Advertisement
ಇಂತಹ ದಸರೆ ಆರಂಭವಾಗಿದ್ದು ವಿಜಯನಗರ ಸಾಮ್ರಾಜ್ಯದಲ್ಲಿ ಎನ್ನುವುದು ವಿಶೇಷ. 14 ಮತ್ತು 15ನೇ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯದ ರಾಜಧಾನಿ ಯಾಗಿದ್ದ ಹಂಪೆಯಲ್ಲಿ ದಸರೆ ನಡೆಯುತ್ತಿದ್ದ ಬಗ್ಗೆ ಪುರಾವೆಗಳಿವೆ. ಶ್ರೀ ಕೃಷ್ಣದೇವರಾಯರ ಕಾಲದಲ್ಲಿ ವಿಜಯ ದಶಮಿ ಮಹೋತ್ಸವ ಉತ್ತುಂಗಕ್ಕೇರಿತ್ತು. ಇಡೀ ವಿಜಯ ನಗರ ಸಾಮ್ರಾಜ್ಯದ ವೈಭೋಗ, ಸಿರಿ, ಸಂಪತ್ತು, ಕಲೆ ತೋರ್ಪಡಿಸುವ ಉತ್ಸವವಾಗಿ, ಅರಸರ ಸೈನ್ಯದ ಶೌರ್ಯ ಪ್ರದರ್ಶನದ ವೇದಿಕೆಯಾಗಿ ದಸರೆ ಆಚರಣೆ ನಡೆಯುತ್ತಿತ್ತು. ಇದರಲ್ಲಿ ಆನೆಗಳು, ಅಶ್ವಗಳು, ಶಸ್ತ್ರಸಜ್ಜಿತ ಸೈನಿಕರು ಭಾಗವಹಿಸು ತ್ತಿದ್ದರು. ಈಗಿನ ದಸರೆ ಸಹ ಬಹುಭಾಗವಾಗಿ ಇದನ್ನು ಉಳಿಸಿ ಕೊಂಡು ಕಾಲಕಾಲಕ್ಕೆ ಸುಧಾರಣೆಗೊಳ ಗಾಗಿ ಮುಂದುವರೆದಿದೆ.
Related Articles
ದಸರೆ ಎಷ್ಟರಮಟ್ಟಿಗೆ ಜನ ಮುಖೀಯಾಗಿದೆ ಎಂದರೆ ಮೈಸೂರಿನಲ್ಲಿ ದಸರೆಯ ಹತ್ತು ದಿನಗಳು ಕೂಡ ಬಗೆ ಬಗೆಯ ದಸರೆಗಳು ನಡೆಯುತ್ತವೆ. ಚಿಣ್ಣರ ದಸರಾ, ಯುವದಸರಾ, ರೈತದಸರಾ, ಮಹಿಳಾ ದಸರಾ, ಆರೋಗ್ಯಕ್ಕಾಗಿ ಯೋಗದಸರಾ ಹೀಗೆ ವಿವಿಧ ಆಯಾಮಗಳಲ್ಲಿ ದಸರೆ ಕಾರ್ಯಕ್ರಮಗಳು ನಡೆದು ದಸರೆ ಜನಮುಖಿಯಾಗಿದೆ.
Advertisement
ಇತಿಹಾಸದ ಪುಟಗಳಲ್ಲಿ ಮೈಸೂರಿನ ವರ್ಣನೆ!: ಮೈಸೂರಿನ ಅರಸರ ಇತಿಹಾಸ, ದಸರೆ ವರ್ಣ ನೆಗೆ ಮುನ್ನ ಮೈಸೂರು ಇತಿಹಾಸ ತಿಳಿಯಲೇಬೇಕು. ವಿಶ್ವದ ಭೂಪಟದಲ್ಲಿ ಇಂದು ಮೈಸೂರಿಗೆ ಸ್ಥಾನಮಾನ ಇದ್ದರೆ ಅದು ಮೈಸೂರಿನ ಸಾಂಸ್ಕೃತಿಕ ಶ್ರೀಮಂತಿಕೆಯಿಂದಾಗಿ. ಇಂತಹ ಸಾಂಸ್ಕೃತಿಕ ಶ್ರೀಮಂತಿಕೆ ಒಂದೇ ದಿನಕ್ಕೆ ಬಂದಿದ್ದಿಲ್ಲ, ಅದು ನೂರಾರು ವರ್ಷಗಳಿಂದ ನಡೆದು ಕೊಂಡು ಬಂದಿರುವ ಸಾಂಸ್ಕೃತಿಕ ಬಳುವಳಿ ಆಗಿದೆ. ಆದ್ದರಿಂದಲೇ ಕರ್ನಾಟಕದ ಸಾಂಸ್ಕೃತಿಕ ರಾಜಧಾನಿಯಾಗಿ ಮೈಸೂರು ಪ್ರಸಿದ್ಧಿ ಪಡೆದಿದೆ.
ಇತಿಹಾಸದ ಪುಟಗಳನ್ನು ತಿರುವಿ ಹಾಕಿದಾಗ ಮೈಸೂರಿನ ಕುರಿತು ನಮಗೆ ಸಾಮ್ರಾಟ ಅಶೋಕನ ಕಾಲದಿಂದಲೂ ಮಾಹಿತಿ ಸಿಗುತ್ತದೆ. ಅಶೋಕನ ಕಾಲದಲ್ಲಿ ಮೈಸೂರನ್ನು ಮಹಿಷ ಮಂಡಲ ಎಂದು ಕರೆಯಲಾಗುತ್ತಿತ್ತು. ಬೌದ್ಧ ಧರ್ಮದ ಪ್ರಚಾರಕ್ಕಾಗಿ ಮಹದೇವನನ್ನು ಮಹಿಷಮಂಡಲಕ್ಕೆ ಅಶೋಕ ಕಳುಹಿಸಿದನು ಎಂಬ ಮಾಹಿತಿಯು ಬೌದ್ಧ ಧರ್ಮ ಗ್ರಂಥಗಳಾದ ಮಹಾವಂಸ ಮತ್ತು ದೀಪವಂಸಗಳಲ್ಲಿ ಉಲ್ಲೇಖೀಸಲಾಗಿದೆ. ಪುರಾತನ ಗ್ರೀಕ್‌ಭೂಗೋಳತಜ್ಞ ಟಾಲೇಮಿ ಮೈಸೂರನ್ನು “ಪನೌ°ಟ” ಎಂದು ಕರೆದಿ ದ್ದಾರೆ. ಇನ್ನೂ ಪುರಾತತ್ವ ಇಲಾಖೆಗಳಿಗೆ ದೊರೆತಿರುವ ಶಾಸನ ಗಳಲ್ಲಿ ಮೈಸೂರು ಪ್ರಾಂತ್ಯವನ್ನು “ಮೈಷೂರು, ಮಹಿ ಷೂರು, ಮಹಿಷಪುರ, ಮಹಿಷೂರಪುರ, ಮೈಸೂನಾಡು ಎಂದು ಬಣ್ಣಿಸಲಾಗಿದೆ.
ಕರ್ನಾಟಕಕ್ಕೆ ಗಡಿಯನ್ನು ಹಂಚಿಕೊಂಡಿರುವ ತಮಿಳು ನಾಡಿನ ಪುರಾತನ ಸಾಹಿತ್ಯದಲ್ಲಿ ಮೈಸೂರು ಕುರಿತು ಉಲ್ಲೇಖವಿದ್ದು, “ಎರುಮೈನಾಡು ಎಂದು ಕರೆ ಯಲಾಗಿದೆ. 21ನೇ ಶತಮಾನದ ಬಳಿಕ ಮೈಸೂರು ಹೆಸರು ಬಹುತೇಕ ಚಾಲನೆಗೆ ಬಂದಿದ್ದು ಇತಿಹಾಸದ ಪುಟಗಳಿಂದ ತಿಳಿದು ಬರುತ್ತದೆ. 4ನೇ ಶತಮಾನದಿಂದ ಗಂಗರು ತಲಕಾಡು ಕೇಂದ್ರವನ್ನಾಗಿಸಿಕೊಂಡು ಅಳ್ವಿಕೆ ನಡೆಸಿದರೆ, ಗಂಗರನ್ನು ಸೋಲಿಸಿದ ಚೋಳರು ಮಹಿಷಾಪುರವನ್ನು ಚೋಳ ಮಂಡಲಕ್ಕೆ ಸೇರಿಸಿಕೊಂಡು ತಲಕಾಡನ್ನು ರಾಜರಾಪುರ ಎಂದು ಮರುನಾಮಕರಣ ಮಾಡಿ ಆಳ್ವಿಕೆ ನಡೆಸುತ್ತಾರೆ. ಚೋಳರ ಬಳಿಕ ವಿಜಯನಗರ ಅರಸರು ಮೈಸೂರು ಆಳ್ವಿಕೆ ನಡೆಸಿದರು. ಯದು ವಂಶ ಉದಯವಾದ ಬಳಿಕ 13ನೇ ಶತಮಾನದಿಂದ ಯದು ವಂಶದ ಅರಸರು ಮೈಸೂರಿನ ಅಳ್ವಿಕೆ ನಡೆಸುತ್ತ ಬಂದಿರುತ್ತಾರೆ.
– ಮೈಸೂರು ಸುರೇಶ್