Advertisement

ಬಹಿರಂಗ ಚರ್ಚೆಗೆ ಪ್ರತಾಪಸಿಂಹ ಗೈರು: ಟೀಕಾ ಪ್ರಹಾರ

04:23 PM Sep 06, 2021 | Team Udayavani |

ಮೈಸೂರು: ಮೈಸೂರು-ಬೆಂಗಳೂರುನಡುವಿನ ದಶಪಥ ಕಾಮಗಾರಿ ಯಾರಕೊಡುಗೆ ಎಂಬುದನ್ನು ತಿಳಿಯಲುಏರ್ಪಡಿಸಿದ್ದ ಬಹಿರಂಗ ಚರ್ಚೆಗೆಸಂಸದ ಪ್ರತಾಪಸಿಂಹ ಬಾರದೆಪಲಾಯನ ಮಾಡಿದ್ದಾರೆ. ಅವರಿಗೆ ನಿಜವಾಗಲೂ ತಾಕತ್ತಿದ್ದರೆ ದಾಖಲೆಸಮೇತ ಚರ್ಚೆಗೆ ಬರಲಿ. ಅವರು ಸತ್ಯಒಪ್ಪಿಕೊಳ್ಳುವವರೆಗೂ ನಿರಂತರವಾಗಿಹೋರಾಟ ಮುಂದುವರಿಯುತ್ತದೆಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್‌ ವಾಗ್ಧಾಳಿ ನಡೆಸಿದರು.

Advertisement

ಭಾನುವಾರ ನಗರದ ಪತ್ರಕರ್ತರಭವನದಲ್ಲಿ ಆಯೋಜಿಸಿದ್ದ ಬಹಿರಂಗಚರ್ಚೆಯಲ್ಲಿ ಪ್ರತಾಪಸಿಂಹ ಗೈರಾದಹಿನ್ನೆಲೆ ಖಾಲಿ ಕುರ್ಚಿಗೆ ಸಂಸದಪ್ರತಾಪಸಿಂಹ ನಾಮಫ‌ಲಕ ಹಾಕಿಮಾತನಾಡಿದ ಕೆಪಿಸಿಸಿ ವಕ್ತಾರಎಂ.ಲಕ್ಷಮಣ್‌, ಸಂವಾದಕ್ಕೆ ಆಹ್ವಾನಿಸಿದನಮಗೆ ವ್ಯಂಗ್ಯವಾಗಿ ಸಂಸದರು ಪತ್ರಬರೆದಿದ್ದಾರೆ. ಅಧಿಕಾರದ ಮದದಲ್ಲಿಅವರು ತೇಲುತ್ತಿದ್ದಾರೆ ಎಂದುಕಿಡಿಕಾರಿದರು.

8 ಪೈಸೆಯನ್ನೂ ನೀಡಿಲ್ಲ ಎಂದರೆ ಹೇಗೆ?: ಸಂಸದರಿಗೆ ಮೂರು ಪತ್ರಬರೆದ ಬಳಿಕ ಉತ್ತರಿಸಿದ್ದಾರೆ. ಅದೂಕೂಡ ವ್ಯಂಗ್ಯವಾಗಿ ಪತ್ರ ಬರೆದಿದ್ದಾರೆ.ಯಾರೂ ಅವರನ್ನು ಪ್ರಶ್ನಿಸುವಂತಿಲ್ಲ. ಅವರೇ ವೀರಾಧಿವೀರ. 40 ಸಾವಿರಕಿ.ಮೀ.ಉದ್ದದ ರಸ್ತೆಗೆ ಸಿದ್ದರಾಮಯ್ಯಸರ್ಕಾರದಅವಧಿಯಲ್ಲಿಅನುಮೋದನೆಆಗಿತ್ತು. ಆದರೆ, ನೀವು ಜನರ ದಿಕ್ಕುತಪ್ಪಿಸಿ, ಬಿಟ್ಟಿ ಪ್ರಚಾರತೆಗೆದುಕೊಳ್ಳುತ್ತಿದ್ದೀರಿ. ಕಾಂಗ್ರೆಸ್‌ಸರ್ಕಾರ ಈ ಯೋಜನೆಗಾಗಿ 1,600ಕೋಟಿ ರೂ. ನೀಡಿದೆ.  ಆದರೆ, 8ಪೈಸೆಯನ್ನೂ ನೀಡಿಲ್ಲ ಎಂದರೆ ಹೇಗೆ ಎಂದು ಪ್ರಶ್ನಿಸಿದರು.

ಸುಳ್ಳುಗಾರರು: ಕೆಪಿಸಿಸಿ ವಕ್ತಾರೆಮಂಜುಳಾ ಮಾನಸ ಮಾತನಾಡಿ,ಸಂಸದ ಪ್ರತಾಪ ಸಿಂಹ ಅವರು ಒಳ್ಳೆಬರಹಗಾರರು ಆಗಿರುವಂತೆ ಒಳ್ಳೆಯಸುಳ್ಳುಗಾರ ಕೂಡ ಎಂದು ಟೀಕಿಸಿದರು.ಸುದ್ದಿಗೋಷ್ಠಿಯಲ್ಲಿ ನಗರ ಕಾಂಗ್ರೆಸ್‌ಅಧ್ಯಕ್ಷ ಆರ್‌.ಮೂರ್ತಿ, ಕಾರ್ಯದರ್ಶಿಶಿವಣ್ಣ, ಸೇವಾದಳದ ಸಂಚಾಲಕಗಿರೀಶ್‌ ನಾಯ್ಕ, ಮುಖಂಡ ರಾಮಪ್ಪಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next