Advertisement
ಜೆ.ಎಸ್.ಎಸ್. ಮೆಡಿಕಲ್ ಸೂಪರಿಂಟೆಂಡೆಂಟ್ ಡಾ. ಮಧು ಮಾತನಾಡಿ, ಪ್ರಧಾನಿ ಸಹೋದರ ಪ್ರಯಾಣಿಸುತ್ತಿದ್ದ ಕಾರು ಅಪಘಾತವಾಗಿ ಐದು ಮಂದಿ ಅಸ್ಪತ್ರೆಗೆ ದಾಖಲಾದರು. ಎಲ್ಲರಿಗೂ ಸೂಕ್ತ ಚಿಕಿತ್ಸೆ ನೀಡಿದ್ದೇವೆ. ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮೊಮ್ಮಗ ಆರು ವರ್ಷದ ಬಾಲಕನ ತಲೆಯ ಎಡಭಾಗದ ಎಲುಬಿಗೆ ಪೆಟ್ಟಾಗಿದೆ. ಅವರೊಬ್ಬರಿಗೆ ಮಾತ್ರ ಹೆಚ್ಚು ಗಾಯಗಳಾಗಿತ್ತು. ಎಲ್ಲರಿಗೂ ಎಲ್ಲಾ ರೀತಿಯ ಪರೀಕ್ಷೆಗಳನ್ನು ಮಾಡಿಸಲಾಗಿದೆ. ಯಾರಿಗೂ ಯಾವುದೇ ಆತಂಕಪಡುವಂತಹ ಗಾಯಗಳಾಗಿಲ್ಲ ಎಂದರು.
Related Articles
Advertisement
ಅಪಘಾತದ ಕುರಿತು ಸಂಸದ ಪ್ರತಾಪ್ ಸಿಂಹ ಮಾತನಾಡಿ, ಕಾರಿನಲ್ಲಿ ಐದು ಮಂದಿ ಪ್ರಯಾಣಿಸುತ್ತಿದ್ದರು. ಕಾರು ಚಾಲಕನಿಗೆ ನಿದ್ರೆಯ ಮಂಪರು ಬಂದಂತಾದ ಕಾರಣ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ. ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಗುವಿನ ಕಾಲಿಗೆ ಫ್ರಾಕ್ಚರ್ ಆಗಿದೆ ಎಂದರು.