Advertisement
ಕಳೆದ ಒಂದು ತಿಂಗಳಲ್ಲಿ ಆಸ್ತಿ ತೆರಿಗೆ ಬಾಕಿದಾರರ ವಿರುದ್ಧ ಬಿಎಂಸಿ ತನ್ನ ಅಭಿಯಾನವನ್ನು ತೀವ್ರಗೊಳಿಸಿದೆ. ಮಹಾನಗರ ಪಾಲಿಕೆಯ ಅತಿದೊಡ್ಡ ಆದಾಯ ಮೂಲವಾದ ಆಸ್ತಿ ತೆರಿಗೆ ಸಂಗ್ರಹವು ಕುಸಿಯಲು ಪ್ರಾರಂಭವಾದ ಬಳಿಕ ಪಾಲಿಕೆಯ ಕಡೆಯಿಂದ ಈ ಕ್ರಮ ಬಂದಿದೆ. 2020-21ರ ಹಣಕಾಸು ವರ್ಷದ ಬಜೆಟ್ ಮಂಡಿಸುವಾಗ ಬಿಎಂಸಿ ಆಯುಕ್ತ ಪ್ರವೀಣ್ ಪರ್ದೇಶಿ ಅವರು ಸುಮಾರು 15,000 ಕೋಟಿ ರೂ. ಮೊತ್ತದ ಆಸ್ತಿ ತೆರಿಗೆ ಬಾಕಿ ಉಳಿದಿದೆ ಎಂದಿದ್ದರು. 2019-20ರ ಆರ್ಥಿಕ ಸಾಲಿನಲ್ಲಿ ಬಿಎಂಸಿಯು 5,015.19 ಕೋಟಿ ರೂ.ಗಳ ಆಸ್ತಿ ತೆರಿಗೆಯನ್ನು ಸಂಗ್ರಹಿಸುವ ಗುರಿ ನಿಗದಿಪಡಿಸಿತ್ತು. ಆದರೆ, 2019ರ ನವೆಂಬರ್ ಅಂತ್ಯದವರೆಗೆ ಅದಕ್ಕೆ ಕೇವಲ 1,387 ಕೋಟಿ ರೂ.ಗಳ ಆಸ್ತಿ ತೆರಿಗೆ ಸಂಗ್ರಹಿಸಲು ಸಾಧ್ಯವಾಗಿದೆ. ಹಣಕಾಸು ವರ್ಷದ ಅಂತ್ಯದ ಮೊದಲು ತನ್ನ ಆದಾಯದ ಗುರಿಯಿಂದ ಹಿಂದಕ್ಕೆ ಬೀಳುವ ಭಯದಿಂದ ಬಿಎಂಸಿ ತೆರಿಗೆ ಬಾಕಿದಾರರ ಆಸ್ತಿಗಳನ್ನು ಜಪ್ತಿ ಮಾಡಲು ಹಾಗೂ ಅವರ ಚಲಿಸಬಲ್ಲ ಸೊತ್ತುಗಳನ್ನು ವಶಪಡಿಸಿಕೊಳ್ಳಲು ಪ್ರಾರಂಭಿಸಿತು.
Advertisement
3,564 ತೆರಿಗೆ ಬಾಕಿದಾರರ ಆಸ್ತಿಗಳನ್ನು ಜಪ್ತಿ ಮಾಡಿದ ಬೃಹನ್ಮುಂಬಯಿ ಮಹಾನಗರ ಪಾಲಿಕೆ
10:21 AM Mar 09, 2020 | Team Udayavani |
Advertisement
Udayavani is now on Telegram. Click here to join our channel and stay updated with the latest news.