Advertisement

ರೈಲು ನಿಲ್ದಾಣದಲ್ಲಿ ಭೂತ ಇಲ್ಲ,ಪಿಶಾಚಿಯೂ ಇಲ್ಲ!

02:37 PM Dec 31, 2017 | |

ಬೆಗುಂಕೊದೊರ್‌ (ಪಶ್ಚಿಮ ಬಂಗಾಲ): ದೆವ್ವ, ಭೂತಗಳ ನಿಲ್ದಾಣವೆಂದು ಕುಖ್ಯಾತಿ ಪಡೆದಿರುವ ಪುರೂಲಿಯಾ ಜಿಲ್ಲೆಯ ಬೆಗುಂಕೊದೊರ್‌ ರೈಲ್ವೇ ನಿಲ್ದಾಣ ದಲ್ಲಿ ಉತ್ಸಾಹಿ ಯುವಕರ ತಂಡವೊಂದು ರಾತ್ರಿಯನ್ನು ಕಳೆದು ಸ್ಥಳೀಯ ಜನರ ಮೌಡ್ಯವನ್ನು ಸಾಬೀತುಪಡಿಸಿದೆ. 

Advertisement

ವಿಚಾರವಾದಿಗಳ ವೇದಿಕೆಯಾದ ಪಶ್ಚಿಮ್‌ ಬಾಂಗ್ಲಾ ಬಿಗ್ಯಾನ್‌ ಮಂಚ್‌ಗೆ ಸೇರಿದ ಒಂಬತ್ತು ಯುವಕರು ಈ ರೈಲು ನಿಲ್ದಾಣದಲ್ಲಿ ಗುರುವಾರ ರಾತ್ರಿ ಯಾವುದೇ ಆತಂಕವಿಲ್ಲದೆ ಕಳೆದಿದ್ದಾರೆ. ಇವರಿಗೆ ಕೆಲ ಪೊಲೀಸ್‌ ಸಿಬಂ ದಿಯೂ ಸಾಥ್‌ ನೀಡಿದ್ದು ವಿಶೇಷ. ಸಂಶೋಧನೆಯ ದೃಷ್ಟಿಯಲ್ಲಿ ಇವರೆಲ್ಲರೂ ಕೆಮರಾ, ಕಂಪಾಸ್‌ ಮುಂತಾದ ಪರಿಕರಗಳನ್ನಿಟ್ಟುಕೊಂಡೇ ನಿಲ್ದಾಣದಲ್ಲಿ ರಾತ್ರಿ ಕಳೆದಿದ್ದಾರೆ. 

ಕುಖ್ಯಾತಿಗೆ ಕಾರಣ: ಅಯೋಧ್ಯಾ ಹಿಲ್ಸ್‌ ಬಳಿಯಿರುವ ಈ ಬೆಗುಂಕೊದೊರ್‌ ರೈಲು ನಿಲ್ದಾಣ, ಪುರೂಲಿಯಾ ಜಿಲ್ಲಾ ಕೇಂದ್ರದಿಂದ ಸುಮಾರು 50 ಕಿ.ಮೀ. ದೂರದಲ್ಲಿದೆ. 1960ರಲ್ಲಿ ನಿರ್ಮಾಣವಾಗಿದ್ದ ಈ ರೈಲು ನಿಲ್ದಾಣಕ್ಕೆ 1967ರಿಂದ ದೆವ್ವಗಳ ನಿಲ್ದಾಣ ವೆಂಬ ಹಣೆಪಟ್ಟಿ ಅಂಟಿಕೊಂಡಿತು. ಇದಕ್ಕೆ ಕಾರಣ, ಆ ವರ್ಷದ ಒಂದು ರಾತ್ರಿ ನಿಲ್ದಾ ಣದ ಸ್ಟೇಷನ್‌ ಮಾಸ್ಟರ್‌, ಬಿಳಿ ಸೀರೆಯುಟ್ಟಿದ್ದ ಹೆಣ್ಣೊಬ್ಬಳು ನಿಲ್ದಾಣದ ಬಳಿಯ ರೈಲ್ವೆ ಹಳಿಗಳ ಮೇಲೆ ನಡೆದುಕೊಂಡಿದ್ದನ್ನು ನೋಡಿ ಎದೆಯೊಡೆದು ಸತ್ತೇ ಹೋಗಿದ್ದು.  

ಹೀಗಾಗಿ, ಇಲ್ಲಿಗೆ ಯಾವ ಪ್ರಯಾಣಿಕರೂ ಬರುತ್ತಿರಲಿಲ್ಲ. ಈ ನಿಲ್ದಾಣವನ್ನು ಮುಚ್ಚಲಾಗಿತ್ತು. ಆದರೆ, ಮಮತಾ ಬ್ಯಾನರ್ಜಿ ಅವರು ಪಶ್ಚಿಮ ಬಂಗಾಲದ ಸಿಎಂ ಆದ ಅನಂತರ, ಈ ನಿಲ್ದಾಣ 2009ರಲ್ಲಿ ಪುನರಾರಂಭವಾಯಿತು. ಆಗಿನಿಂದ ಇಲ್ಲಿ ರೈಲು, ಜನರು ಓಡಾಡುತ್ತಾರಾದರೂ ಸಂಜೆ 5ರ ಅನಂತರ ಯಾರೂ ಇತ್ತ ಸುಳಿಯುತ್ತಲೇ ಇರಲಿಲ್ಲ. 

Advertisement

Udayavani is now on Telegram. Click here to join our channel and stay updated with the latest news.

Next