ಹುಣಸೂರು: ನಾಗರಹೊಳೆ ಉದ್ಯಾನದಂಚಿನ ತಾಲೂಕಿನ ನೇರಳಕುಪ್ಪೆಯಲ್ಲಿ ಬಹುದಿನಗಳ ನಂತರ ಒಂಟಿ ಸಲಗ ಮತ್ತೆ ದಾಂಗುಡಿ ಇಟ್ಟಿದ್ದು, ಅಪಾರ ಬೆಳೆ ನಷ್ಟ ಮಾಡಿದೆ.
ಗ್ರಾಮದ ಮುಖ್ಯರಸ್ತೆ ಬಳಿಯೇ ಇರುವ ಗುರುರಾಜ್, ಶ್ರೀನಿವಾಸ್ ಎಂಬವರಿಗೆ ಸೇರಿದ ಬಾಳೆ ಬೆಳೆಯನ್ನು ತಿಂದು ತುಳಿದು ನಾಶಪಡಿಸಿದ್ದರೆ, ತೆಂಗು-ಕಾಫಿ ಗಿಡಗಳನ್ನು ಸಿಗಿದು ಹಾಕಿದೆ.
ಇದನ್ನೂ ಓದಿ : ನರೇಗಾದಲ್ಲಿ ಹಳ್ಳಿಗಳ ಅಭಿವೃದ್ದಿಪಡಿಸಿಕೊಳ್ಳಿ : ಶಾಸಕ ಮಂಜುನಾಥ್
ಲೋಕೇಶ್,ನಾಗರಾಜ್, ಕಮಲಮ್ಮರಿಗೆ ಸೇರಿದ ಶುಂಠಿ ಬೆಳೆಯನ್ನು ಸ್ಪಿಂಕ್ಲರ್ ಸೆಟ್ಟನ್ನು ತುಳಿದು ನಾಶಪಡಿಸಿದೆ. ಅಲ್ಲದೆ ಶಂಕರ್ ಶಗ್ರಿತ್ತಾಯರಿಗೆ ಸೇರಿದ ಮಾವು, ಹಲಸು ಹಾಗೂ ಬಾಳೆ ಬೆಳೆಯನ್ನು ತಿಂದು ಹಾಳು ಮಾಡಿ. ಬೆಳಗಾಗುವಷ್ಟರಲ್ಲಿ ಮತ್ತೆ ಕಾಡು ಸೇರಿಕೊಂಡಿದೆ.
ಆಗಾಗ್ಗೆ ಉದ್ಯಾನದಿಂದ ಹೊರಬಂದು ರೈತರ ಬೆಳೆಗಳನ್ನು ನಾಶಪಡಿಸುವ ಈ ಸಲಗದ ಕಾಟದಿಂದ ರೈತರು ಸಂಕಷ್ಟ ಅನುಭವಿಸುತ್ತಿದ್ದು, ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ ಕೊಡುವ ಜೊತೆಗೆ ಒಂಟಿಸಲಗದ ಹಾವಳಿ ತಡೆಗಟ್ಟುವಂತೆ ರೈತರು ಆಗ್ರಹಿಸಿದ್ದಾರೆ.
ಇನ್ನು, ಸ್ಥಳಕ್ಕೆ ಡಿ ಆರ್ ಎಫ್ ಓಗಳಾದ ವೀರಭದ್ರ, ಸಿದ್ದರಾಜು ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಮಹಜರ್ ನಡೆಸಿದರು.
ಇದನ್ನೂ ಓದಿ : ಬಿಜೆಪಿಯಲ್ಲಿನ ಗೊಂದಲಗಳ ಕುರಿತು ಚರ್ಚಿಸಲು ಶೀಘ್ರವೇ ರಾಜ್ಯಕ್ಕೆ ಅರುಣ್ ಸಿಂಗ್ ಆಗಮನ