Advertisement

Mysore; ರಾತ್ರೋರಾತ್ರಿ ಪ್ರತಿಮೆ ಪ್ರತಿಷ್ಠಾಪನೆಗೆ ಪ್ರಮೋದಾದೇವಿ ವಿರೋಧ

12:26 PM Dec 09, 2023 | Team Udayavani |

ಮೈಸೂರು: ನಗರದ ಗನ್‌ ಹೌಸ್ ವೃತ್ತದಲ್ಲಿ ಲಿಂಗೈಕ್ಯ ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಪ್ರತಿಮೆಯನ್ನು ರಾತ್ರೋರಾತ್ರಿ ಪ್ರತಿಷ್ಠಾಪಿಸಿದ ವಿಚಾರವಾಗಿ ರಾಜಾ ವಂಶಸ್ಥೆ ಪ್ರಮೋದಾದೇವಿ ಒಡೆಯರ್ ವಿರೋಧ ವ್ಯಕ್ತಪಡಿಸಿದ್ದಾರೆ.

Advertisement

ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಈ ಪ್ರತಿಮೆಯನ್ನು ರಾತ್ರಿ ವೇಳೆ ಪ್ರತಿಷ್ಠಾಪನೆ ಮಾಡಿರುವುದು ದುರದೃಷ್ಟಕರ ಸಂಗತಿ. ಪ್ರಬುದ್ಧ ಸಂಸ್ಥೆಯಿಂದ ಇಂತಹ ಕೆಲಸ ಸಮಂಜಸವಲ್ಲ. ಉದ್ದೇಶಿತ ಪ್ರತಿಮೆಗೆ ಸತತವಾಗಿ ವಿರೋಧ ತೋರಿದ ಸಾರ್ವಜನಿಕರಿಗೆ ಸ್ಪಂದಿಸಿ ಈ ಬಗ್ಗೆ ಪುನರ್ ವಿಮರ್ಶೆ ಮಾಡಲು ಮನವಿ ಕೂಡ ತಲುಪಿಸಿ ನನ್ನ ಬೆಂಬಲ ಸೂಚಿಸಿದ್ದೆ ಎಂದಿದ್ದಾರೆ.

ಅರಸು ಸಮಾಜದ ವಿರೋಧ: ಪ್ರತಿಮೆ ಸ್ಥಾಪನೆ ಹಿನ್ನೆಲೆಯಲ್ಲಿ ಅರಸು ಸಮಾಜದ ಮುಖಂಡ ಅಮರನಾಥ ರಾಜೇ ಅರಸ್ ಸುದ್ದಿಗೋಷ್ಟಿ ನಡೆಸಿ ವಿರೋಧ ವ್ಯಕ್ತಪಡಿಸಿದರು.

ಮೈಸೂರು ಅರಮನೆ ಗನ್ ಹೌಸ್ ಬಳಿ ರಾತ್ರಿ ಪ್ರತಿಮೆ ನಿರ್ಮಾಣ ಮಾಡಿದ್ದಾರೆ. ಶಿವರಾತ್ರಿ ಸ್ವಾಮಿಜಿ ಅವರ ಪುತ್ತಳಿಯನ್ನು ರಾತ್ರಿ ವೇಳೆ ಕದ್ದುಮುಚ್ಚಿ ಇಟ್ಟು ಅವಮಾನ ಮಾಡಿದ್ದಾರೆ. ಜೆಎಸ್ಎಸ್ ಸಂಸ್ಥೆಗೆ ಅವಮಾನ ಮಾಡಿದ್ದಾರೆ. ಯಾವುದೇ ಸ್ಪಷ್ಟ ದಾಖಲಾತಿ ಇಲ್ಲದೆ ಮೈಸೂರಿಗೆ ಅವಮಾನ ಮಾಡುವ ಕೆಲಸ ಮಾಡಿದ್ದಾರೆ ಎಂದರು.

ಇದನ್ನೂ ಓದಿ:New year celebration: ಬೆಂಗಳೂರಿನಲ್ಲಿ ಈ ಬಾರಿ ನಿರ್ಬಂಧ ಹಾಕುವ ಆಲೋಚನೆ ಇಲ್ಲ; ಆಯುಕ್ತ

Advertisement

ಶ್ರೀಕಂಠದತ್ತ ಒಡೆಯರ ಪ್ರತಿಮೆ ನಿರ್ಮಾಣ ಮಾಡಬೇಕು. ರಾಜ ಮನೆತನದವರ ಪುತ್ಥಳಿ ಇಡಲಾಗದು ಎಂದರೆ ಚಾಮುಂಡೇಶ್ವರಿ ಪ್ರತಿಮೆ ಇಡಬೇಕು. ಇಲ್ಲದಿದ್ದಲ್ಲಿ ಪುತ್ಥಳಿ ಇಡುವುದಕ್ಕೆ ಬಿಡುವುದಿಲ್ಲ ಪ್ರತಿಭಟನೆ ಮಾಡುತ್ತೇವೆ. ಇಲ್ಲಿ ಸುಪ್ರೀಂ ಕೋರ್ಟ್‌ನ ಆದೇಶ ಪಾಲನೆ ಮಾಡಿಲ್ಲ. ನಾವು ನ್ಯಾಯುತವಾಗಿ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.

ಮಠ ಬೆಳೆದಿರುವುದು ಅರಮನೆಯಿಂದ ಹೊರತು ಮಠದಿಂದ ಅರಮನೆ ಬೆಳೆದಿಲ್ಲ. ಮೈಸೂರು ರಾಜರು ಮಾಡಿರುವ ಆಸ್ತಿ. ಪುತ್ಥಳಿ ಹಾಕಿರುವರ ಬಳಿ ದಾಖಲೆಯಿಲ್ಲ. ಮಠದವರು ಬಂದು ದೈರ್ಯದಿಂದ ಹೇಳಬೇಕಿತ್ತು, ಕದ್ದು ಹಾಕುವುದು ಏನಿತ್ತು. ಅರಮನೆಗೆ ಮೋಸವಾಗುತ್ತಿದೆ. ವ್ಯಾಜ್ಯಾ ಕೋರ್ಟ್‌ನಲ್ಲಿದೆ. ಕೋರ್ಟ್ ಆದೇಶ ಬಂದರೆ ಯಾವುದೇ ಪುತ್ಥಳಿ ನಿರ್ಮಾಣಕ್ಕೆ ನಾವು ಒಪ್ಪಿಕೊಳ್ಳುತ್ತೇವೆ ಎಂದು ಅರಸು ಮಂಡಳಿ ಮುಖಂಡರಾದ ಶ್ರೀಧರ್ ರಾಜ್ ಅರಸು, ಶ್ರೀಕಾಂತ್ ರಾಜ್ ಅರಸು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next