ಮೈಸೂರು: ಮೈಸೂರು ವಿಶ್ವವಿದ್ಯಾನಿಲಯದ ಸಂಶೋಧಕರ ನೆರವಿನೊಂದಿಗೆ ಹೈದರಬಾದ್ ಮೂಲದ ಕಂಪನಿಯೊಂದು ‘ಕೋವಿಡ್ -19 ‘ ಪರೀಕ್ಷಿಸುವ ಅತ್ಯಂತ ಸರಳ ಕಿಟ್ ವೊಂದನ್ನು ಅಭಿವೃದ್ಧಿಪಡಿಸಿದೆ. ಮನೆಯಲ್ಲೇ ಕೂತು ಜನರು ತಮಗೆ ಕೋವಿಡ್ ಇದೆಯೇ ಇಲ್ಲವೇ ಎಂಬುದನ್ನು ಪರೀಕ್ಷಿಸಿಕೊಳ್ಳಬಹುದು.
ದೇಶದಲ್ಲಿ ಇದೇ ಮೊದಲ ಬಾರಿಗೆ ಸರಕಾರಿ ಸ್ವಾಮ್ಯದ ವಿಶ್ವವಿದ್ಯಾನಿಲಯ ಒಂದರ ಸಂಶೋಧಕರ ತಂಡ ಸಾರ್ವಜನಿಕರಿಗೆ ಉಪಯೋಗವಾಗುವ ನಿಟ್ಟಿನಲ್ಲಿ ಸಂಶೋಧನೆ ನಡೆಸಿ ಅದನ್ನು ಬಳಕೆಗೆ ತರುವಲ್ಲಿ ಯಶಸ್ವಿಯಾಗಿದೆ.
ಇದನ್ನೂ ಓದಿ:ಚಿಕ್ಕೋಡಿ ಕೃಷಿ ಜಿಲ್ಲೆಯಾಗಿ ಘೋಷಿಸುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆ: ಬಿ.ಸಿ.ಪಾಟೀಲ್
ಮೈಸೂರು ವಿವಿ ವಿಶ್ರಾಂತ ಕುಲಪತಿ, ರಸಾಯನ ಶಾಸ್ತ್ರಜ್ಞ ಪ್ರೊ.ಕೆ.ಎಸ್.ರಂಗಪ್ಪ ಅವರ ಮಾರ್ಗದರ್ಶನದಲ್ಲಿ ಮೈಸೂರು ವಿವಿ ವಿಜ್ಞಾನ ಭವನದ ಸಂಚಾಲಕ ಡಾ.ಎಸ್.ಚಂದ್ರನಾಯಕ್ ಹಾಗೂ ಮೈಸೂರು ವಿವಿ ಮಾಲಿಕ್ಯೂಲರ್ ಬಯಲಾಜಿಯ ಸಹಾಯಕ ಪ್ರಾಧ್ಯಾಪಕ ಡಾ.ಸಿ.ಡಿ.ಮೋಹನ್ ನೇತೃತ್ವದಲ್ಲಿ ಈ ಸಂಶೋಧನೆ ನಡೆಸಲಾಗಿದೆ. ಈ ಸಂಶೋಧನೆಗೆ ಬೆನ್ನೆಲುಬಾಗಿ ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಸಹಕಾರ ನೀಡಿದ್ದು, ಸಂಶೋಧನೆಗೆ ಅಗತ್ಯ ನೆರವು ನೀಡಿ ಪ್ರೋತ್ಸಾಹಿಸಿದ್ದಾರೆ.
ಇದನ್ನೂ ಓದಿ: ಮೈಸೂರು ತಾಯಿಮನೆ ಪ್ರೀತಿಕೊಟ್ಟಿದೆ,ಮಗಳು ಅನ್ನೋ ಫೀಲಿಂಗ್ನಲ್ಲಿ ಹೋಗ್ತಿದ್ದೇನೆ : ಸಿಂಧೂರಿ