Advertisement
ಆದರೆ ಇತ್ತೀಚಿನ ದಿನಗಳಲ್ಲಿ ನಾಗಬನಗಳ ಮರಗಳನ್ನು ಕಡಿಯಲಾಗುತ್ತಿದೆ. ಗಿಡ – ಬಳ್ಳಿಗಳನ್ನು ನಾಶ ಮಾಡಲಾಗುತ್ತಿದೆ. ಕಾಂಕ್ರೀಟ್ ಬಳಸಿ ನಾಗ ವೇದಿಕೆಯೋ, ನಾಗ ಗುಡಿಯನೋ, ನಾಗ ಮಂದಿರವನೋ ನಿರ್ಮಿಸಲಾಗುತ್ತಿದೆ. ಈ ಅಸಂಗತವನ್ನು ಜೀರ್ಣೋದ್ಧಾರ ಎಂದು ಹೇಳಲಾಗುತ್ತದೆ. ನಮ್ಮ ನಾಗದೇವರು ತಂಪನ್ನು ಬಯಸುವ, ತಂಪಾದ ಪರಿಸರದಲ್ಲಿ ವಾಸಿಸುವ ಸರೀಸೃಪ ತಾನೇ ? ಆದುದರಿಂದಲೇ ನಾಗನಿಗೆ ತನು ಎರೆಯುತೇ¤ವೆ.ನಾವು ತಂಪೆಂದು ಭಾವಿಸಿರುವ ಹಾಲು, ಸೀಯಾಳ ಎರೆಯುತೇ¤ವೆ. ಈ ತನು ಅರ್ಪಣೆಯ ಕ್ರಮ ಈಗಿನದ್ದಲ್ಲ. ಬಹಳಷ್ಟು ಪುರಾತನವಾದುದು. ಇದು ನಾಗಾರಾಧನೆಯ ಮೂಲ ಮತ್ತು ಆಶಯವೂ ಹೌದು. ಈ ಪ್ರಾಚೀನ ಆಶಯದ ಕುರಿತು ಯಾರು ಮುಗ್ಧ ಭಕ್ತರಿಗೆ ಹೇಳಬೇಕೋ ಅಂತಹವರೇ ಇಂದು ಮೌನಿಗಳಾಗುತ್ತಾರೆ. ಒಂದೋ ಇವರಿಗೆ ಈ ಮೂಲ ತಿಳಿದಿಲ್ಲ ಅಥವಾ ಗೊತ್ತಿದ್ದೂ ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ.
Related Articles
Advertisement
ನಾಗರ ಪಂಚಮಿ ಗಿಡಮರಬೆಳೆಸುವ ಆಂದೋಲನಕ್ಕೆ ಪ್ರೇರಣೆ ನೀಡಲಿ : ನಾಗರ ಪಂಚಮಿಯಂದು ಹಾಲು, ಸೀಯಾಳ, ಹೂ – ಹಣ್ಣುಗಳೊಂದಿಗೆ ಒಂದು ಗಿಡವನ್ನು (ಮರವಾಗುವ, ಹೂ ಬಿಡುವ) ನಮ್ಮ ಆದಿ – ಮೂಲಸ್ಥಾನಕ್ಕೆ ಕೊಂಡೊಯ್ಯುವ, ನಾಗಪೂಜೆಯ ಬಳಿಕ ಬನದ ಪರಿಸರದಲ್ಲಿ ಗಿಡನೆಡುವ ಮೂಲಕ ಬನ (ವನ) ನಿರ್ಮಿಸೋಣ. ನಾವಿಷ್ಟು ಮನ ಮಾಡದಿದ್ದರೆ ನಮ್ಮ ಮಕ್ಕಳಿಗೆ ಗಿಡ – ಮರಗಳಿಲ್ಲ ಕಾಂಕ್ರೀಟ್ ವೇದಿಕೆಯನ್ನು, ಗುಡಿಯನ್ನು, ಮಂದಿರವನ್ನು, ನಾಗಬನವೆಂದು ತೋರಿಸುವ ಪ್ರಮೇಯ ಎದುರಾಗುವುದು ಖಂಡಿತ ಎಂಬಂತಾಗಿದೆ.
ನಾಗ – ಭೂಮಿ – ವೃಕ್ಷದ ನಡುವೆ ಅವಿನಾಭಾವ ಸಂಬಂಧ : ನಾಗ ಭೂಮಿಪುತ್ರನೆಂಬುದು ಪುರಾತನ ತಿಳುವಳಿಕೆ. ನಾಗ – ವೃಕ್ಷ ಅವಳಿ ಚೇತನಗಳೆಂಬುದು ಒಂದು ಆದಿಮ ಸ್ವೀಕಾರ. ಆದುದರಿಂದ ಭೂಮಿ – ನಾಗ – ವೃಕ್ಷದ ನಡುವೆ ಅವಿನಾಭಾವ ಸಂಬಂಧವನ್ನು ಕಲ್ಪಿಸಲಾಗಿದೆ. ನಾಗ ಮಾನವನಿಂದ ಮೊತ್ತ ಮೊದಲು ದೈವೀಖರಿಸಲ್ಪಟ್ಟ ಪ್ರಾಣಿ. ಕರಾವಳಿ ತುಳುನಾಡಿನಲ್ಲಿ ನಾಗ ಆದಿ ದೈವ. ಇತ್ಯಾದಿ ವೈವಿಧ್ಯಮಯ ಆರಾಧನಾ ವಿಧಿಗಳು ನಾಗನಿಗೆ ಸಂಬಂಧಪಟ್ಟು ರೂಢಿಯಲ್ಲಿವೆ.
ನಾಗ ನೆಲೆಗಳೇ ಮೂಲಸ್ಥಾನ ಆದಿಸ್ಥಾನಗಳುಪುರಾತನ ನಾಗ ನೆಲೆಗಳು ಇಂದು ನಮ್ಮ ಆದಿಸ್ಥಾನ – ಮೂಲಸ್ಥಾನಗಳಾಗಿವೆ. ಈ ಸ್ಥಾನಗಳ ಜೀರ್ಣೋದ್ಧಾರ ನಮಗೆ ಅಪ್ಯಾಯತೆಯನ್ನು, ಧನ್ಯತೆಯನ್ನು ಒದಗಿಸುತ್ತದೆ. ನಮ್ಮ ಮೂಲಸ್ಥಾನಕ್ಕೆ ವರ್ಷದಲ್ಲಿ ಎರಡು ಮೂರು ಬಾರಿ ಸಂದರ್ಶಿಸುವ ವೇಳೆ ಆರಾಮವಾಗಿ ಸಂದರ್ಶನ ಸಾಧ್ಯವಾಗುತ್ತದೆ. ಗಿಡ ಮರಗಳಿಲ್ಲ ನಾಗದರ್ಶನ ನಿರಾಳ. ನಮ್ಮ ನಾಗ ಬನ ಭವ್ಯವಾಗಿದೆ ಎಂಬ ಸಂತಸ. – ಕೆ. ಎಲ್. ಕುಂಡಂತಾಯ