಗಳನ್ನು ನೇಮಕ ಮಾಡಿಕೊಂಡಿದ್ದ. ಹಣ ತಂದ ವ್ಯಕ್ತಿಗಳನ್ನು ಬೌನ್ಸರ್‌ಗಳು ಹಲ್ಲೆ ಮಾಡಿ ಬೆದರಿಸುತ್ತಿದ್ದರು ಮತ್ತು ನಾಗರಾಜ್‌ ಹಾಗೂ ಅವನ ಮಕ್ಕಳಾದ ಗಾಂ, ಶಾಸಿŒ ಪಿಸ್ತೂಲ್‌ ತೋರಿಸಿ ಬೆದರಿಕೆ ಹಾಕುತ್ತಿದ್ದರು. ಇತರರು ಬೆಸ್‌ಬಾಲ್‌ ಬ್ಯಾಟ್‌ನಿಂದ ಹೊಡೆದು ಹೊರಹಾಕುತ್ತಿದ್ದರು ಎಂದು ಪೊಲೀಸರಿಗೆ ಸಿಕ್ಕಿರುವ ದೂರಿನ ಪ್ರತಿಯಲ್ಲಿ ಆರೋಪಿಸಲಾಗಿದೆ.

ತಮಿಳುನಾಡಿನಲ್ಲಿ ಎಕ್ಸ್‌ಚೆಂಜ್‌: ಬ್ಲ್ಯಾಕ್‌ ಆ್ಯಂಡ್‌ ವೈಟ್‌ ದಂಧೆಯಲ್ಲಿ ಪಡೆದುಕೊಳ್ಳುತ್ತಿದ್ದ ಹಳೆ ನೋಟುಗಳನ್ನು ತಮಿಳುನಾಡಿನ ಕೆಲ ದೇವಾಲಯಗಳಿಗೆ ಕೊಂಡೊಯ್ದು ಹಳೆ ನೋಟುಗಳನ್ನು ಕೊಟ್ಟು ಹೊಸ ನೋಟುಗಳನ್ನು ತರುತ್ತಿರುವುದಾಗಿ ಶ್ರೀನಿವಾಸ್‌ ಒಪ್ಪಿಕೊಂಡಿದ್ದು, ಶೇ.40 ರಿಂದ 50 ರಷ್ಟು ಕಮಿಷನ್‌ ದರದಲ್ಲಿ ದಂಧೆ ನಡೆಸಲಾಗುತ್ತಿತ್ತು ಎಂದು ಹೇಳಿರುವುದಾಗಿ ಮೂಲಗಳು ತಿಳಿಸಿವೆ.

Advertisement

ಮತ್ತಿಬ್ಬರ ಬಂಧನ: ನಾಗರಾಜ್‌ನ ಇನ್ನಿಬ್ಬರು ಸಹಚರರನ್ನು ಎಸಿಪಿ ರವಿಕುಮಾರ್‌ ನೇತೃತ್ವದ ತಂಡ ಶುಕ್ರವಾರ ಬಂಸಿದೆ. ಅಪ್ಪು ಅಲಿಯಾಸ್‌ ಸತೀಶ್‌ ಮತ್ತು ಶರವಣ ಎಂಬುವವರನ್ನು ಬಂಸಲಾಗಿದೆ. 

ನಾಗರಾಜ್‌ಗಿಲ್ಲ ಜಾಮೀನು
ಬೆಂಗಳೂರು:
ಅಪಹರಣ, ಜೀವ ಬೆದರಿಕೆ, ಬ್ಲ್ಯಾಕ್‌ ಅಂಡ್‌ ವೈಟ್‌ ದಂಧೆ ಪ್ರಕರಣಗಳ ಆರೋಪಿ ಮಾಜಿ ಕಾರ್ಪೋರೇಟರ್‌ ವಿ.ನಾಗರಾಜುವಿನ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಶುಕ್ರವಾರ ಸೆಷನ್ಸ್‌ ಕೋರ್ಟ್‌ ವಜಾಗೊಳಿಸಿದೆ. ಗುರುವಾರ ನಾಗನ ಜಾಮೀನು ಅರ್ಜಿವಿಚಾರಣೆ ಪೂರ್ಣಗೊಳಿಸಿ ತೀರ್ಪು ಕಾಯ್ದಿರಿಸಿದ್ದ ಸೆಷನ್ಸ್‌ ನ್ಯಾಯಾಲಯದ ನ್ಯಾಯಾಧೀಶರಾದ ಬನ್ನಿಕಟ್ಟೆ ಹನುಮಂತಪ್ಪ ಅವರು ನಾಗರಾಜ್‌ಗೆ ಜಾಮೀನು ನೀಡಲು ನಿರಾಕರಿಸಿ, ಜಾಮೀನು ಅರ್ಜಿ ವಜಾಗೊಳಿಸಿದರು. ನಾಗರಾಜ್‌ ವಿರುದ್ಧ 1981 ರಿಂದಲೂ ದೂರುಗಳು ಬರುತ್ತಿವೆ.

ಸಮಾಜ ಸೇವೆಯ ಬೋರ್ಡ್‌ ಹಾಕಿಕೊಂಡು ಅಕ್ರಮಗಳಲ್ಲಿ ಭಾಗಿಯಾಗಿದ್ದಾನೆ. ಪೊಲೀಸರ ದಾಳಿ ವೇಳೆ ಆತನ ಮನೆಯಲ್ಲಿ ಸಿಕ್ಕಿದ ಭಾರೀ ಪ್ರಮಾಣದ ಹಣ ಎಲ್ಲಿಂದ ಬಂದಿತ್ತು. ವಿಡಿಯೋದಲ್ಲಿ ಹಿರಿಯ ಪೊಲೀಸ್‌ ಅಕಾರಿಗಳ ವಿರುದ್ಧವೇ ಆರೋಪ ಮಾಡಿದ್ದಾನೆ. ಕಳೆದ 30 ದಿನಗಳಿಂದ ಆತ  ತಲೆಮರೆಸಿ ಕೊಂಡಿದ್ದಾನೆ. ಹೀಗಾಗಿ ಬಂಸಿ ಸಮಗ್ರ ತನಿಖೆ ನಡೆಸಬೇಕಿದೆ, ಯಾವುದೇ ಕಾರಣಕ್ಕೂ ಜಾಮೀನು ನೀಡಬಾರದು ಎಂಬ ಸರ್ಕಾರದ ಪರ ವಕೀಲರ ವಾದ ಪುರಸ್ಕರಿಸಿದ ನ್ಯಾಯಾಧೀಶರು ಜಾಮೀನು ಅರ್ಜಿ ವಜಾಗೊಳಿಸಿದರು.

ಡೈರಿ ಪತ್ತೆ 
ಬಂತ ಶ್ರೀನಿವಾಸ್‌ ಕಳೆದ ಬಿಬಿಎಂಪಿ ಚುನಾವಣೆಯಲ್ಲಿ ಸುಧಾಮನಗರ ವಾರ್ಡ್‌ನಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಸಿ, ಕಾಂಗ್ರೆಸ್‌ ಅಭ್ಯರ್ಥಿ ಯುವರಾಜ್‌ ವಿರುದ್ಧ ಕೇವಲ 360 ಪರಾಜಿತ ಗೊಂಡಿದ್ದ. ಶ್ರೀನಿವಾಸ್‌ ತಾನು ಯಾರ್ಯಾರಿಗೆ ನೋಟುಗಳನ್ನು ಬದಲಾವಣೆ ಮಾಡಿಸಿಕೊಟ್ಟಿದ್ದೇನೆ ಎಂಬುದನ್ನು ಡೈರಿಯಲ್ಲಿ ನೊಂದಾ ಯಿಸಿದ್ದಾನೆ. ಈ ಡೈರಿ ಶ್ರೀನಿವಾಸ್‌ ಮನೆಯಲ್ಲಿ ಪತ್ತೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next