Advertisement
ಕೊಡಗಿನ ಬ್ರಹ್ಮಗಿರಿ ತಪ್ಪಲಿನ ಇರ್ಪುವಿನಲ್ಲಿ ಹುಟ್ಟಿ ನಾಗರಹೊಳೆ ಉದ್ಯಾನವನದ ಮೂಲಕ ಹಾಯ್ದು ಹನಗೋಡಿಗೆ ಸಮೀಪದ ಕೊಳವಿಗೆ ಬಳಿಯಿಂದ ಹರಿದು ಬರುವ ಲಕ್ಷ್ಮಣತೀರ್ಥ ನದಿಯ ನೀರು ಜೂನ್ ಮಾಹೆಯಲ್ಲಿ ಕಟ್ಟೆ ಮೇಲೆ ಅಲ್ಪ ಪ್ರಮಾಣದ ನೀರು ಉರುಳಿತ್ತಾದರೂ ನಂತರದಲ್ಲಿ ಮಳೆ ಕೊರತೆಯಿಂದ ಅಣೆಕಟ್ಟಿನ ಮೇಲೆ ನೀರಿನ ಹರಿವು ಸಂಪೂರ್ಣ ನಿಂತು ಹೋಗಿತ್ತು. ವಾರದಿಂದ ಬೀಳುತ್ತಿರುವ ಮಳೆಯಿಂದಾಗಿ ಲಕ್ಷ್ಮಣತೀರ್ಥ ನದಿ, ಸಾರಥಿ ಹಾಗೂ ನಾಗರಹೊಳೆ ನದಿಗಳ ನೀರಿನ ಹರಿವು ಸೇರಿಕೊಂಡು ಇದೀಗ ಲಕ್ಷ್ಮಣತೀರ್ಥ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿ ಅಣೆಕಟ್ಟೆಯಿಂದ ದುಮ್ಮಿಕ್ಕುತ್ತಿದ್ದು ಕೆ.ಆರ್.ಎಸ್.ಒಡಲು ಸೇರುತ್ತಿದೆ.
Related Articles
Advertisement
ನಾಲೆಯಲ್ಲಿ ನೀರು ಹರಿಸುತ್ತಿರುವುದರಿಂದ ರೈತರು ಕೃಷಿ ಚಟುವಟಿಕೆ ಆರಂಭಿಸಿದ್ದು, ಭತ್ತದ ಸಸಿ ಮಡಿಗಾಗಿ ಗದ್ದೆಯನ್ನು ಅಣಿಗೊಳಿಸುತ್ತಿದ್ದಾರೆ.
ಇದನ್ನೂ ಓದಿ : ಮೂರನೇ ಅಲೆಯನ್ನು ನಿಭಾಯಿಸಲು ಸರ್ಕಾರ ಸರ್ವ ಸನ್ನದ್ಧ: ಕಂದಾಯ ಸಚಿವ ಆರ್ ಅಶೋಕ್