Advertisement

ಆಸ್ಟ್ರೇಲಿಯನ್ ಬೀಚ್‌ ನಲ್ಲಿ ಪತ್ತೆಯಾದ ನಿಗೂಢ ವಸ್ತು ಇಸ್ರೋ ರಾಕೆಟ್‌ ನ ಅವಶೇಷ: ವರದಿ

06:57 PM Jul 31, 2023 | Team Udayavani |

ಪರ್ತ್: ಕೆಲ ದಿನಗಳ ಹಿಂದೆ ಆಸ್ಟ್ರೇಲಿಯಾದ ಸಮುದ್ರದ ಕಿನಾರೆಯಲ್ಲಿ ಕಂಡು ಬಂದ ಗುಮ್ಮಟ ಮಾದರಿಯ ನಿಗೂಢ ವಸ್ತುವು ಇಸ್ರೋದ ಬಾಹ್ಯಾಕಾಶ ನೌಕೆಯ ಅವಶೇಷವಾಗಿದೆ ಎಂದು ಆಸ್ಟ್ರೇಲಿಯಾದ ಬಾಹ್ಯಾಕಾಶ ಸಂಸ್ಥೆ ಸೋಮವಾರ ಹೇಳಿದೆ.

Advertisement

“ಪಶ್ಚಿಮ ಆಸ್ಟ್ರೇಲಿಯಾದ ಜುರಿಯನ್ ಕೊಲ್ಲಿಯ ಸಮೀಪವಿರುವ ಕಡಲ ತೀರದಲ್ಲಿರುವ ವಸ್ತುವು ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಪಿಎಸ್‌ಎಲ್‌ವಿ) ಯ ಮೂರನೇ ಹಂತದ ಅವಶೇಷಗಳು ಎಂದು ನಾವು ತೀರ್ಮಾನಿಸಿದ್ದೇವೆ” ಎಂದು ಆಸ್ಟ್ರೇಲಿಯಾದ ಬಾಹ್ಯಾಕಾಶ ಸಂಸ್ಥೆ ಟ್ವಿಟರ್‌ ಹೇಳಿದೆ.

ಪರ್ತ್ ನಗರದ ಉತ್ತರಕ್ಕೆ ಸುಮಾರು 250 ಕಿಲೋಮೀಟರ್ ದೂರದಲ್ಲಿರುವ ಪಶ್ಚಿಮ ಆಸ್ಟ್ರೇಲಿಯಾದ ಗ್ರೀನ್ ಹೆಡ್‌ ನ ಕಡಲತೀರದ ಬಳಿ ಈ ವಸ್ತು ಪತ್ತೆಯಾಗಿದೆ.

ಇದನ್ನೂ ಓದಿ:WFI elections; ಯಾರು ಗೆದ್ದರೂ ಅವರ ಕೆಲಸ ಮಾಡುತ್ತಾರೆ: ಬ್ರಿಜ್ ಭೂಷಣ್

ಪಿಎಸ್ಎಲ್ ವಿ ಭಾರತೀಯ ಬಾಹ್ಯಾಕಾಶ ಸಂಸ್ಥೆ ವಿನ್ಯಾಸಗೊಳಿಸಿದ ಮತ್ತು ನಿರ್ವಹಿಸುವ ಉಡಾವಣಾ ವಾಹನವಾಗಿದೆ.

Advertisement

ನಾವು ಈ ವಸ್ತುವನ್ನು ಶೇಖರಿಸಿಟ್ಟಿದ್ದು, ಮುಂದಿನ ಕ್ರಮಗಳ ಬಗ್ಗೆ ಇಸ್ರೋದ ಜತೆ ಮಾತುಕತೆ ನಡೆಸುತ್ತಿರುವುದಾಗಿ ಆಸ್ಟ್ರೇಲಿಯಾದ ಸಂಸ್ಥೆ ಹೇಳಿದೆ.

“ಆಸ್ಟ್ರೇಲಿಯನ್ ಬಾಹ್ಯಾಕಾಶ ಸಂಸ್ಥೆ ರಾಕೆಟ್ ಅವಶೇಷಗಳ ತಗ್ಗಿಸುವಿಕೆ ಸೇರಿದಂತೆ ಬಾಹ್ಯಾಕಾಶ ಚಟುವಟಿಕೆಗಳ ದೀರ್ಘಾವಧಿಯ ಸುಸ್ಥಿರತೆಗೆ ಬದ್ಧವಾಗಿದೆ, ಇದನ್ನು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಹೈಲೈಟ್ ಮಾಡುವುದನ್ನು ಮುಂದುವರೆಸಿದೆ” ಎಂದು ಅದು ಹೇಳಿದೆ. ಸಮುದಾಯವು ಯಾವುದೇ ಶಂಕಿತ ಅವಶೇಷಗಳನ್ನು ಗುರುತಿಸಿದರೆ ಅವರು ಸ್ಥಳೀಯ ಅಧಿಕಾರಿಗಳಿಗೆ ವರದಿ ಮಾಡಬೇಕು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next