Advertisement

ಸೀತಾನದಿ: ನಾಗ ದೇವರ ಕಲ್ಲಿನಮೂರ್ತಿ ಕಳ್ಳತನ

02:30 AM Jul 25, 2018 | Team Udayavani |

ಹೆಬ್ರಿ: ಇತ್ತೀಚಿಗೆ ಎಲ್ಲಡೆ ದೇವಸ್ಥಾನದ ಗರ್ಭಗುಡಿಯ ಒಳಹೊಕ್ಕು ಬೆಲೆ ಬಾಳುವ ದೇವರ ಚಿನ್ನದ ಅಥವಾ ಬೆಳ್ಳಿಯ ಆಭರಣಗಳ ಕಳ್ಳತನ ಹೆಚ್ಚಾಗುತ್ತಿದೆ.ಆದರೆ ಹೆಬ್ರಿ ಸಮೀಪ ಸೀತಾನದಿ ನಿಸರ್ಗ ಧಾಮದ ಬಳಿ ಇರುವ ನಾಗಬ್ರಹ್ಮಲಿಂಗೇಶ್ವರ ಸನ್ನಿಧಿಯ ನಾಗನ ಕಟ್ಟೆಯಲ್ಲಿರುವ ನಾಗದೇವರ ಎರಡು ಕಲ್ಲಿನ ವಿಗ್ರಹವನ್ನು ಕಳವು ಮಾಡಿರುವುದು ಅಚ್ಚರಿ ಜನರಲ್ಲಿ ಮೂಡಿಸಿದೆ.

Advertisement

ಚಂದುಕುಂದು ಗ್ರಾಮದ ಸುಮಾರು 50 ಕುಟುಂಬಗಳು ಆರಾಧಿಸಿಕೊಂಡು ಬಂದಿರುವ ಸೀತಾನದಿ ಹೊಳೆಯ ಬದಿಯಿರುವ ನಾಗಸನ್ನಿಧಿಯಲ್ಲಿ ಪ್ರತಿ ಸಂಕ್ರಮಣದಂದು ಪೂಜೆ ನಡೆಯುತ್ತಿದ್ದು ಜು. 16ರ ಬೆಳಗ್ಗೆ ಹೋಗಿ ಗಮನಿಸುವಾಗ ಅನಾದಿಕಾಲದಿಂದ ಬಂದಿರುವ ನಾಗನ ವಿಗ್ರಹ ಹಾಗೂ ಪ್ರತಿಷ್ಠಾಪಿಸಲ್ಪಟ್ಟ ಒಂದು ಕಲ್ಲಿನ ವಿಗ್ರಹವನ್ನು ಯಾರೋ ಕಿಡಿಗೇಡಿಗಳು ಕಳ್ಳತನ ಮಾಡಿದ್ದು ಆ ಪ್ರದೇಶದಲ್ಲಿ ಒಂದು ಬಿಯರ್‌ ಬಾಟ್ಲಿಯನ್ನು ಇಟ್ಟು ಹೋಗಿದ್ದಾರೆ.ಈ ಬಗ್ಗೆ ನಾಗಬ್ರಹ್ಮಲಿಂಗೇಶ್ವರ ಸನ್ನಿಧಿಯ ಆಡಳಿತ ಸಮಿತಿಯ ಅಧ್ಯಕ್ಷ ನವೀನ್‌ ಅಡ್ಯಂತಾಯ ಹೆಬ್ರಿ ಠಾಣೆಗೆ ದೂರು ನೀಡಿದ್ದಾರೆ.

10 ವರ್ಷದ ಹಿಂದೆ ಇಲ್ಲಿರುವ ಪಂಚಲೋಹದ ನಂದಿ ವಿಗ್ರಹವೊಂದು ಕಳ್ಳತನವಾಗಿತ್ತು. ಸನ್ನಿಧಿಯ ಸಮೀಪ ಟ್ರಕಿಂಗ್‌ ಪಾಥ್‌ ಇದ್ದು ಇಲ್ಲಿಗೆ ಹೆಚ್ಚಿನ ಪ್ರವಾಸಿಗರು ಬರುತ್ತಾರೆ. ಅವರೇ ಈ ಕೆಲಸ ಮಾಡಿರಬಹುದೇನೋ ಎಂದು ಸ್ಥಳೀಯರು ಸಂಶಯವನ್ನು ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next