Advertisement
ಪುರುಷರ ಸಿಂಗಲ್ಸ್‌ನಲ್ಲಿ ಡೊಮಿನಿಕ್ ಥೀಮ್, ವನಿತೆಯರ ಸಿಂಗಲ್ಸ್‌ನಲ್ಲಿ ಸಮಂತಾ ಸ್ಟೋಸರ್, ಜೆಲೆನಾ ಒಸ್ಟಾಪೆಂಕೊ, ಕ್ರಿಸ್ಟಿನಾ ಲಡೆನೋವಿಕ್ ಕೂಡ 4ನೇ ಸುತ್ತು ತಲುಪಿದ್ದಾರೆ. ಇವರಲ್ಲಿ ಲಾತ್ವಿಯಾದ ಯುವ ಆಟಗಾರ್ತಿ ಒಸ್ಟಾಪೆಂಕೊ ಗ್ರ್ಯಾನ್‌ಸ್ಲಾಮ್ 4ನೇ ಸುತ್ತಿಗೇರಿದ್ದು ಇದೇ ಮೊದಲು. ಒಸ್ಟಾಪೆಂಕೊ ಉಕ್ರೇನಿನ ಲೆಸಿಯಾ ಸುರೆಂಕೊ ವಿರುದ್ಧ 6-1, 6-4 ಅಂತರದ ಜಯ ಸಾಧಿಸಿದರು. ಮನೆಯಲ್ಲಿ ಬ್ರಝಿಲ್‌ನ ಸಾಂಬಾ ಡ್ಯಾನ್ಸ್ ಅಭ್ಯಾಸ ನಡೆಸುತ್ತಿರುವುದೇ ತನ್ನ ಯಶಸ್ಸಿಗೆ ಕಾರಣ ಎಂದಿದ್ದಾರೆ ಒಸ್ಟಾಪೆಂಕೊ.
Related Articles
ಪುರುಷರ ಸಿಂಗಲ್ಸ್‌ನಲ್ಲಿ ರಫೆಲ್ ನಡಾಲ್ ಜಾರ್ಜಿಯಾದ ನಿಕೋಲಾಸ್ ಬಾಸಿಲಶಿಲ್ವಿ ಅವರನ್ನು ಅತ್ಯಂತ ಸುಲಭದಲ್ಲಿ 6-0, 6-1, 6-0 ಅಂತರದಿಂದ ಬಗ್ಗುಬಡಿದರು. ಇದು ಫ್ರೆಂಚ್ ಇತಿಹಾಸದ ಅತ್ಯಂತ ಸುಲಭ ಜಯಗಳಲ್ಲಿ ಒಂದಾಗಿ ದಾಖಲಾಗಿದೆ.
Advertisement
ಸ್ಪೇನ್ ಎದುರಾಳಿ ಗಾರ್ಸಿಯಾ ಲೋಪೆಜ್ ಗಾಯಾಳಾದ್ದರಿಂದ ಕೆನಡಾದ ಮಿಲೋಸ್ ರಾನಿಕ್ ಮುನ್ನಡೆ ಸಾಧಿಸಿದರು. ಆಸ್ಟ್ರಿಯಾದ 6ನೇ ಶ್ರೇಯಾಂಕಿತ ಡೊಮಿನಿಕ್ ಥೀಮ್ ಅಮೆರಿಕದ ಸ್ಟೀವ್ ಜಾನ್ಸನ್ ಅವರನ್ನು 6-1, 7-6 (7-4), 6-3ರಿಂದ ಹಿಮ್ಮೆಟ್ಟಿಸಿದರು. ಸ್ಪೇನಿನ 17ನೇ ಶ್ರೇಯಾಂಕದ ಆಟಗಾರ ಬಾಟಿಸ್ಟ ಅಗುಟ್ ಜೆಕ್ ಗಣರಾಜ್ಯದ ಜಿರಿ ವೆಸ್ಲಿ ಅವರನ್ನು 6-3, 6-4, 6-3ರಿಂದ ಪರಾಭವಗೊಳಿಸಿದರು.