Advertisement

ನಾಡೋಜ‌ ಜಿ. ಶಂಕರ್ 69ನೇ ಹುಟ್ಟು ಹಬ್ಬ: ಉಚ್ಚಿಲ‌ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ವಿಶೇಷ ಪೂಜೆ

07:32 PM Oct 05, 2024 | Team Udayavani |

ಉಡುಪಿ: ಉಚ್ಚಿಲ ದಸರಾ ರೂವಾರಿ, ದ. ಕ. ಮೊಗವೀರ ಮಹಾಜನ ಸಂಘದ ಗೌರವ ಸಲಹೆಗಾರ ನಾಡೋಜ ಡಾ| ಜಿ. ಶಂಕರ್ ಅವರ 69ನೇ ಹುಟ್ಟು ಹಬ್ಬದ ಪ್ರಯುಕ್ತ ಶ್ರೀ ಕ್ಷೇತ್ರ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಶನಿವಾರ ಚಂಡಿಕಾಯಾಗ, ಪೂರ್ಣಾಹುತಿ ಮತ್ತು ಮಹಾಅನ್ನಸಂತರ್ಪಣೆ ನಡೆಯಿತು.

Advertisement

ಶ್ರೀ ಕ್ಷೇತ್ರದ ಪ್ರಧಾನ ಅರ್ಚಕ ವೇ| ಮೂ| ಕೆ. ವಿ. ರಾಘವೇಂದ್ರ ಉಪಾಧ್ಯಾಯ ಅವರ ನೇತೃತ್ವದಲ್ಲಿ ಪೂರ್ಣಕುಂಭದೊಂದಿಗೆ ಸ್ವಾಗತಿಸಿ, ಮಹಾಲಕ್ಷ್ಮೀ ದೇವರಿಗೆ ಮಹಾಮಂಗಳಾರತಿ ಬೆಳಗಲಾಯಿತು. ಬಳಿಕ ಯಜ್ಣ ಮಂಟಪದಲ್ಲಿ ಪ್ರಧಾನ ಅರ್ಚಕರ ಪೌರೋಹಿತ್ಯದಲ್ಲಿ ಋತ್ವಿಜರ ಸಹಕಾರದೊಂದಿಗೆ ಅರ್ಗಲಾಕೀಲಕ ಸ್ತೋತ್ರ, ಕಲ್ಪೋಕ್ತ ಪೂಜೆ, ಸಪ್ತಶತಿ ಸಹಸ್ರ ಶ್ಲೋಕಗೊಂದಿಗೆ ಹವಿಸ್ಸು ಅರ್ಪಣೆ ಸಹಿತ ಚಂಡಿಕಾ ಪುರ್ಣಾಹುತಿ ನಡೆಸಲಾಯಿತು.

ನಾಡೋಜ ಡಾ| ಜಿ. ಶಂಕರ್, ಪತ್ನಿ ಶಾಲಿನಿ ಜಿ. ಶಂಕರ್, ಮಗಳು ಶ್ಯಾಮಿಲಿ ನವೀನ್, ಅಳಿಯ ನವೀನ್, ಮೊಮ್ಮಕ್ಕಳಾದ ಶನಾಯ, ಸಾನ್ವಿಕಾ ಚಂಡಿಕಾ ಯಾಗದಲ್ಲಿ ಪಾಲ್ಗೊಂಡರು. ಶರನ್ನವರಾತ್ರಿ ಪ್ರಯುಕ್ತ ಭಕ್ತಾಽಗಳಿಂದ ಯಾಗ ಕುಂಡದಲ್ಲಿ ಸಾಮೂಹಿಕ ನಿತ್ಯ ಚಂಡಿಕಾ ಹೋಮ ನಡೆಯಿತು. ಬಳಿಕ ನಡೆದ ಅನ್ನಸಂತರ್ಪಣೆಯಲ್ಲಿ ಸಾವಿರಾರು ಮಂದಿ ಪಾಲ್ಗೊಂಡಿದ್ದರು.

Advertisement

ದ. ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್, ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಗಿರಿಧರ ಸುವರ್ಣ, ಉಚ್ಚಿಲ ದಸರಾ ಸಮಿತಿ ಅಧ್ಯಕ್ಷ ವಿನಯ ಕರ್ಕೇರ, ಮಹಾಜನ ಸಂಘದ ಉಪಾಧ್ಯಕ್ಷ ಮೋಹನ್ ಬೇಂಗ್ರೆ, ಪ್ರಧಾನ ಕಾರ್ಯದರ್ಶಿ ಶರಣ್ ಮಟ್ಟು, ಕೋಶಾಽಕಾರಿ ರತ್ನಾಕರ ಸಾಲ್ಯಾನ್, ಕ್ಷೇತ್ರಾಡಳಿತ ಸಮಿತಿ ಮಾಜಿ ಅಧ್ಯಕ್ಷ ವಾಸುದೇವ ಸಾಲ್ಯಾನ್, ಜೀರ್ಣೋದ್ಧಾರ ಸಮಿತಿ ಮಾಜಿ ಅಧ್ಯಕ್ಷ ಗುಂಡು ಬಿ. ಅಮೀನ್, ಮಹಾಜನ ಮಹಿಳಾ ಸಂಘದ ಅಧ್ಯಕ್ಷೆ ಉಷಾ ರಾಣಿ, ಮೊಗವೀರ ಯುವ ಸಂಘಟನೆ ಜಿಲ್ಲಾಧ್ಯಕ್ಷ ಜಯಂತ್ ಅಮೀನ್, ನಾಲ್ಕು ಪಟ್ಣ ಮೊಗವೀರ ಮಹಾಸಭಾ ಅಧ್ಯಕ್ಷ ಮನೋಜ್ ಕಾಂಚನ್, ಮಹಿಳಾ ಸಭಾದ ಅಧ್ಯಕ್ಷೆ ಸುಗುಣಾ ಕರ್ಕೇರ, ಉದ್ಯಮಿ ಪ್ರಸಾದ್‌ರಾಜ್ ಕಾಂಚನ್, ಪ್ರಮುಖರಾದ ಚೇತನ್ ಬೇಂಗ್ರೆ, ಮೋಹನ್ ಬಂಗೇರ ಕಾಪು, ರಮೇಶ್ ಕಾಂಚನ್, ಮಹಾಬಲ ಕುಂದರ್, ಶಂಕರ ಸಾಲ್ಯಾನ್, ಸತೀಶ್  ಸಾಲ್ಯಾನ್, ಸುಜಿತ್ ಸಾಲ್ಯಾನ್ ಮೂಲ್ಕ್ಕಿ, ನಾರಾಯಣ ಸಿ. ಕರ್ಕೇರ, ಸುಧಾಕರ ಕುಂದರ್, ದಿನೇಶ್ ಎರ್ಮಾಳು, ಮೋಹನ್ ಬಂಗೇರ, ರವೀಂದ್ರ ಶ್ರೀಯಾನ್, ನಾರಾಯಣ ಕುಂದರ್ ಕಲ್ಮಾಡಿ, ಲೋಕೇಶ್ ಮೆಂಡನ್, ಸತೀಶ್ ಅಮೀನ್ ಪಡುಕೆರೆ, ಯತೀಶ್ ಕಿದಿಯೂರು ಮೊದಲಾದವರು ಉಪಸ್ಥಿತರಿದ್ದರು.

ಸಮ್ಮಾನ, ಗೌರವಾರ್ಪಣೆ : ದ.ಕ. ಮೊಗವೀರ ಮಹಾಜನ ಸಂಘ, ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಕ್ಷೇತ್ರಾಡಳಿತ ಸಮಿತಿ, ಕರ್ನಾಟಕ ಬ್ಯಾಂಕ್ ಲಿ., ಮಹಾಲಕ್ಷ್ಮೀ ಕೋ. ಆಪರೇಟಿವ್ ಬ್ಯಾಂಕ್ ಲಿ., ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿ, ಮೊಗವೀರ ಯುವ ಸಂಘಟನೆ ಉಡುಪಿ ಜಿಲ್ಲೆ, ಕರಾವಳಿ ಕರ್ನಾಟಕದ ಸಮಸ್ತ ಮೊಗವೀರ ಸಂಘಟನೆಗಳ ಸಹಿತ ವಿವಿಧ ಸಂಘ ಸಂಸ್ಥೆಗಳು, ಧಾರ್ಮಿಕ ಕೇಂದ್ರಗಳ ವತಿಯಿಂದ ಡಾ| ಜಿ. ಶಂಕರ್ ಅವರನ್ನು ಸಮ್ಮಾನಿಸಿ, ಗೌರವಿಸಿ, ಅಭಿನಂದಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next