ಹೊಸದಿಲ್ಲಿ: ಉಸಿರಾಟದ ಹನಿಗಳ ಮೂಲಕ ವೇಗವಾಗಿ ಹಬ್ಬುವ ಕೋವಿಡ್ ವೈರಾಣುಗಳನ್ನು ಕಟ್ಟಿ ಹಾಕಲು ಎನ್-95 ಮಾಸ್ಕ್ ಗಳು ಅತ್ಯಂತ ಪರಿಣಾಮಕಾರಿ ಎಂಬುದನ್ನು ಬೆಂಗಳೂರಿನ ತಜ್ಞರ ಸಂಶೋಧನೆ ದೃಢೀಕರಿಸಿದೆ.
ಇಸ್ರೋದ ಪದ್ಮನಾಭ ಪ್ರಸನ್ನ ಸಿಂಹ ಮತ್ತು ಕರ್ನಾಟಕದ ಜಯದೇವ ಇನ್‌ಸ್ಟಿಟ್ಯೂಟ್ ಆಫ್ ಕಾರ್ಡಿಯೊವಾಸ್ಕ್ಯಾಲರ್ ಸೈನ್ಸಸ್ ಆ್ಯಂಡ್ ರಿಸರ್ಚ್‌ನ ಪ್ರಸನ್ನ ಸಿಂಹ ಮೋಹನ ರಾವ್ ಈ ಕುರಿತಾಗಿ ಆಳವಾಗಿ ಸಂಶೋಧನೆ ನಡೆಸಿದ್ದರು. ಇದರ ವರದಿಯನ್ನು “ಫಿಸಿಕ್ಸ್ ಆಫ್ ಫ್ಲ್ಯೂಡ್ಸ್’ ಎಂಬ ವಿಜ್ಞಾನ ಪತ್ರಿಕೆ ಪ್ರಕಟಿಸಿದೆ.
ಸಂಶೋಧನೆ ಹೇಳಿದ್ದೇನು?: ಸಾಮಾನ್ಯವಾಗಿ ಒಬ್ಬ ವ್ಯಕ್ತಿ ಕೆಮ್ಮಿ ದಾಗ, ಸೀನಿದಾಗ ಅದರ ವೈರಾಣು ಹನಿಗಳು 3 ಮೀಟರ್‌ಗೂ ಆಚೆ ವರೆಗೆ ವ್ಯಾಪಿಸಬಲ್ಲವು. ಆದರೆ, ಎನ್- 95 ಮಾಸ್ಕ್ ಧರಿಸಿದ ಸೋಂಕಿ ತನಿಂದ ಈ ಪ್ರಮಾಣ 0.1ರಿಂದ 0.5ರ ವರೆಗೆ ಸೀಮಿತಗೊಳಿಸುತ್ತದೆ ಎಂಬುದು ಸಾಬೀತಾಗಿದೆ.
“ಒಬ್ಬ ವ್ಯಕ್ತಿಯಿಂದ ಸೋಂಕು ಹಬ್ಬುವುದನ್ನು ಕಡಿಮೆ ಮಾಡಲು ಸಾಧ್ಯವಾದರೆ, ಇದರಿಂದ ಆರೋಗ್ಯ ವಂತ ವ್ಯಕ್ತಿಗಳಿಗೆ ಅನುಕೂಲವಾಗುತ್ತದೆ’ ಎಂದು ಸಿಂಹ ಅಭಿಪ್ರಾಯ ಪಟ್ಟಿದ್ದಾರೆ.
ಸತತ ಚಿತ್ರಗಳ ಮೂಲಕ ಕೆಮ್ಮಿನ ಚಲನೆಯನ್ನು ಪತ್ತೆ ಹಚ್ಚುವ ಮೂಲಕ ಈ ಸಂಶೋಧನೆ ನಡೆಸಲಾಗಿತ್ತು. ‘ಎನ್-95′ ಮಾಸ್ಕ್ ಧರಿಸಿದ ವ್ಯಕ್ತಿಯ ಉಸಿರಾಟದ ಹನಿಗಳ ವೇಗ ವನ್ನು ಸಂಶೋಧನಾ ತಂಡ ಅಂದಾ ಜಿಸಿದೆ. ಸಾಮಾನ್ಯ ವಾಗಿ “ಎನ್-95’ ಮಾಸ್ಕ್ ಗಳನ್ನು ವೈದ್ಯಕೀಯ ಸಿಬ್ಬಂದಿ ಹೆಚ್ಚಾಗಿ ಬಳಸುತ್ತಿದ್ದಾರೆ.