Advertisement

ರಾಜೀವ ತಾರಾನಾಥರಿಗೆ ನಾಡೋಜ ಗೌರವ 

07:45 AM May 25, 2018 | |

ಮೈಸೂರು: ಹಂಪಿ ಕನ್ನಡ ವಿಶ್ವವಿದ್ಯಾಲಯವು ಕೊಡಮಾಡುವ ಈ ಸಾಲಿನ ಗೌರವ ನಾಡೋಜ ಪದವಿಯನ್ನು ವಿಶ್ರಾಂತ ಪ್ರಾಧ್ಯಾಪಕರಾದ ಖ್ಯಾತ ಸರೋದ್‌ ವಾದಕ ಪಂಡಿತ ಡಾ. ರಾಜೀವ ತಾರಾನಾಥ ಅವರಿಗೆ ಮಂಗಳವಾರ ಮೈಸೂರಿನಲ್ಲಿ ಪ್ರದಾನ ಮಾಡಲಾಗುವುದು.

Advertisement

ಬೆಳಗ್ಗೆ 11ಗಂಟೆಗೆ ಮೈಸೂರಿನ ಸರಸ್ವತಿಪುರಂನಲ್ಲಿರುವ ನಿವಾಸದಲ್ಲಿ ಕನ್ನಡ ವಿವಿ ಕುಲಪತಿ ಡಾ. ಮಲ್ಲಿಕಾ ಎಸ್‌. ಘಂಟಿ ಗೌರವ ಪ್ರದಾನ ಮಾಡುವರು. 1932ರಲ್ಲಿ ರಾಯಚೂರಿನ ತುಂಗಭದ್ರಾ ಗ್ರಾಮದಲ್ಲಿ ಜನಿಸಿದ ರಾಜೀವ, ಬೆಂಗಳೂರಿನ ಸೆಂಟ್ರಲ್‌ ಕಾಲೇಜ್‌ನಿಂದ ಪದವಿ, ಮೈಸೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ, ಪಿಎಚ್‌ಡಿ ಬಳಿಕ ಪ್ರಾಧ್ಯಾಪಕ ಹುದ್ದೆ ಪಡೆದಿದ್ದರು. ಸಂಗೀತದ ಒಲವಿನಿಂದ ಹುದ್ದೆ ತ್ಯಜಿಸಿ ಕಲ್ಕತ್ತಾದಲ್ಲಿ ಉಸ್ತಾದ್‌ ಅಲಿ ಅಕಬರ್‌ಖಾನ್‌ರ ಶಿಷ್ಯರಾದರು. ಬಳಿಕ ಪಂಡಿತ್‌ ರವಿಶಂಕರ್‌, ಅನ್ನಪೂರ್ಣಾದೇವಿ ಬಳಿ ಮಾರ್ಗದರ್ಶನ ಪಡೆದರು. ವಿಶ್ವಾದ್ಯಂತ ಸಂಗೀತ ಕಛೇರಿ ನೀಡಿ ಸೈ ಎನ್ನಿಸಿಕೊಂಡ ಅವರು, ಕನ್ನಡದ ಸಂಸ್ಕಾರ,ಪಲ್ಲವಿ, ಅನುರೂಪ ಇತರ ಚಿತ್ರಗಳಿಗೆ ಸಂಗೀತ ನಿರ್ದೇಶಿಸಿದ್ದಾರೆ. ಕೃತಿಗಳನ್ನೂ ರಚಿಸಿದ್ದಾರೆ. ವಿದೇಶದ ವಿವಿಗಳಲ್ಲಿಯೂ ಸೇವೆ ಸಲ್ಲಿಸಿರುವ ಅವರಿಗೆ, ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಗೌರವ ಪ್ರಶಸ್ತಿ, ಟಿ.ಚೌಡಯ್ಯ ಪ್ರಶಸ್ತಿ ಸಂದಿವೆ.

Advertisement

Udayavani is now on Telegram. Click here to join our channel and stay updated with the latest news.

Next