Advertisement
ಬಳಿಕ ಅಲ್ಲೇ ಇದ್ದ ಅಂಬೇಡ್ಕರ್ ಪ್ರತಿಮೆ ಮುಂದೆ ನಿಂತು ಜೈಕಾರದ ಘೋಷಣೆ ಕೂಗಿದರು. ಅನಂತರ ವೇದಿಕೆ ಕಾರ್ಯಕ್ರಮ ನಡೆಯಿತು. ಇದಾದ ಬಳಿಕವೂ ಮಹಿಷ ದಸರಾ ಆಚರಣೆ ಸಮಿತಿಯವರು ಬೆಟ್ಟಕ್ಕೆ ಹೋಗಲು ಪಟ್ಟು ಹಿಡಿದರು. ಆಗ ಪೊಲೀಸರು, ಜ್ಞಾನಪ್ರಕಾಶ ಸ್ವಾಮೀಜಿ ಹಾಗೂ ಮಾಜಿ ಮೇಯರ್ ಪುರುಷೋತ್ತಮ ಅವರನ್ನು ಜೀಪಿನಲ್ಲಿ ಹತ್ತಿಸಿಕೊಂಡರು. ನೇರವಾಗಿ ಅಶೋಕಪುರಂನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಸ್ಥಿತಿಯಲ್ಲಿ ನಡೆಯುತ್ತಿದ್ದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಚಾಲನಾ ಕಾರ್ಯಕ್ರಮದ ವೇದಿಕೆ ಬಳಿಗೆ ಬಿಟ್ಟರು. ಅವರಿಬ್ಬರೂ ವೇದಿಕೆಗೆ ಹೋಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಮೈಸೂರು: ಚಾಮುಂಡಿಬೆಟ್ಟದಲ್ಲಿ ಮಹಿಷಾ ಪ್ರತಿಮೆಗೆ ಪುಷ್ಪಾರ್ಚನೆಗೆ ಜಿಲ್ಲಾಡಳಿತ ಅವಕಾಶ ಕೊಡದ ಹಿನ್ನೆಲೆಯಲ್ಲಿ ಸರಕಾರ ನಡೆಸುವ ದಸರಾ ಮಹೋತ್ಸವದ ಉದ್ಘಾಟನೆಗೆ ಅಡ್ಡಿಪಡಿಸಲಾಗುವುದು ಎಂದು ಮಾಜಿ ಮೇಯರ್ ಪುರುಷೋತ್ತಮ್ ಎಚ್ಚರಿಕೆ ನೀಡಿದರು. ಅ. 12ರಂದು ಅಶೋಕ ಚಕ್ರವರ್ತಿಯ ಜನ್ಮ ದಿನವಿದ್ದು, ಜಂಬೂ ಸವಾರಿಯ ದಿನದಂದು ಅಶೋಕಪುರಂನಿಂದ ಪುರಭವನದವರೆಗೆ ಅಶೋಕ ಮಹಾರಾಜರ ಭಾವಚಿತ್ರವನ್ನು ಮೆರವಣಿಗೆ ಮೂಲಕ ತರುತ್ತೇವೆ. ಜಿಲ್ಲಾಡಳಿತ ಇದಕ್ಕೆ ಅವಕಾಶ ಕೊಡಬೇಕು. ಇಲ್ಲದಿದ್ದರೆ ದಸರೆಗೆ ಅಡ್ಡಿ ಪಡಿಸಲಾಗುವುದು ಎಂದರಲ್ಲದೇ, ದಸರಾವನ್ನು ನೀವು ಯಾವ ರೀತಿ ಮಾಡುತ್ತೀರಾ ನಾನು ನೋಡುತ್ತೇನೆ ಎಂದು ಸವಾಲು ಹಾಕಿದರು.