Advertisement

Mysuru; ಪ್ರಧಾನಿ ಮೋದಿ ಬೃಹತ್‌ ರೋಡ್‌ ಶೋ: ತೂರಿ ಬಂದ ಮೊಬೈಲ್!

08:12 PM Apr 30, 2023 | Team Udayavani |

ಮೈಸೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮೈಸೂರು ನಗರದಲ್ಲಿ ಭಾನುವಾರ ಸಂಜೆ ಬೃಹತ್‌ ರೋಡ್‌ ಶೋ ನಡೆಸಿದರು. ಈ ವೇಳೆ ಅವರೊಂದಿಗೆ ಮಾಜಿ ಸಚಿವರಾದ ಈಶ್ವರಪ್ಪ, ರಾಮದಾಸ್ ಮತ್ತು ಸಂಸದ ಪ್ರತಾಪ್ ಸಿಂಹ ಅವರು ಉಪಸ್ಥಿತರಿದ್ದರು.

Advertisement

ಮೈಸೂರಿನ ಮಹಾರಾಜ ಕಾಲೇಜಿನ ಮೈದಾನದಲ್ಲಿ ಹೆಲಿಕಾಪ್ಟರ್‌ನಲ್ಲಿ ಬಂದಿಳಿದ ಪ್ರಧಾನಿ ಮೋದಿ ಗನ್‌ ಹೌಸ್‌ನಿಂದ ರೋಡ್‌ ಶೋ ಪ್ರಾರಂಭಿಸಿದರು. ಮೈಸೂರು ನಗರದ ಕೃಷ್ಣರಾಜ, ಚಾಮರಾಜ ಮತ್ತು ನರಸಿಂಹ ರಾಜ ಕ್ಷೇತ್ರಗಳ ವ್ಯಾಪ್ತಿಯ ಪ್ರಮುಖ ರಸ್ತೆಯಿಂದ ದಸರಾ ಜಂಬೂಸವಾರಿ ಮೆರವಣಿಗೆ ಹಾದು ಹೋಗುವ ರಾಜಮಾರ್ಗದಲ್ಲಿ ರೋಡ್‌ ಶೋ ನಡೆಸಿದರು.

ಚಿಕ್ಕಗಡಿಯಾರ ಬಳಿ ರೋಡ್ ಶೋ ಸಾಗುತ್ತಿದ್ದಾಗ ಹೂವಿನ ಜತೆ ಮೊಬೈಲ್ ಒಂದು ತೂರಿಬಂದಿದೆ. ರೋಡ್ ಶೋ ನಡೆಸುತ್ತಿದ್ದ ವಾಹನ ಅಂದರೆ ಪ್ರಧಾನಿ ಮೋದಿ ಅವರ ಮುಂಭಾಗದಲ್ಲಿ ಬಿದ್ದ ಮೊಬೈಲ್ ಆ ನಂತರ ಕೆಳಗೆ ಬಿದ್ದಿದೆ. ಮೊಬೈಲ್ ಬಿದ್ದ ತತ್ ಕ್ಷಣ ಭದ್ರತಾ ಸಿಬಂದಿಗಳು ಜಾಗ್ರತವಾದರು. ನಗರದೆಲ್ಲೆಡೆ ವ್ಯಾಪಕ ಕಟ್ಟೆಚ್ಚರ ವಹಿಸಲಾಗಿತ್ತು. ಮೊಬೈಲ್ ಬಿದ್ದ ಕುರಿತು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಪ್ರಧಾನಿ ಮೋದಿ ಅವರು ಕೇರಳದ ಕೊಚ್ಚಿಯಲ್ಲಿ ರೋಡ್‌ಶೋ ನಡೆಸುತ್ತಿದ್ದ ವೇಳೆ ಎಸ್‌ಪಿಜಿ ಅಧಿಕಾರಿಯೊಬ್ಬರು ಪಿಎಂ ಮೋದಿಯತ್ತ ಎಸೆದ ಮೊಬೈಲ್ ಫೋನ್ ಅನ್ನು ತಡೆದಿದ್ದರು.

ಬಸವೇಶ್ವರ ವೃತ್ತ, ಚಾಮರಾಜ ಜೋಡಿ ರಸ್ತೆ, ಮಹಾನಗರಪಾಲಿಕೆ ರಸ್ತೆ, ಕೆ.ಆರ್‌.ವೃತ್ತ, ಆಯುರ್ವೇದ ವೃತ್ತ, ಬಂಬೂಬಜಾರ್‌ ರಸ್ತೆ, ಹೈವೇ ಸರ್ಕಲ್ , ಎಲ್ಐಸಿ ಸರ್ಕಲ್‌ನಲ್ಲಿ ರೋಡ್‌ ಶೋ ಅಂತ್ಯವಾಗಬೇಕಾಗಿತ್ತು ಆದರೆ ಸಮಯದ ಅಭಾವದಿಂದ ಹೈವೇ ಸರ್ಕಲ್ ನಲ್ಲೆ ರೋಡ್ ಶೋ ಮುಕ್ತಾಯಗೊಳಿಸಲಾಯಿತು.

Advertisement

ರಸ್ತೆಯ ಎರಡು ಬದಿಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ಸೇರಿದ್ದರು. ಮೋದಿ, ಮೋದಿ ಎಂಬ ಘೋಷಣೆಗಳನ್ನು ಮೊಳಗಿಸಿದರು. ಕಾಡಾ ಕಚೇರಿ ಆವರಣ, ದೇವರಾಜ ಮಾರುಕಟ್ಟೆ ಮುಂಭಾಗ ಮತ್ತು ಕಿವುಡು ಮತ್ತು ಮೂಗರ ಶಾಲೆಯ ಆವರಣದಲ್ಲಿ ಹಿರಿಯ ನಾಗರಿಕರಿಗೆ ಆಸನದ ವ್ಯವಸ್ಥೆಮಾಡಲಾಗಿತ್ತು. ಮೆರವಣಿಗೆಯ ಉದ್ದಕ್ಕೂ ಸಾಂಪ್ರದಾಯಿಕ ಉಡುಗೆ ಧರಿಸಿ ಪಕ್ಷದ ಕಾರ್ಯಕರ್ತರು ಭಾಗವಹಿಸಿದರು.ಜಾನಪದ ಕಲಾ ತಂಡಗಳ ಪ್ರದರ್ಶನವೂ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next