ಮೈಸೂರು: ಎಜುಕೇಷನ್ ವರ್ಲ್ಡ್ ರ್‍ಯಾಂಕಿಂಗ್‌ನಲ್ಲಿ 38ನೇ ಸ್ಥಾನ ಗಳಿಸಿದ್ದ ಮೈಸೂರು ವಿಶ್ವವಿದ್ಯಾನಿಲಯ ಇದೀಗ ಟೈಮ್ಸ್ ಉನ್ನತ ಶಿಕ್ಷಣ ಶ್ರೇಯಾಂಕ 2020ರ ವರ್ಲ್ಡ್ ರ್‍ಯಾಂಕಿಂಗ್ ಪಟ್ಟಿಯಲ್ಲಿ ಸ್ಥಾನ ಪಡೆದ ರಾಜ್ಯದ ಏಕೈಕ ವಿಶ್ವವಿದ್ಯಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಭಾರತದಲ್ಲಿ ಸಾವಿರ ಶ್ರೇಯಾಂಕಗಳಲ್ಲಿ ಕೇವಲ 35 ಉನ್ನತ ಶಿಕ್ಷಣ ಸಂಸ್ಥೆಗಳು ಈ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.
ಈ ಪೈಕಿ ಮೈಸೂರು ವಿವಿ ಸಾವಿರಕ್ಕೂ ಹೆಚ್ಚು ಶ್ರೇಯಾಂಕ ಪಡೆದಿದೆ. ಮೈಸೂರು ವಿವಿ 2018ರ ಸಾಲಿನಿಂದಲೂ 1000ಕ್ಕೂ ಹೆಚ್ಚು ಶ್ರೇಯಾಂಕ ಪಡೆದು ತನ್ನ ಸ್ಥಾನ ಉಳಿಸಿ ಕೊಂಡು ಪ್ರಸ್ತುತ ವರ್ಷ ಅಗ್ರಸ್ಥಾನ ಗಳಿಸಿದೆ. ಭಾರತದಲ್ಲಿ ಕೇವಲ 35 ಉನ್ನತ ಶಿಕ್ಷಣ ಸಂಸ್ಥೆಗಳು 1000 ಶ್ರೇಣಿಗಳಲ್ಲಿ ಸ್ಥಾನ ಪಡೆದಿವೆ. ಟೈಮ್ಸ್ ಉನ್ನತ ಶಿಕ್ಷಣದ ಅಂತಾರಾಷ್ಟ್ರೀಯ ಶ್ರೇಯಾಂಕ ಪಡೆಯಲು 92 ದೇಶಗಳ 1400ಕ್ಕೂ ಹೆಚ್ಚು ವಿಶ್ವವಿದ್ಯಾಲ ಯಗಳು ಭಾಗವಹಿಸಿದ್ದವು.
ಮೈಸೂರು ವಿಶ್ವವಿದ್ಯಾ ಲಯ ಜೀವ ವಿಜ್ಞಾನ ವಿಷಯದಲ್ಲಿ 25.4 ಉಲ್ಲೇಖಗ ಳೊಂದಿಗೆ 601+ ಹಾಗೂ ಭೌತಿಕ ವಿಜ್ಞಾನದಲ್ಲಿ 801+ ಸ್ಥಾನ ಪಡೆದಿದೆ. ಇಂಪ್ಯಾಕ್ಟ್ ಶ್ರೇಯಾಂಕದ ಅಡಿಯಲ್ಲೂ 601+ ಶ್ರೇಯಾಂಕ ಪಡೆದಿದೆ. 17 ಪ್ರಭಾವ ಸೂಚಕಗಳನ್ನು ಶ್ರೇಯಾಂಕ ನೀಡಲು ಬಳಸಲಾಗುತ್ತದೆ. 85 ದೇಶಗಳ ಪೈಕಿ 767 ವಿಶ್ವವಿದ್ಯಾಲಯಗಳನ್ನು ಇಂಪ್ಯಾಕ್ಟ್ ಶ್ರೇಯಾಂಕ ಕ್ಕಾಗಿ ಮೌಲ್ಯಮಾಪನ ಮಾಡಲಾಗಿದೆ ಎಂದು ಮೈಸೂರು ವಿವಿ ತಿಳಿಸಿದೆ.
ಎಜುಕೇಷನ್ ವರ್ಲ್ಡ್ ರ್‍ಯಾಂಕಿಂಗ್‌ನಲ್ಲಿ 38ನೇ ಸ್ಥಾನ ಗಳಿಸಿದ್ದ ಮೈಸೂರು ವಿವಿ ಇದೀಗ ಟೈಮ್ಸ್ ಉನ್ನತ ಶಿಕ್ಷಣ ಶ್ರೇಯಾಂಕ 2020ರ ವರ್ಲ್ಡ್ ರ್‍ಯಾಂಕಿಂಗ್ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಈ ವಿಷಯವನ್ನು ಮೈಸೂರು ವಿವಿ ಸಂಸ್ಥಾಪಕ ನಾಲ್ವಡಿ ಒಡೆಯರ್ ಅವರ ಜಯಂತಿಯಂದೇ ಪ್ರಕಟಿಸಿರುವುದು ಮತ್ತಷ್ಟು ಖುಷಿ ನೀಡಿದೆ. ವಿವಿಯ ಮತ್ತಷ್ಟು ಪ್ರಗತಿಗೆ ಶ್ರಮಿಸುವೆ.
-ಪ್ರೊ.ಹೇಮಂತ್ ಕುಮಾರ್, ಮೈಸೂರು ವಿವಿ ಕುಲಪತಿ