Advertisement

Mysuru Dasara; ನಾಳೆ ಬೆಳಗ್ಗೆ ಹಂಸಲೇಖ ಅವರಿಂದ ಶುಭ ಲಗ್ನದಲ್ಲಿ ಉದ್ಘಾಟನೆ

04:55 PM Oct 14, 2023 | Team Udayavani |

ಮೈಸೂರು: ದಸರಾ ಮಹೋತ್ಸವ 2023 ರ ಉದ್ಘಾಟನೆಯನ್ನು ನಾದಬ್ರಹ್ಮ ಡಾ.ಹಂಸಲೇಖ ಅವರು ಚಾಮುಂಡಿ ದೇವಿಯ ಅಗ್ರ ಪೂಜೆಯೊಂದಿಗೆ ಅಕ್ಟೊಬರ್ 15 ರಂದು(ಭಾನುವಾರ) ಬೆಳಗ್ಗೆ 10.15 ರಿಂದ 10.36 ರೊಳಗೆ ಸಲ್ಲುವ ಶುಭ ವೃಶ್ಚಿಕ ಲಗ್ನ ದಲ್ಲಿ ನೆರವೇರಿಸಲಿದ್ದಾರೆ.

Advertisement

ಮೈಸೂರು ದಸರಾ ಮಹೋತ್ಸವ ಅ 24 ರಂದು ಮಂಗಳವಾರ ಮಧ್ಯಾಹ್ನ 1.46 ರಿಂದ 2.08 ಗಂಟೆಯವರೆಗೆ ಅರಮನೆ ಬಲರಾಮ ದ್ವಾರದಲ್ಲಿ ನಂದಿಧ್ವಜ ಪೂಜೆ ಹಾಗೂ ಸಂಜೆ 4.40 ರಿಂದ 5.00 ರವರೆಗೆ‌ ಅರಮನೆ ಆವರಣದಲ್ಲಿ ವಿಜಯದಶಮಿ ಮೆರವಣಿಗೆ ಕಾರ್ಯಕ್ರಮ ನಡೆಯಲಿದೆ.

ದಸರಾ ಗಜಪಡೆ ಮತ್ತು ಅಶ್ವಪಡೆಗೆ 2ನೇ ಹಂತದ ಫಿರಂಗಿ ಸಿಡಿಮದ್ದು ತಾಲೀಮು ಶುಕ್ರವಾರ ಯಶಸ್ವಿಯಾಗಿ ನಡೆಯಿತು. ನಗರದ ದಸರಾ ವಸ್ತುಪ್ರದರ್ಶನ ಆವರಣದ ಪಾರ್ಕಿಂಗ್‌ ಜಾಗದಲ್ಲಿ ಶುಕ್ರವಾರ ಸಂಜೆ ನಡೆದ 2ನೇ ಹಂತದ ಫಿರಂಗಿ ತಾಲೀಮಿನಲ್ಲಿ ಗಜಪಡೆ ಸ್ವಲ್ಪವೂ ಅಂಜದೆ ಧೈರ್ಯ ಪ್ರದರ್ಶಿಸಿವೆ.

ಅಂಬಾರಿ ಆನೆ ಅಭಿಮನ್ಯು ನೇತೃತ್ವದ 9 ಆನೆ, 27 ಆಶ್ವಗಳಿಗೆ 7 ಫಿರಂಗಿಗಳಲ್ಲಿ 3 ಸುತ್ತಿನಂತೆ ಒಟ್ಟು 21 ಕುಶಾಲತೋಪು ಸಿಡಿಸಿ ಭಾರೀ ಶಬ್ಧದ ಪರಿಚಯ ಮಾಡಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next