Advertisement

Watch Live: ದಸರಾ ಮಹೋತ್ಸವ-ಚಿನ್ನದ ಅಂಬಾರಿಯ ಜಂಬೂ ಸವಾರಿ ಆರಂಭ

03:36 PM Oct 26, 2020 | Nagendra Trasi |

ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ಜಂಬೂಸವಾರಿಗೆ ಕ್ಷಣಗಣನೆ ಆರಂಭವಾಗಿದ್ದು, ಇದೇ ಮೊದಲ ಬಾರಿಗೆ ಅಭಿಮನ್ಯು ಚಿನ್ನದ ಅಂಬಾರಿ ಹೊರಲಿದ್ದಾನೆ.  ಮಧ್ಯಾಹ್ನ 2.59ರಿಂದ 3.20ರವರೆಗೆ ಸಲ್ಲುವ ಶುಭ ಮಕರ ಲಗ್ನದಲ್ಲಿ ಅರಮನೆ ಬಲರಾಮ ದ್ವಾರದಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನಂದಿಧ್ವಜಕ್ಕೆ ಪೂಜೆ ಸಲ್ಲಿಸಿ ಚಾಲನೆ ನೀಡಲಿದ್ದಾರೆ. ನಂತರ ಮಧ್ಯಾಹ್ನ 3.40ರಿಂದ ರಿಂದ 4.30 ಗಂಟೆಗೆ ಚಿನ್ನದ ಅಂಬಾರಿಯಲ್ಲಿ ವಿಶೇಷವಾಗಿ ಅಲಂಕೃತಗೊಂಡ ಚಾಮುಂಡೇಶ್ವರಿದೇವಿಗೆ ಪುಷ್ಪಾರ್ಚನೆ ನೆರವೇರಿಸಲಿದ್ದಾರೆ.

Advertisement

ಇದರೊಂದಿಗೆ ಅಂಬಾರಿ ಹೊತ್ತ ಅಭಿಮನ್ಯು ಕುಮ್ಕಿ ಆನೆಗಳಾದ ಕಾವೇರಿ ಹಾಗೂ ವಿಜಯಾಳೊಂದಿಗೆ ಹೆಜ್ಜೆ ಹಾಕಲಿದ್ದಾನೆ. ಪಟ್ಟದ ಆನೆ ಗೋಪಿ ನಿಶಾನೆ ಆನೆ ವಿಕ್ರಮ ಹಿಂದೆ ಸಾಗಲಿವೆ. ಈ ಬಾರಿ ಪಂಜಿನ ಕವಾಯತು ಇಲ್ಲದಿರುವುದರಿಂದ ಕೇವಲ 40 ನಿಮಿಷ ನಡೆಯುವ ಮೆರವಣಿಗೆಯೊಂದಿಗೆ 10 ದಿನಗಳ ನವರಾತ್ರಿ ಉತ್ಸವಕ್ಕೆ ತೆರೆ ಬೀಳಲಿದ್ದು, ಜಂಬೂ ಸವಾರಿಯ ನೇರ ಪ್ರಸಾರ ವೀಕ್ಷಿಸಿ…

Advertisement

Udayavani is now on Telegram. Click here to join our channel and stay updated with the latest news.

Next