Advertisement
ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವ (ಇಫಿ)ದಲ್ಲಿ ಎನ್ ಎಫ್ ಡಿಸಿ ಯ ಫಿಲ್ಮ್ ಬಜಾರ್ (ಚಲನಚಿತ್ರ ಸಂತೆ) ಗೆ ಭೇಟಿ ನೀಡಿದಾಗ ಉದಯವಾಣಿಯೊಂದಿಗೆ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದವರು ಅಭಿಷೇಕ್.
ಚಿತ್ರದ ಬಗ್ಗೆ ಕೇಳಿದಾಗ, ಇದು ಸೈನ್ಸ್ ಫಿಕ್ಷನ್ ಫಿಲ್ಮ್. ನನಗೆ ಮೊದಲಿನಿಂದಲೂ ನಾಟಕ ಇತ್ಯಾದಿಗಳಲ್ಲಿ ತೊಡಗಿಕೊಂಡವನು. ಇದರೊಂದಿಗೆ ನನಗೆ ಕಥೆ ಹೇಳುವುದೆಂದರೆ ಬಹಳ ಇಷ್ಟ. ಅದನ್ನೇ ಈಗ ಪ್ರಯತ್ನಿಸುತ್ತಿದ್ದೇನೆ ಎಂದವರು ಅಭಿಷೇಕ್.
Related Articles
Advertisement
ಇಂಥ ಸಿನಿಮಾಗಳು ಯಶಸ್ವಿಯಾಗಬಹುದೆ ಎಂಬ ಪ್ರಶ್ನೆ ಇದ್ದೇ ಇದೆ. ಅದಕ್ಕೆ ನನ್ನ ಉತ್ತರವೆಂದರೆ, ನಿಜ. ಸೈನ್ಸ್ ಫಿಕ್ಷನ್ ಅನ್ನು ನೋಡುವವರು ಇದ್ದಾರೆಯೇ ಎಂಬುದಕ್ಕಿಂತ ಭವಿಷ್ಯದ ನೆಲೆಯಲ್ಲಿ ಯೋಚಿಸಬೇಕು. ಇಂದು ಇಂಥ ಪ್ರೇಕ್ಷಕರು ಇರದಿರಬಹುದು. ಅದರೆ ಮುಂದೊಂದು ದಿನಕ್ಕೆ ಆಂಥ ಪ್ರೇಕ್ಷಕರನ್ನು ರೂಪಿಸಬೇಕಾದರೆ ಇಂದು ಪ್ರಯತ್ನಿಸಬೇಕು. ಅದು ನಾನು ಮಾಡುತ್ತಿದ್ದೇನೆ. ನಿಜ, ಮಾರುಕಟ್ಟೆಯನ್ನು ತಲುಪುವುದು, ವೀಕ್ಷಕರನ್ನು ತಲುಪುವುದು ಕಷ್ಟದ ಸಂಗತಿ ಅಥವ ನಿಧಾನವಾಗಬಹುದು. ಅದರೂ ಅದು ನಮ್ಮ ಕೆಲಸವನ್ನು ನಿಲ್ಲಿಸಬಾರದು. ಆ ಕೆಲಸ ಇಂದು ನಾನು ಮಾಡುತ್ತಿದ್ದೇನೆ, ಆಷ್ಟೇ ಎಂದದ್ದು ಅಭಿಷೇಕ್.
ನಮ್ಮ ಪ್ರೇಕ್ಷಕರನ್ನು ರೂಪಿಸಿಕೊಳ್ಳುವ ಕೆಲಸ ಆರಂಭಿಸುತ್ತಿದ್ದೇನೆ. ನಮ್ಮಲ್ಲೇ ಸಾವಿರಾರು ಕಥೆಗಳಿವೆ. ಅವೆಲ್ಲವೂ ಹೊಸ ತಲೆಮಾರಿಗೆ ರವಾನೆಯಾಗಬೇಕಂಥವು. ಅದರೆ ಆವೆಲ್ಲವುಗಳನ್ನೂ ಹೊಸ ಪೀಳಿಗೆಗೆ ಇಷ್ಟವಾಗುವಂತೆ ಮಾಡಬೇಕು.
ಹೌದು, ನಾನು ತೆಗೆದುಕೊಂಡಿರುವುದು ದೊಡ್ಡ ಮಟ್ಟದ ರಿಸ್ಕ್. ಮಧ್ಯಮವರ್ಗದವನಾಗಿ, ಎರಡು ವರ್ಷಗಳ ಹಿಂದೆ ಕೆಲಸ ಬಿಟ್ಟು ಸಿನಿಮ ಮಾಡಲು ಪ್ರಯತ್ನಿಸುತ್ತಿದ್ದೇನೆ. ಅದರೂ ಶೇಕಡ ನೂರರಷ್ಟು ಇರಬೇಕಿದ್ದ ಒತ್ತಡವನ್ನು ಕಡಿಮೆಗೊಳಿಸಿಕೊಳ್ಳಲು ಕೆಲವು ತಂತ್ರ/ಉಪಾಯ ಪಡೆದುಕೊಂಡಿದ್ದೇನೆ. ಅದೆಂದರೆ ಈ ಸಿನಿಮವನ್ನು ನಾನೊಬ್ಬನೇ ನಿರ್ಮಿಸುತ್ತಿಲ್ಲ. ಬಹು ವಿಧಗಳಲ್ಲಿ ನಿಧಿ ಸಂಗ್ರಹಿಸುತ್ತಿದ್ದೇವೆ. ಹಾಗಾಗಿ ಬಹು ನಿರ್ಮಾಪಕರು. ಇದು ನಮ್ಮ ಒತ್ತಡವನ್ನು ಕಡಿಮೆ ಮಾಡುತ್ತದೆ ಎಂಬುದು ಆಭಿಷೇಕ್ ರ ಅನಿಸಿಕೆ.
ನಮಗೆ ಪ್ರೇಕ್ಷಕರಿದ್ದಾರೆ, ಅವರನ್ನು ಹುಡುಕಿಕೊಳ್ಳುವ ಕೆಲಸ ನಾವೇ ಮಾಡಬೇಕು. ನಗರದ ಜನರು ಹಾಗೂ ಟೆಕಿ ಕ್ರೌಡ್ ನ್ನು ನಿಜವಾಗಿಯೂ ಸಿನಿಮಾ ನಿರ್ದೇಶಕರು ತಲುಪಿಲ್ಲ. ಆದು ನಿಧಿಯಿದ್ದಂತೆ. ಅವರಿಗೆ ಒಳ್ಳೆಯ ಕನ್ನಡ ಸಿನಿಮಾಗಳ ಕೊರತೆ ಮತ್ತು ಅಲಭ್ಯತೆ ಇರುವುದರಿಂದ ಬಾಲಿವುಡ್, ಹಾಲಿವುಡ್ ನ ಹಿಂದೆ ಬಿದ್ದಿದ್ದಾರೆ. ಅವರಿಗೆ ಒಳ್ಳೆಯ ಸಿನಿಮಾ ಕೊಟ್ಟರೆ ಖಂಡಿತಾ ನಮ್ಮೊಡನೆ ಬಂದಾರು. ನಾನು ಆಶಾವಾದಿ. ಅದ ಕಾರಣ ಹೊಸ ಸಾಧ್ಯತೆ, ಸವಾಲಿನತ್ತ ಮಾತ್ರ ಗಮನಹರಿಸುತ್ತೇನೆ.
ಮೈಸೂರು ಮಸಾಲಾ ಚಿತ್ರ ಬಹುತೇಕ ಪೂರ್ಣಗೊಂಡಿದೆ. ನಿರ್ಮಾಣೋತ್ತರ ಕೆಲಸಗಳು ಪ್ರಗತಿಯಲ್ಲಿವೆ.