Advertisement

ಮೈಸೂರು ಪಾಲಿಕೆ ವಾರ್ಡ್-36 ಉಪಚುನಾವಣೆ: ಕಾಂಗ್ರೆಸ್ ನ ರಜನಿ ಅಣ್ಣಯ್ಯ ಗೆಲುವು

10:52 AM Sep 06, 2021 | Team Udayavani |

ಮೈಸೂರು: ಮಹಾನಗರ ಪಾಲಿಕೆಯ ವಾರ್ಡ್ ನಂಬರ್ 36ರ ಉಪಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ಕಾಂಗ್ರೆಸ್ ನ ರಜನಿ ಅಣ್ಣಯ್ಯ ಗೆಲುವು ಸಾಧಿಸಿದ್ದಾರೆ.

Advertisement

ಆರಂಭದಿಂದಲೂ ಮುನ್ನಡೆ ಕಾಯ್ದುಕೊಂಡು ಬಂದ ರಜನಿ ಅಣ್ಣಯ್ಯ ಒಟ್ಟು 1,997 ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದರು.

ಚುನಾವಣಾ ಕಣದಲ್ಲಿ ಜೆಡಿಎಸ್ ಅಭ್ಯರ್ಥಿ ಲೀಲಾವತಿ, ಬಿಜೆಪಿಯಿಂದ ಶೋಭಾ ಸ್ಪರ್ಧಿಸಿದ್ದರು. ಅಂತಿಮವಾಗಿ ಕಾಂಗ್ರೆಸ್ ನ ಸಿ ಎಸ್ ರಜನಿ ಅಣ್ಣಯ್ಯ ಒಟ್ಟು 4,113 ಮತಗಳನ್ನು ಪಡೆದರೆ, ಜೆಡಿಎಸ್ ನ ಎಸ್ ಲೀಲಾವತಿ ಅವರಿಗೆ ಒಟ್ಟು 2,116 ಮತಗಳು ಲಭ್ಯವಾದವು. ಬಿಜೆಪಿಯ ಪಿ ಶೋಭಾಗೆ ಒಟ್ಟು 601 ಮತಗಳಷ್ಟೇ ಲಭ್ಯವಾಯಿತು.

ಇದನ್ನೂ ಓದಿ:ಬೆಳಗಾವಿ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಬಿಜೆಪಿ ತೆಕ್ಕೆಗೆ ಬಹುತೇಕ ಖಚಿತ

ಈ ಹಿಂದೆ 36ನೇ ವಾರ್ಡ್ ಜೆಡಿಎಸ್ ತೆಕ್ಕೆಯಲ್ಲಿತ್ತು. ಇದೀಗ ಉಪಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next