ಹುಣಸೂರು: ನಾಗರಹೊಳೆ ಹೆಬ್ಬಾಗಿಲು ವೀರನಹೊಸಹಳ್ಳಿ ಗೇಟ್ ಬಳಿಯಲ್ಲಿ ಬುಧವಾರ (ಆ.21) ಸಚಿವರಾದ ಎಚ್.ಸಿ. ಮಹದೇವಪ್ಪ, ಕೆ.ವೆಂಕಟೇಶ್, ಈಶ್ವರ್ ಖಂಡ್ರೆ ಸಾಂಸ್ಕೃತಿಕ ಕಲರವಗಳ ನಡುವೆ ಗಜ ಪಯಣಕ್ಕೆ ಚಾಲನೆ ನೀಡಿದರು.
ಮೊದಲಿಗೆ ವೀರನಹೊಸಹಳ್ಳಿ ಗೇಟ್ ಎದುರಿನ ದೇವಾಲಯದಲ್ಲಿ ಅರ್ಚಕರು ಪೂಜೆ ಸಲ್ಲಿಸಿದ ನಂತರ ಗಜಪಡೆಗೆ ಪೂಜೆ ಸಲ್ಲಿಸಲಾಯಿತು.
ಆನಂತರ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ.ಮಹದೇವಪ್ಪ, ಪಶುಸಂಗೋಪನಾ ಇಲಾಖೆ ಸಚಿವ ಕೆ.ವೆಂಕಟೇಶ್, ಅರಣ್ಯ ಸಚಿವ ಈಶ್ವರ್ ಖಂಡ್ರೆ, ಪೂಜೆ ಸಲ್ಲಿಸಿ ಕಬ್ಬು,ಬಾಳೆ ಹಣ್ಣು, ಬೆಲ್ಲ ತಿನ್ನಿಸಿದರು. ಶಾಸಕ ಜಿ.ಡಿ.ಹರೀಶ್ ಗೌಡ ಅಧ್ಯಕ್ಷತೆ ವಹಿಸಿದ್ದರು. ಸರ್ ಚಾಮರಾಜನಗರ ಸಂಸದ ಸುನಿಲ್ ಬೋಸ್ , ಶಾಸಕರಾದ ಡಿ.ರವಿಶಂಕರ್. ಅನಿಲ್ ಚಿಕ್ಕಮಾದು ಮತ್ತಿತರ ಜನಪ್ರತಿನಿಧಿಗಳು ಜಿ.ಪಂ.ಸಿಇಓ ಗಾಯಿತ್ರಿ, ಎಪಿಸಿಸಿಎಫ್ ಕುಮಾರ್ ಪುಷ್ಕರ್, ಅರಣ್ಯಾಧಿಕಾರಿಗಳಾದ ಮಾಲತಿಪ್ರಿಯಾ, ಪ್ರಾಜೆಕ್ಟ್ ಟೈಗರ್ ಹೆಡ್ ರಮೇಶ್ ಕುಮಾರ್, ಡಿಸಿಎಪ್ ಗಳಾದ ಡಾ.ಪಿ.ಎ.ಸೀಮಾ, ಐ.ಬಿ.ಪ್ರಭುಗೌಡ, ಎಸ್.ಪಿ ಹರ್ಷವರ್ಧನ್, ಎ.ಸಿ.ವಿಜಯಕುಮಾರ್, ಡಿವೈಎಸ್ ಪಿ ಗೋಪಾಲಕೃಷ್ಣ, ತಹಶೀಲ್ದಾರ್ ಮಂಜುನಾಥ್ ಸೇರಿದಂತೆ ಹಲವಾರು ಅಧಿಕಾರಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಕಾರ್ಯಕ್ರಮಕ್ಕೆ ಸಾವಿರಾರು ಮಂದಿ ಸಾರ್ವಜನಿಕರು ಸಾಕ್ಷಿಯಾಗಿ ಗಜಪಯಣವನ್ನು ಕಣ್ತುಂಬಿಕೊಂಡರು.