Advertisement

ನಾಗಚೈತನ್ಯಗೆ ಜೋಡಿಯಾದ ಪಟಾಕಿ ಪೋರಿ ನಭಾ ನಟೇಶ್‌

12:11 PM Mar 30, 2021 | Team Udayavani |

ಹ್ಯಾಟ್ರಿಕ್‌ ಹೀರೋ ಶಿವರಾಜ ಕುಮಾರ್‌ ಅಭಿನಯದ “ವಜ್ರಕಾಯ’ ಚಿತ್ರದಲ್ಲಿ ಪಟಾಕಿ ಪೋರಿ ಗೆಟಪ್‌ನಲ್ಲಿ ಬೋಲ್ಡ್‌ ಪಾತ್ರದಲ್ಲಿ ಸಿನಿಪ್ರಿಯರ ಗಮನ ಸೆಳೆದಿದ್ದ ನಟಿ ನಭಾ ನಟೇಶ್‌, ಸದ್ಯ ಕನ್ನಡಕ್ಕಿಂತ ತೆಲುಗಿನಲ್ಲೇ ಹೆಚ್ಚು ಬಿಝಿಯಾಗಿದ್ದಾರೆ.

Advertisement

“ಐ ಸ್ಮಾರ್ಟ್‌ ಶಂಕರ್‌’ ಚಿತ್ರದ ಸೂಪರ್‌ ಹಿಟ್‌ ಸಕ್ಸಸ್‌ ಬಳಿಕ ಟಾಲಿವುಡ್‌ನ‌ಲ್ಲಿ ಬಹುಬೇಡಿಕೆ ಪಡೆದುಕೊಂಡಿರುವ ನಭಾ ನಟೇಶ್‌, ಈಗ ತೆಲುಗಿನ ನಾಗ ಚೈತನ್ಯ ಜೊತೆ ಹೊಸ ಚಿತ್ರದಲ್ಲಿ ತೆರೆ ಹಂಚಿಕೊಳ್ಳುವ ತಯಾರಿಯಲ್ಲಿದ್ದಾರೆ. ನಾಗ ಚೈತನ್ಯ ನಾಯಕನಾಗಿ ಕಾಣಿಸಿಕೊಳ್ಳುತ್ತಿರುವ ಹೊಸಚಿತ್ರ “ಥ್ಯಾಂಕ್ಯೂ’ ಚಿತ್ರದಲ್ಲಿ ನಭಾ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ:ಪ್ರಮೋಶನ್‌ ಅಖಾಡಕ್ಕೆ ಸಲಗ: ಏಪ್ರಿಲ್‌ 10 ಪ್ರೀ ರಿಲೀಸ್‌ ಇವೆಂಟ್‌

ಸದ್ಯ “ಥ್ಯಾಂಕ್ಯೂ’ ಚಿತ್ರದ ಕೆಲಸಗಳು ಭರದಿಂದ ನಡೆಯುತ್ತಿದ್ದು, ಇದೇ ವರ್ಷದ ಕೊನೆಗೆ ಚಿತ್ರ ತೆರೆಗೆ ಬರುವ ಸಾಧ್ಯತೆ ಇದೆ. ಇದರ ನಡುವೆ ಕನ್ನಡದಲ್ಲೂ ನಭಾ ನಟೇಶ್‌ ಒಂದೆರಡು ಹೊಸ ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿದ್ದರೂ, ಆ ಚಿತ್ರಗಳ ಬಗ್ಗೆ ಇನ್ನೂ ಯಾವುದೇ ಅಧಿಕೃತ ಮಾಹಿತಿ ಹೊರಬಂದಿಲ್ಲ.

Advertisement
Advertisement

Udayavani is now on Telegram. Click here to join our channel and stay updated with the latest news.

Next