Advertisement

ಅಂತರ್ಜಾತಿ ಮದುವೆಯಾದ ಯುವತಿ ನಿಗೂಢ ನಾಪತ್ತೆ: 5 ವರ್ಷದ ಬಳಿಕ ಪೋಷಕರಿಂದ ದೂರು ದಾಖಲು

08:20 PM Oct 20, 2020 | Mithun PG |

ಮಂಡ್ಯ: ಪೋಷಕರ ವಿರೋಧದ ನಡುವೆ ಕಳೆದ 5 ವರ್ಷಗಳ ಹಿಂದೆ ಅಂತರ್ಜಾತಿ ವಿವಾಹವಾಗಿದ್ದ ಮಗಳನ್ನು ಹುಡುಕಿಕೊಡುವಂತೆ ಪೋಷಕರು ಪೊಲೀಸ್ ಠಾಣೆಗೆ ಹಾಗೂ ರಾಜ್ಯ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ.

Advertisement

ಮಳವಳ್ಳಿ ತಾಲ್ಲೂಕಿನ ನಂಜೇಗೌಡನದೊಡ್ಡಿ ಗ್ರಾಮದ ದಲಿತ ಜನಾಂಗದ ಮಹದೇವಮ್ಮ ಮತ್ತು ಮಹದೇವಯ್ಯ ಅವರ ಪುತ್ರಿ ಮೇಘಶ್ರೀ ನಿಗೂಢವಾಗಿ ಕಣ್ಮರೆಯಾಗಿರುವ ಯುವತಿ. ಆಕೆ 2015ರಲ್ಲಿ ಪಾಂಡವಪುರ ತಾಲ್ಲೂಕಿನ ತಿರುಮಲಾಪುರ ಗ್ರಾಮದ ಕುಮಾರ್ ಪುತ್ರ ಟಿ.ಕೆ.ಸ್ವಾಮಿ ಎಂಬಾತನನ್ನು ಪ್ರೀತಿಸಿ ವಿರೋಧದ ನಡುವೆಯೂ ಅಂತರ್ಜಾತಿ ವಿವಾಹವಾಗಿದ್ದರು. ಅದರ ಬಗ್ಗೆ ಮಗಳು ತಿಳಿಸಿದ್ದಳು ಎನ್ನಲಾಗಿದೆ. 5 ವರ್ಷದ ಬಳಿಕ ಮಗಳನ್ನು ಹುಡುಕಿಕೊಂಡ ಬಂದ ಪೋಷಕರಿಗೆ ಆಕೆ ನಿಗೂಢವಾಗಿ ಕಣ್ಮರೆಯಾಗಿರುವುದನ್ನು ತಿಳಿದು ದಿಗ್ಭ್ರಾಂತರಾಗಿದ್ದಾರೆ.

ಇದನ್ನೂ ಓದಿ:  ಕೋವಿಡ್ 19: ಮೈಮರೆಯಬೇಡಿ…ಲಾಕ್ ಡೌನ್ ತೆರವುಗೊಂಡಿದೆ, ವೈರಸ್ ಇನ್ನೂ ಇದೆ: ಮೋದಿ

ದೂರಿನ ಸಾರಾಂಶ:

2014-15ರಲ್ಲಿ ನಾವು ಬೆಂಗಳೂರಿನ ಕೋಡಿಚಿಕ್ಕನಹಳ್ಳಿಯಲ್ಲಿ ವಾಸವಾಗಿದ್ದೆವು. ನಮ್ಮ ಎರಡನೇ ಮಗಳು ಮೇಘಶ್ರೀ ಬೊಮ್ಮನಹಳ್ಳಿಯಲ್ಲಿರುವ ಎಂಇಟಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಆ ಸಂದರ್ಭದಲ್ಲಿ ಮೇಘಶ್ರೀಗೆ ಸಿಂಧು, ಉಷಾ ಮತ್ತು ರಮ್ಯಾ ಎಂಬವರ ಪರಿಚಯವಾಗಿದೆ. ಇವರು ಪಾಂಡವಪುರ ತಾಲ್ಲೂಕು ಟಿ.ಕೆ.ಸ್ವಾಮಿ (ಉಷಾ ಮತ್ತು ರಮ್ಯಾರ ಅತ್ತೆ ಮಗ) ಎಂಬ ಯುವಕನನ್ನು ಪರಿಚಯಿಸಿದ್ದು, ಇದು ಪ್ರೇಮಕ್ಕೆ ತಿರುಗಿ 2015ರಲ್ಲಿ ಮದುವೆಯಾಗಿದ್ದಾರೆ. ನಂತರ ಒಂದು ವರ್ಷ ತಿರುಮಲಾಪುರ ಗ್ರಾಮದಲ್ಲಿ ವೈವಾಹಿಕ ಜೀವನ ನಡೆಸಿದ್ದಾರೆ.

Advertisement

ಒಂದು ವರ್ಷದ ಬಳಿಕ ಮೇಘಶ್ರೀ ತಮಗೆ ದೂರವಾಣಿ ಕರೆ ಮಾಡಿ ನಾನು ತಿರುಮಲಾಪುರದ ಟಿ.ಕೆ.ಸ್ವಾಮಿ ಎಂಬವರನ್ನು ಮದುವೆಯಾಗಿದ್ದು, ಸ್ವಾಮಿ ಮತ್ತು ಅವರ ತಂದೆ ಕುಮಾರ ಅವರು ಜಾತಿ ನಿಂದನೆ ಮಾಡುತ್ತಿದ್ದಾರೆ. ಅಲ್ಲದೆ, ಕಿರುಕುಳ ನೀಡುತ್ತಿದ್ದು, ನನ್ನನ್ನು ಕೊಲೆ ಮಾಡಲು ಯತ್ನಿಸುತ್ತಿದ್ದಾರೆ ಎಂದು ತಿಳಿಸಿದ್ದಳು. ಇದಾದ ಬಳಿಕ ನಾಲ್ಕೈದು ವರ್ಷಗಳಿಂದ ಯಾವುದೇ ಫೋನ್ ಕರೆಯಾಗಲೀ, ಸಂಪರ್ಕವೇ ಇರಲಿಲ್ಲ.

ಇದನ್ನೂ ಓದಿ: ಉದಯವಾಣಿ ವರದಿಗೆ ಸ್ಪಂದನೆ: ಅಂಧ ಸಹೋದರಿಯರನ್ನು ಕರೆಸಿ ಕುಶಲೋಪರಿ ವಿಚಾರಿಸಿದ‌ ಪವರ್ ಸ್ಟಾರ್

ತದನಂತರದಲ್ಲಿ ನನ್ನ ಮಗಳಿಗಾಗಿ ಹುಡುಕಾಡಿದರೂ ಪತ್ತೆಯಾಗಲಿಲ್ಲ. ಕಳೆದ ಅ.10 ರಂದು ಮನೆಯ ಬೀರುವನ್ನು ಸ್ವಚ್ಛಗೊಳಿಸುತ್ತಿದ್ದಾಗ ಟಿ.ಕೆ.ಸ್ವಾಮಿಯ ಚುನಾವಣಾ ಗುರುತಿನ ಚೀಟಿ ಸಿಕ್ಕಿದೆ. ಇದರ ಆಧಾರದ ಮೇಲೆ ಸ್ವಾಮಿ ಅವರ ಗ್ರಾಮಕ್ಕೆ ತೆರಳಿ ವಿಚಾರಿಸಿದಾಗ ಅಲ್ಲಿನ ಗ್ರಾಮಸ್ಥರು ನಿಮ್ಮ ಮಗಳನ್ನು ಕೊಲೆ ಮಾಡಿ ಮುಚ್ಚಿ ಹಾಕಿದ್ದಾರೆ ಎಂದು ತಿಳಿಸಿದರು.

ಇದರಿಂದ ನಾವು ಪಾಂಡವಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ, ಕಳೆದ 15ರಂದು ಪೊಲೀಸರ ಜತೆ ತೆರಳಿ ಸ್ವಾಮಿ ಅವರ ಮನೆಯವರನ್ನು ವಿಚಾರಿಸಿದಾಗ, ಸ್ವಾಮಿ ಅವರ ತಂದೆ ಕುಮಾರ್ ಅವರು ನಿಮ್ಮ ಮಗಳು ತುಂಬಾ ದಿನಗಳ ಹಿಂದೆಯೇ ಹೊರಟು ಹೋದಳು ಎಂದು ತಿಳಿಸಿದ್ದಾರೆ. ಆದ್ದರಿಂದ ಸ್ವಾಮಿಯನ್ನು ಠಾಣೆಗೆ ಕರೆಯಿಸಿ ವಿಚಾರಣೆ ನಡೆಸಿ ಸತ್ಯಾಸತ್ಯತೆಯನ್ನು ಬಹಿರಂಗಪಡಿಸಬೇಕು ಎಂದು ಮೇಘಶ್ರೀ ಅವರ ತಾಯಿ ಮಹದೇವಮ್ಮ ಮನವಿ ಮಾಡಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next