Advertisement
ಜೂ. 1ರಿಂದ ನಾಡದೋಣಿ ಮೀನುಗಾರಿಕೆ ನಡೆಸಲು ಅವಕಾಶವಿರುವುದರಿಂದ ಕೆಲವು ನಾಡದೋಣಿಗಳು ಈಗಾಗಲೇ ಮೀನು ಗಾರಿಕೆ ಆರಂಭಿಸಿವೆ. ಒಂದೆರಡು ದಿನದಲ್ಲಿ ಎಲ್ಲ ನಾಡದೋಣಿಗಳು ಕಡಲಿಗಿಳಿಯಲಿವೆ.
Related Articles
Advertisement
ಬೀಸುಬಲೆ ಕ್ರೇಜ್:
ಮಳೆಗಾಲ ಆರಂಭವಾಗುವ ಸಮಯ ದಲ್ಲಿ ಬೀಸುಬಲೆ ಮೀನುಗಾರಿಕೆ ಹೆಚ್ಚಿನ ಪ್ರಮಾಣದಲ್ಲಿ ನಡೆಯಲಿದೆ. ನಾಡದೋಣಿ ಯಲ್ಲಿ ತೆರಳಿ ಬೀಸುಬಲೆಯಲ್ಲಿ ಮೀನು ಹಿಡಿಯುವವರಲ್ಲದೆ ದಡದಲ್ಲಿದ್ದುಕೊಂಡೇ ಬೀಸುಬಲೆಯಲ್ಲಿ ಮೀನು ಹಿಡಿಯುವವರು ತುಂಬ ಮಂದಿ ಇದ್ದಾರೆ. ಯಾಂತ್ರೀಕೃತ ಮೀನುಗಾರಿಕೆ ನಿಷೇಧ, ಲಾಕ್‌ಡೌನ್ ಹಿನ್ನೆಲೆಯಲ್ಲಿ ಬೇರೆ ಉದ್ಯೋಗಗಳ ಕೊರತೆ ಇರುವುದರಿಂದಲೂ ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ತೋಟಬೆಂಗ್ರೆ ಅಳಿವೆಬಾಗಿಲು ಪ್ರದೇಶದಲ್ಲಿ ಬೀಸುಬಲೆಯಲ್ಲಿ ಮೀನು ಹಿಡಿಯುತ್ತಾರೆ. ಪೈಯ್ಯ, ಏರಿ, ನಂಗ್, ಬಂಗುಡೆ, ಕೊಡ್ಡೆಯಿ ಮೀನುಗಳು ದೊರೆಯುತ್ತವೆ.
ದ.ಕ.: 1,800 ನಾಡದೋಣಿಗಳು :
ನವಮಂಗಳೂರು ಬಂದರು, ಮಂಗ ಳೂರು ಮೀನುಗಾರಿಕೆ ದಕ್ಕೆ, ಉಳ್ಳಾಲ ವ್ಯಾಪ್ತಿಯಿಂದ ನಾಡದೋಣಿಗಳು ಕಡಲಿಗಿಳಿ ಯುತ್ತಿವೆ. ದ.ಕ. ಜಿಲ್ಲೆ ಯಲ್ಲಿ ಸುಮಾರು 1,800ರಷ್ಟು ನಾಡದೋಣಿಗಳಿದ್ದು, 50 ಸಾವಿರ ಮಂದಿ ಅವಲಂಬಿತರಾಗಿದ್ದಾರೆ. ನಾಡದೋಣಿ ಯಲ್ಲಿ ಮೀನುಗಾರಿಕೆಗೆ ತೆರಳುವವರು ಪ್ರತೀದಿನ ಮುಂಜಾನೆ ಹೊರಟು ಸಂಜೆ 4ರ ಒಳಗೆ ದಡ ಸೇರುತ್ತಾರೆ. 1 ನಾಡದೋಣಿಗೆ 25 ಸಾವಿರ ರೂ. ಮೌಲ್ಯದಿಂದ ಗರಿಷ್ಠ 50 ಸಾವಿರ ರೂ. ಮೌಲ್ಯದ ಮೀನು ಸಿಗುತ್ತವೆ.
ನಾಡದೋಣಿ ಮೀನುಗಾರಿಕೆ ಶುರು ವಾಗಿದೆ. ಬೇಡಿಕೆಯಷ್ಟು ಪ್ರಮಾಣದಲ್ಲಿ ಸೀಮೆಎಣ್ಣೆ ಲಭ್ಯವಿಲ್ಲದಿರುವುದು ನಮಗೆ ಸಮಸ್ಯೆಯಾಗಿದೆ. ಮೀನು ಲಭ್ಯತೆ ಕೂಡ ಕಡಿಮೆಯಿದೆ. ಹೀಗಾಗಿ ಈ ಬಾರಿ ಸವಾಲಿನ ಸಮಯ. ಕೊರೊನಾ ಸಂಕಷ್ಟ ಇರುವ ಹಿನ್ನೆಲೆಯಲ್ಲಿ ಸರಕಾರ ನಮಗೆ ವಿಶೇಷ ನೆರವು ನೀಡಬೇಕಾಗಿದೆ. –ಸುಭಾಷ್‌ಚಂದ್ರ ಕಾಂಚನ್, ಕಾರ್ಯಾಧ್ಯಕ್ಷರು, ಗಿಲ್ನೆಟ್ ಮೀನುಗಾರರ ಸಂಘ