ಸಾಮಾಜಿಕ ಸೇವೆ, ನೊಂದವರ ಕಷ್ಟಕ್ಕೆ ಸ್ಪಂದಿಸುವುದು ಹಾಗೂ ಸಮಗ್ರ ಅಭಿವೃದ್ಧಿ ಇದು ರಾಜಕೀಯ ಕ್ಷೇತ್ರದಲ್ಲಿ ದುಡಿಯುವವರ ಮೂಲ ಮಂತ್ರವಾಗಬೇಕು ಎಂಬುದನ್ನು ಚೆನ್ನಾಗಿ ಅರಿತಿರುವ ಎನ್.ವೈ.ಜಿ ಇಂದಿಗೂ ಅದೇ ಹಾದಿಯಲ್ಲಿ ಸಾಗುತ್ತಿದ್ದಾರೆ. ಮೊದಲು ಬಿಸಿಲುನಾಡು ಬಳ್ಳಾರಿ ಈಗ ಹೊಸ ಜಿಲ್ಲೆ ವಿಜಯನಗರ ವ್ಯಾಪ್ತಿಯ ಕೂಡ್ಲಿಗಿ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸಿ ವಿಧಾನಸಭೆ ಪ್ರವೇಶಿಸಿದ ಗೋಪಾಲಕೃಷ್ಣ ಅವರು ಕ್ಷೇತ್ರದ ಅಭಿವೃದ್ಧಿ ಹರಿಕಾರ ಎನಿಸಿಕೊಂಡಿದ್ದಾರೆ. ಶಾಸಕರಾದ ನಂತರ ಇಂದಿನವರೆಗೂ ಇಡೀ ಕ್ಷೇತ್ರದಲ್ಲಿ ಸಂಚರಿಸುತ್ತ ಜನರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸುತ್ತ ಇಡೀ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಪಣ ತೊಟ್ಟು ಕಾರ್ಯೋನ್ಮುಖರಾಗಿದ್ದಾರೆ. ಕಳೆದ ಮೂರು ವರ್ಷದಲ್ಲಿ ಕ್ಷೇತ್ರದಲ್ಲಿ ಆದ ಹಲವು ಅಭಿವೃದ್ಧಿ ಕಾರ್ಯಗಳು ಇವರ ಕಾರ್ಯಕ್ಷಮತೆಗೆ ಹಿಡಿದ ಕನ್ನಡಿಯಾಗಿದೆ.
Advertisement
ಅಭಿವೃದ್ಧಿ ಹರಿಕಾರ: ಈ ಹಿಂದೆ ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ಕ್ಷೇತ್ರದ ಶಾಸಕರಾಗಿದ್ದ ಗೋಪಾಲಕೃಷ್ಣ ಇದೇ ಮೊದಲ ಬಾರಿ ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದಾರೆ. ಕ್ಷೇತ್ರ ಹೊಸದಾದರೂ ಅನುಭವಿ ರಾಜಕಾರಣಿಯಾಗಿರುವ ಅವರಿಗೆ ಇಡೀ ಕ್ಷೇತ್ರದ ಜನರಮಿಡಿತ ಅರಿಯುವುದು ಕಷ್ಟವಾಗಿಲ್ಲ. ಈ ಕ್ಷೇತ್ರದ ಅಭಿವೃದ್ಧಿಗೆ ಆಗಬೇಕಾದ ಕಾರ್ಯ ಏನು? ಇಡೀ ಕ್ಷೇತ್ರದಲ್ಲಿ ಸಾಮೂಹಿಕವಾಗಿರುವ ಸಮಸ್ಯೆ ಯಾವುದು? ಆದ್ಯತೆ ಮೇರೆಗೆ ಯಾವ ಕಾರ್ಯ ಕೈಗೊಳ್ಳಬೇಕು? ಜನರ ಹಾಗೂ ಅಧಿಕಾರಿ ವರ್ಗದ ವಿಶ್ವಾಸ ಗಳಿಸಿ ಹೇಗೆ ಕೆಲಸ ಮಾಡಬೇಕು ಎಂಬುದನ್ನೆಲ್ಲ ಅರಿತು ಕ್ಷೇತ್ರದಲ್ಲಿ ಮುಂದಡಿ ಇಟ್ಟ ಗೋಪಾಲಕೃಷ್ಣ ಅವರು ಕ್ಷೇತ್ರದಲ್ಲಿ ಅಭಿವೃದ್ಧಿ ಪರ್ವ ಆರಂಭಿಸಿದ್ದಾರೆ. ಕೇವಲ ಮೂರು ವರ್ಷದಲ್ಲಿ ತಮ್ಮ ಯೋಚನೆ, ಹಾಗೂ ಅನೇಕ ಯೋಜನೆಗಳ ಮೂಲಕ ಕ್ಷೇತ್ರದ ಜನರಿಂದ ಅಭಿವೃದ್ಧಿಯ ಹರಿಕಾರ ಎನಿಸಿಕೊಂಡಿದ್ದಾರೆ. ಕೂಡ್ಲಿಗಿ ಕ್ಷೇತ್ರದ ಎಲ್ಲ ವರ್ಗದ ಎಲ್ಲ ಸಮುದಾಯದವರ ಪ್ರೀತಿಗೆ ಪಾತ್ರರಾಗಿರುವ ಎನ್.ವೈ.ಜಿ ತಮ್ಮ ಸರಳ ನಡೆ-ನುಡಿ ಹಾಗೂ ವ್ಯಕ್ತಿತ್ವದಿಂದ ಜನಾನುರಾಗಿ ಎನಿಸಿಕೊಂಡಿದ್ದಾರೆ. ಕೇವಲ ಮೂರು ವರ್ಷಗಳ ಅವಧಿಯಲ್ಲೇ ಶಿಕ್ಷಣ, ನೀರಾವರಿ ಸೇರಿ ಎಲ್ಲ ವಿಭಾಗಕ್ಕೂ ಆದ್ಯತೆ ನೀಡುವ ಮೂಲಕ ಆಯಾ ವಲಯದ ಅಭಿವೃದ್ಧಿಯಲ್ಲಿ ಸಾಧನೆ ಮಾಡಿ ತೋರಿಸಿದ್ದಾರೆ.
Related Articles
Advertisement
ಹುರುಳಿಹಾಳ್ ಗ್ರಾಮದ ಹತ್ತಿರ ಪರಿಶಿಷ್ಟ ವರ್ಗಗಳ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ 25 ಕೋಟಿ ರೂ. ಮಂಜೂರಾಗಿದೆ. ಹೊಸಹಳ್ಳಿ ಸಂಗಮೇಶ್ವರ ಬೆಟ್ಟದ ಹತ್ತಿರ ಅಂಬೇಡ್ಕರ್ ವಸತಿ ಶಾಲೆ ನಿರ್ಮಾಣ ಮಾಡಲು 9.98 ಎಕರೆ ಜಮೀನು ಮಂಜೂರಾಗಿದೆ. ಅಲ್ಲದೆ, ಹಿರೇಹೆಗಾxಳು ಗ್ರಾಮದ ಹತ್ತಿರ ಕಿತ್ತೂರು ರಾಣಿ ಚೆನ್ನಮ್ಮ ಶಾಲೆ ನಿರ್ಮಾಣ ಮಾಡಲು 8 ಎಕರೆ ಜಮೀನು ಮಂಜೂರಾಗಿದ್ದು, ಕಟ್ಟಡ ನಿರ್ಮಾಣಕ್ಕೆ 20 ಕೋಟಿ ರೂ. ಬಿಡುಗಡೆಯಾಗಿದೆ. ಶೀಘ್ರದಲ್ಲಿ ಶಂಕುಸ್ಥಾಪನೆಯಾಗಲಿದೆ. ಇನ್ನು, ಹುಡೇಂ ಗ್ರಾಮದ ಹತ್ತಿರ ಏಕಲವ್ಯ ವಸತಿ ಶಾಲೆ ನಿರ್ಮಾಣ ಮಾಡಲು 15 ಎಕರೆ ಜಾಗ ಮಂಜೂರಾಗಿದೆ.
ಇಂದಿನ ಆಧುನಿಕ ಕಾಲಘಟ್ಟದಲ್ಲಿ ಶಿಕ್ಷಣವೇ ಶಕ್ತಿ ಎಂಬುದನ್ನು ಅರಿತ ಶಾಸಕರು ತಮ್ಮ ಕ್ಷೇತ್ರದಲ್ಲಿ ಶಿಕ್ಷಣ ಉಳ್ಳವರಿಗಷ್ಟೇ ಸೀಮಿತ ಆಗಬಾರದು. ಬಡವರಿಗೂ ಅಕ್ಷರ ಜ್ಞಾನ ಸಿಗುವುಂತಾಗಬೇಕು ಎಂಬ ಧ್ಯೇಯದೊಂದಿಗೆ ವಸತಿಶಾಲೆ, ಸರಕಾರಿ ಶಾಲೆಗಳಿಗೆ ಮೂಲಸೌಕರ್ಯ ಕಲ್ಪಿಸುವ ಮೂಲಕ ಶಿಕ್ಷಣದ ಗುಣಮಟ್ಟ ಹೆಚ್ಚಿಸುವ ಕಾರ್ಯಕ್ಕೆ ಒತ್ತು ನೀಡಿದ್ದಾರೆ. ಶಾಸಕ ಎನ್.ವೈ.ಗೋಪಾಲಕೃಷ್ಣ ಅವರ ವಿಚಾರಧಾರೆಗಳಿಂದ ಕ್ಷೇತ್ರದಲ್ಲಿ ಶೈಕ್ಷಣಿಕ ಪ್ರಗತಿ ಆಗಿರುವುದಂತು ಸತ್ಯ.