ಹೈದರಾಬಾದ್: ನಾಗ ಚೈತನ್ಯ (Naga Chaitanya) ಹಾಗೂ ಶೋಭಿತಾ ಧೂಳಿಪಾಲ (Sobhita Dhulipala) ಬುಧವಾರ (ಡಿ.4ರಂದು) ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ಈಗಾಗಲೇ ಮದುವೆ ಶಾಸ್ತ್ರಗಳು ಆರಂಭಗೊಂಡಿದ್ದು ಅನ್ನಪೂರ್ಣ ಸ್ಟುಡಿಯೋದಲ್ಲಿ ಸಮಾರಂಭ ನಡೆಯಲಿದೆ.
8 ಗಂಟೆಗಳ ಕಾಲ ಮದುವೆಯ ಶಾಸ್ತ್ರಗಳು ನಡೆಯಲಿದೆ ಎನ್ನಲಾಗಿದೆ. ಅಕ್ಕಿನೇನಿ ಕುಟುಂಬದ ಮದುವೆ ಆಗಿರುವುದರಿಂದ ಈ ಸಮಾರಂಭಕ್ಕೆ ತಾರೆಗಳ ದಂಡೇ ಆಗಮಿಸಲಿದೆ. ನಾಗಾರ್ಜುನ್ ಭಾರತೀಯ ಸಿನಿಮಾದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಟಾಲಿವುಡ್ ಮಾತ್ರವಲ್ಲದೆ ಇತರೆ ಸಿನಿಮಾರಂಗದ ಮಂದಿಯೊಂದಿಗೆ ನಾಗಾರ್ಜುನ್ ಕುಟುಂಬ ಉತ್ತಮ ಒಡನಾಟ ಹೊಂದಿದೆ.
ನಾಗ ಚೈತನ್ಯ ಹಾಗೂ ಶೋಭಿತಾ ಧೂಳಿಪಾಲ ವಿವಾಹ ಕಾರ್ಯಕ್ರಮ ಟಾಲಿವುಡ್ ಮಾತ್ರವಲ್ಲದೆ ಬಾಲಿವುಡ್‌ನಿಂದಲೂ ತಾರೆಗಳು ಆಗಮಿಸಲಿದ್ದಾರೆ ಎನ್ನಲಾಗಿದೆ. ವಿವಾಹ ಶಾಸ್ತ್ರಗಳು ನಡೆಯುತ್ತಿದೆ. ಈ ವಿವಾಹಕ್ಕೆ ಯಾರೆಲ್ಲ ಬರಲಿದ್ದಾರೆ ಎನ್ನುವ ಲಿಸ್ಟ್‌ವೊಂದು ಹೊರಬಿದ್ದಿದೆ.
ಮೆಗಾಸ್ಟಾರ್ ಚಿರಂಜೀವಿ, ಅವರ ಪುತ್ರ ರಾಮ್ ಚರಣ್, ಪತ್ನಿ ಉಪಾಸನಾ ಕೊನಿಡೆಲಾ, ಟಾಲಿವುಡ್ ಸೂಪರ್‌ಸ್ಟಾರ್ ಮಹೇಶ್ ಬಾಬು, ಅವರ ಪತ್ನಿ ನಮ್ರತಾ ಶಿರೋಡ್ಕರ್, ಜೂ. ಎನ್ ಟಿಆರ್, ಖ್ಯಾತ ನಿರ್ದೇಶಕ ಎಸ್ ಎಸ್ ರಾಜಮೌಳಿ, ಅಲ್ಲು ಅರ್ಜುನ್ ಕುಟುಂಬ, ದಗ್ಗುಬಾಟಿ ಕುಟುಂಬ, ನಟ ಪ್ರಭಾಸ್, ನಯನತಾರಾ ಮುಂತಾದವರು ಆಗಮಿಸಲಿದ್ದಾರೆ ಎಂದು ವರದಿಯಾಗಿದೆ.
ಬಾಲಿವುಡ್‌ನಿಂದ ಶಾರುಖ್ ಖಾನ್, ಆಮಿರ್ ಖಾನ್, ಕಿರಣ್ ರಾವ್, ರಣ್‌ಬೀರ್, ಆಲಿಯಾ ಭಟ್ ಆಗಮಿಸುವ ನಿರೀಕ್ಷೆಯಿದೆ ಎಂದು ವರದಿಯಾಗಿದೆ.
ಇದಲ್ಲದೆ ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧು ಸೇರಿದಂತೆ ನಾನಾ ರಾಜಕೀಯ ಮುಖಂಡರು ಕೂಡ ವಿವಾಹ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ ಎಂದು ವರದಿಯಾಗಿದೆ.
2022ರಿಂದ ನಾಗ ಚೈತಯ್ಯ – ಶೋಭಿತಾ ಪ್ರೀತಿಸುತ್ತಿದ್ದಾರೆ. ಇದೇ ವರ್ಷದ ಆಗಸ್ಟ್ 8 ರಂದು ಇಬ್ಬರು ನಿಶ್ಚಿತಾರ್ಥ ಮಾಡಿಕೊಂಡಿದ್ದರು.