Advertisement

Nagaland; ಎಲ್ಲಾ 7 ಎನ್‌ಸಿಪಿ ಶಾಸಕರಿಂದ ಅಜಿತ್ ಪವಾರ್ ಗೆ ಬೆಂಬಲ

08:49 PM Jul 20, 2023 | Team Udayavani |

 ನವದೆಹಲಿ: ನಾಗಾಲ್ಯಾಂಡ್‌ನ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಎಲ್ಲಾ ಏಳು ಶಾಸಕರು ಅಜಿತ್ ಪವಾರ್ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದು, ಚಿಕ್ಕಪ್ಪ ಶರದ್ ಪವಾರ್‌ಗೆ ಭಾರಿ ಹಿನ್ನಡೆಯಾಗಿದೆ.

Advertisement

ಈಶಾನ್ಯ ರಾಜ್ಯದ ಏಳು ಎನ್‌ಸಿಪಿ ಶಾಸಕರು ಗುರುವಾರ ಹೇಳಿಕೆಯಲ್ಲಿ ನಾಗಾಲ್ಯಾಂಡ್ ಎನ್‌ಸಿಪಿ ಕಚೇರಿಯಲ್ಲಿರುವ ಎಲ್ಲಾ ಪಕ್ಷದ ಕಾರ್ಯಕರ್ತರು ಅಜಿತ್ ಪವಾರ್ ಅವರನ್ನು ಬೆಂಬಲಿಸುತ್ತಾರೆ ಎಂದು ಹೇಳಿದ್ದಾರೆ.

ಈ ತಿಂಗಳ ಆರಂಭದಲ್ಲಿ, ಅಜಿತ್ ಪವಾರ್ ಮತ್ತು ಇತರ ಎಂಟು ಎನ್‌ಸಿಪಿ ಶಾಸಕರು ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಮಹಾರಾಷ್ಟ್ರ ಶಿವಸೇನೆ ಮತ್ತು ಬಿಜೆಪಿ ಮೈತ್ರಿ ಸರ್ಕಾರಕ್ಕೆ ಇತರ ಶಾಸಕರೊಂದಿಗೆ ಬೆಂಬಲ ಸೂಚಿಸಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದರು.ಅದು ಶರದ್ ಪವಾರ್ ಅವರಿಗೆ ದೊಡ್ಡ ಹಿನ್ನಡೆ ಎಂಬಂತೆ ಪಕ್ಷ ಒಡೆಯಲು ಕಾರಣವಾಗಿದೆ. ಈಗ ಈಶಾನ್ಯದಲ್ಲೂ ಬಲ ಕಳೆದುಕೊಳ್ಳುವಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next