Advertisement

ಕೊರಗಜ್ಜ, ಕಲ್ಲುರ್ಟಿ ದೈವಗಳಿಗೆ ‘ಫಸ್ಟ್ ಲುಕ್’ ತೋರಿಸಿ ಅನುಮತಿ ಪಡೆದ ‘ಕೊರಗಜ್ಜ’ ಚಿತ್ರತಂಡ

04:39 PM May 06, 2024 | Team Udayavani |

ಕಳೆದೊಂದು ವರ್ಷದಿಂದ ಸದ್ದು ಮಾಡುತ್ತಿರುವ ಸುಧೀರ್ ಅತ್ತಾವರ್ ನಿರ್ದೇಶನದ ‘ಕೊರಗಜ್ಜ’ ಸಿನಿಮಾದ ಮೋಷನ್ ಪೋಸ್ಟರ್ ಮತ್ತು ಫಸ್ಟ್ ಲುಕ್ ಸಿದ್ದವಾಗಿದೆ. ಪೋಸ್ಟರ್ ಬಿಡುಗಡೆಗೆ ಮೊದಲು ದೈವದ ಮೊರೆ ಹೋಗಿದೆ.

Advertisement

ತ್ರಿವಿಕ್ರಮ ಸಪಲ್ಯ ನಿರ್ಮಾಣದ, ಸಕ್ಸಸ್ ಫಿಲಂಸ್ ಮತ್ತು ತ್ರಿವಿಕ್ರಮ ಸಿನಿಮಾಸ್ ಬ್ಯಾನರ್ ನ ‘ಕೊರಗಜ್ಜ’ ಸಿನಿಮಾದ ಮೋಷನ್ ಪೋಸ್ಟರ್‌ ಮತ್ತು ಫಸ್ಟ್ ಲುಕ್ ಪೋಸ್ಟರ್ ನ್ನು ರಿಲೀಸ್ ಗೂ ಮೊದಲು ಕೊರಗಜ್ಜ, ಗುಳಿಗ ಹಾಗೂ ಕಲ್ಲುರ್ಟಿ ದೈವಗಳ ಮುಂದಿಟ್ಟು ಅನುಮತಿ ಪಡೆಯಲಾಗಿದೆ.

ನಿರ್ದೇಶಕ ಸುಧೀರ್ ಅತ್ತಾವರ್ ಅವರು ವಿಶೇಷ ದೈವಗಳಿಗೆ ಕೋಲ ಸೇವೆ ನೀಡಿ, ಅದೇ ಸಮಯದಲ್ಲಿ ದೈವಗಳ ಸಮಕ್ಷಮದಲ್ಲಿ ಒಪ್ಪಿಗೆಗಾಗಿ ಪೋಸ್ಟರ್ ತೋರಿಸಿದರು. ಫಸ್ಟ್ ಲುಕ್ ನ್ನು ಸಾರ್ವಜನಿಕ ಪ್ರದರ್ಶನಕ್ಕೆ ಇಡಲು ದೈವಗಳಿಂದ ಅನುಮತಿ ಪಡೆಯಲಾಯ್ತು. ಆದರೆ ಎಲ್ಲೆಂದರಲ್ಲಿ ಈ ಫಸ್ಟ್ ಲುಕ್ ಮತ್ತು ಮೋಷನ್ ಪೋಸ್ಟರನ್ನು ದೈವಕ್ಕೆ ಅಪಚಾರ ಆಗುವ ರೀತಿಯಲ್ಲಿ ಸಾರ್ವಜನಿಕರು ದುರುಪಯೋಗ ಪಡಿಸಬಾರದು ಎಂದು ದೈವಗಳು ಅಪ್ಪಣೆ ನೀಡಿದವು.

ಈ ಸಮಯದಲ್ಲಿ ಮಾಜಿ ಸಚಿವೆ ಮೋಟಮ್ಮ, ಕಲಾವಿದೆ ಭವ್ಯ ಮತ್ತು ಸುಪುತ್ರಿ ಅದಿತಿ, ಎಡಿಟರ್- ಈಪಿ ವಿದ್ಯಾಧರ್ ಶೆಟ್ಟಿ, ಖ್ಯಾತ ಗಾಯಕ ರಮೇಶ್ಚಂದ್ರ, ನಾಯಕ ನಟ ಭರತ್ ಸೂರ್ಯ, ಶ್ಲಾಘ್ಯ ಕಮಲಿನಿ ಹಾಗೂ ಚಿತ್ರತಂಡದ ಬಹುತೇಕ ಕಲಾವಿದರು ಮತ್ತು ತಂತ್ರಜ್ಞರು ಪಾಲ್ಗೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next